IND vs PAK: 'ಅಭಿನಂದನ್' ಕೆಣಕಿದ ಪಾಕ್​ಗೆ ಅವರದ್ದೇ ಭಾಷೆಯಲ್ಲಿ ಉತ್ತರ ನೀಡಿದ ಟೀಂ ಇಂಡಿಯಾ ಅಭಿಮಾನಿ


NEWSDESK KANNADA REPORTER 
ಭಾರತ ಮತ್ತು ಪಾಕಿಸ್ತಾನದ ನಡುವಿನ ಕ್ರಿಕೆಟ್ ಕದನಕ್ಕೂ ಮುನ್ನ ಉಭಯ ತಂಡಗಳನ್ನು ಟ್ರೋಲ್ ಮಾಡುವ ವಿಡಿಯೋಗಳು ಸಾಮಾಜಿಕ ಜಾಲತಾಣದಲ್ಲಿ ಭಾರೀ ವೈರಲ್ ಆಗಿತ್ತು. ಅದರಲ್ಲೂ ಪಾಕಿಸ್ತಾನದವರು ಭಾರತದ ವಿಂಗ್ ಕಮಾಂಡರ್ ಅಭಿನಂದನ್ ವರ್ಧಮಾನ್ ಅವರ ಲುಕ್ ಬಳಸಿ ಟೀಂ ಇಂಡಿಯಾವನ್ನು ಅಣಕಿಸಿ ವಿಡಿಯೋ ಮಾಡಿದ್ದರು.
ಪುಲ್ವಾಮಾ ದಾಳಿ ಬಳಿಕ ಪಾಕಿಸ್ತಾನ ಸೇನೆ ಭಾರತ ವಾಯುಪಡೆಯ ವಿಂಗ್​ ಕಮಾಂಡರ್​ ಅಭಿನಂದನ್​ ವರ್ಧಮಾನ್​ರನ್ನು​ ಬಂಧಿಸಿದ್ದರು. ಈ ವೇಳೆ ಪಾಕಿಸ್ತಾನ ಸೇನೆ ಅಭಿನಂದನ್​ ಅವರನ್ನು ವಿಚಾರಣೆಗೆ ಒಳಪಡಿಸಿದ್ದರು. ಈ ಸಂದರ್ಭದಲ್ಲಿ ‘ನಿಮ್ಮ ಉದ್ದೇಶವೇನು? ಟೀ ಹೇಗಿದೆ ಎಂಬಿತ್ಯಾದಿ ಪ್ರಶ್ನೆಗಳನ್ನು ಪಾಕ್​ ಅಧಿಕಾರಿಗಳು ಭಾರತೀಯ ವಿಂಗ್ ಕಮಾಂಡರ್​ ಮುಂದಿಟ್ಟಿದ್ದರು. ಆ ವಿಡಿಯೋ ಸಾಮಾಜಿಕ ಜಾಲತಾಣದಲ್ಲಿ ವೈರಲ್​ ಕೂಡ ಆಗಿತ್ತು. ಇದೇ ಮಾದರಿಯಲ್ಲಿ ವಿಡಿಯೋವನ್ನು ಸೃಷ್ಟಿಸಿ ಪಾಕ್ ಫ್ಯಾನ್ಸ್ ಭಾರತೀಯರನ್ನು ಕೆಣಕಿದ್ದರು.
