ಕೊಡಗು ಪ್ರೀಮಿಯರ್ ಲೀಗ್ ವಾಲಿಬಾಲ್ ಪಂದ್ಯಾಟ ಮುಂದೂಡಿಕೆ.
ಚೆಟ್ಟಳ್ಳಿ:ಮೂರ್ನಾಡು ಗೌತಮ್ ಫ್ರೆಂಡ್ಸ್ ವತಿಯಿಂದ ನಾಲ್ಕನೇ ವರ್ಷದ ಕೊಡಗು ಪ್ರೀಮಿಯರ್ ಲೀಗ್ ಪಂದ್ಯಾಟವು ಮಾರ್ಚ್ ೩೦ ಹಾಗೂ ೩೧ ರಂದು ನಡೆಯಬೇಕಾಗಿದ್ದು ಲೋಕಸಭಾ ಚುನಾವಣೆ ಇರುವ ಕಾರಣ , ಪಂದ್ಯಾಟವು ಏಪ್ರಿಲ್ ೨೯ ಮತ್ತು ೩೦ ರಂದು ಮೂರ್ನಾಡಿನ ಸ್ಪೋರ್ಟ್ಸ್ ಕ್ಲಬ್ ಮೈದಾನದಲ್ಲಿ ನಡೆಯಲಿದೆ ಎಂದು ಸಂಘದ ಖಜಾಂಜಿ ಅಬ್ದುರಹಮಾನ್ ತಿಳಿಸಿದ್ದಾರೆ.
ತಂಡಗಳ ಆಯ್ಕೆ ಪ್ರಕ್ತಿಯೆ ಅಂತಿಮಗೊಂಡಿದ್ದು, ೦೮ ತಂಡಗಳ ಮಾಲೀಕರು ಆಯೋಜಕರೊಂದಿಗೆ ಸಹಕರಿಸಿದ್ದಾರೆ.ಕ್ರೀಡಾಪಟುಗಳು ಸಹಾ ನಮ್ಮೊಂದಿಗೆ ಕೈಜೋಡಿಸಬೇಕಾಗಿ ಅವರು ತಿಳಿಸಿದ್ದಾರೆ.
No comments
Post a Comment