ಆದರೀಗ ಇದೀಗ ಸಾಮಾಜಿಕ ಜಾಲತಾಣದಲ್ಲಿ ಫೋಟೋವೊಂದು ವೈರಲ್ ಆಗಿದೆ. ಅದು ಕೂಡ ವಿಂಗ್ ಕಮಾಂಡರ್ ಅಭಿನಂದನ್ ಅವರನ್ನು ಹೋಲುವಂತಿದೆ. ಪಾಕ್ ವಿರುದ್ಧ  ಮೊದಲ ಇನಿಂಗ್ಸ್​ನಲ್ಲಿ ಅಬ್ಬರಿಸಿ ಬ್ಯಾಟ್ ಮೇಲೆತ್ತಿದ್ದ ರೋಹಿತ್ ಶರ್ಮಾರನ್ನು ಅಭಿನಂದನ್​ ಲುಕ್​ನಲ್ಲಿ ತೋರಿಸಲಾಗಿದೆ.  113 ಎಸೆಗಳಲ್ಲಿ 140 ರನ್ ಸಿಡಿಸಿರುವ ರೋಹಿತ್ ಶರ್ಮಾ ಮುಖಕ್ಕೆ ಅಭಿನಂದನ್ ಮೀಸೆಯನ್ನು ಎಡಿಟ್ ಮಾಡಲಾಗಿದ್ದು, ಈ ಮೂಲಕ ಅಭಿನಂದನ್​ ಮೀಸೆಯಿಟ್ಟು ಟೀಂ ಇಂಡಿಯಾವನ್ನು ಟ್ರೋಲ್ ಮಾಡಿದ ಪಾಕಿಗಳಿಗೆ ಅವರದ್ದೇಯಾದ ರೀತಿಯಲ್ಲಿ ಭಾರತದ ಅಭಿಮಾನಿಯೊಬ್ಬ ತಕ್ಕ ಪ್ರತ್ಯುತ್ತರ ನೀಡಿದ್ದಾರೆ. ಭಾರೀ ಜನ ಮೆಚ್ಚುಗೆಗಳಿಸಿರುವ ರೋಹಿತ್ ಮೀಸೆ ಫೋಟೋ ಈಗ  ಸಖತ್ ವೈರಲ್ ಆಗುತ್ತಿದೆ.
ಆ ವಿಡಿಯೋದಲ್ಲಿ ಅಭಿನಂದನ್​ ಜಾಗದಲ್ಲಿ ಭಾರತೀಯ ತಂಡದ ಕಪ್ತಾನ ವಿರಾಟ್​ ಕೊಹ್ಲಿ ಪ್ರತಿನಿಧಿಸುವಂತೆ ಚಿತ್ರಿಸಲಾಗಿತ್ತು. ನೀವು ಟಾಸ್​ ಗೆದ್ದರೆ ಏನು ಮಾಡುತ್ತೀರಿ?, '11 ಜನರ ತಂಡದಲ್ಲಿ ಯಾರೆಲ್ಲ ಇರುತ್ತಾರೆ’ ಎನ್ನುವ ಪ್ರಶ್ನೆಯನ್ನು ಕೇಳಲಾಗಿತ್ತು. ಈ ವೇಳೆ ಅಭಿನಿಂದನ್​ ರೀತಿಯಲ್ಲಿ ಮೀಸೆ ಬಿಟ್ಟು, ಟೀಂ ಇಂಡಿಯಾ ಜೆರ್ಸಿ ತೊಟ್ಟ ವ್ಯಕ್ತಿ, ನಾನು ಅದನ್ನು ಹೇಳಲು ಸಾಧ್ಯವಿಲ್ಲ, ಟೀ ಚೆನ್ನಾಗಿದೆ ಎಂಬಿತ್ಯಾದಿ ಉತ್ತರಗಳನ್ನು ನೀಡಿದ್ದರು. ಈ ಸಂಭಾಷಣೆ ಮುಂದುವರೆದು ಟೀ ಕಪ್ ತೆಗೆದುಕೊಂಡು ಹೋಗುವ ವೇಳೆ ಕಪ್ ಹಿಂತಿರುಗಿಸುಂತೆ ಹೇಳಿ ಈ ಸಲ ಕಪ್ ನಮ್ದೆ ಎಂಬಂತೆ ಭಾರತ ತಂಡವನ್ನು ಪಾಕ್ ಕಾಲೆಳೆದಿತ್ತು. ಕ್ರಿಕೆಟ್ ಮಧ್ಯೆ ಅಭಿನಂದನ್ ರೂಪವನ್ನು ಎಳೆದು ತಂದಿರುವ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಆಕ್ರೋಶಗಳು ಕೇಳಿ ಬಂದಿದ್ದವು. ಆದರೆ ಇದೆಲ್ಲವನ್ನು ಪಾಕ್ ಅಭಿಮಾನಿಗಳು ಮಾತ್ರ ಸಮರ್ಥಿಸಿಕೊಂಡಿದ್ದರು.