ರಾಜ್ಯ ಪೊಲೀಸ್​ ಇಲಾಖೆಗೆ ಮೇಜರ್​ ಸರ್ಜರಿ; ಪ್ರಮುಖ ಅಧಿಕಾರಿಗಳ ವರ್ಗಾವಣೆ ಮಾಡಿದ ಸರ್ಕಾರ


ಬೆಂಗಳೂರು (ಜೂ.17): ಲೋಕಸಭಾ ಚುನಾವಣೆ ಫಲಿತಾಂಶ ಹೊರ ಬಂದ ತಿಂಗಳೊಳಗೆ ರಾಜ್ಯ ಪೊಲೀಸ್ ಇಲಾಖೆಗೆ ಸರ್ಕಾರ ಮೇಜರ್ ಸರ್ಜರಿ ಮಾಡಿದೆ. ಹತ್ತೊಂಬತ್ತು ಜನ ಐಪಿಎಸ್ ಅಧಿಕಾರಗಳನ್ನು ವರ್ಗಾವಣೆ ಮಾಡಿ ಆದೇಶ ಹೊರಡಿಸಿದೆ.
ಬೆಂಗಳೂರು ನಗರ ಪೊಲೀಸ್ ಕಮಿಷನರ್ ಆಗಿ ಅಲೋಕ್ ಕುಮಾರ್ ಅವರನ್ನು ನೇಮಕ ಮಾಡಲಾಗಿದೆ. ಈ ಮೊದಲು ಐಜಿಪಿ ಆಗಿದ್ದ ಅಲೋಕ್​ಗೆ ಎಡಿಜಿಪಿಯಾಗಿ ಬಡ್ತಿ ನೀಡಿ , ಬೆಂಗಳೂರು ನಗರ ಪೊಲೀಸ್ ಕಮಿಷನರ್ ನೇಮಕ ಮಾಡಲಾಗಿದೆ. ಟಿ. ಸುನಿಲ್ ಕುಮಾರ್ ನೇಮಾಕಾತಿ ವಿಭಾಗ ಎಡಿಜಿಪಿ ಆಗಿ ವರ್ಗಾವಣೆ ಮಾಡಲಾಗಿದೆ. ಅಮ್ರಿತ್ ಪೌಲ್ ಈಸ್ಟರ್ನ್ ರೇಂಜ್ ಐಜಿಪಿ  ಆಗಿ ನೇಮಕ ಮಾಡಲಾಗಿದೆ.
ಬೆಂಗಳೂರು ಪಶ್ಚಿಮ ವಿಭಾಗ ಹೆಚ್ಚುವರಿ ಪೊಲೀಸ್ ಆಯುಕ್ತರಾಗಿ ಉಮೇಶ್ ಕುಮಾರ್, ಗೃಹ ಇಲಾಖೆಯ ಕಾರ್ಯದರ್ಶಿ (PCAS) ಬಿಕೆ. ಸಿಂಗ್ , ಬೆಂಗಳೂರು ಆಂತರಿಕ ಭದ್ರತೆಯ ಐಜಿಪಿಯಾಗಿ ಸೌಮೆಂದು ಮುಖರ್ಜಿ, ಸದರನ್  ರೇಂಜ್ ಐಜಿಪಿ ಆಗಿ ರಾಘವೇಂದ್ರ ಸುಹಾಸ್ ಸಿಸಿಬಿ ಮುಖ್ಯಸ್ಥರಾಗಿ ರವಿಕಾಂತೇ ಗೌಡ ವರ್ಗಾವಣೆ ಗೊಂಡಿದ್ದಾರೆ.
ನಾಗರಿಕ ರಕ್ಷಣೆ ಮತ್ತು ಗೃಹ ರಕ್ಷಕ ದಳದ ವಿಭಾಗದ ಎಸ್​ಪಿ ಆಗಿ ಅಮಿತ್ ಸಿಂಗ್, ಎಸಿಬಿ ಎಎಸ್​​ಪಿ ಆಗಿ ರಾಮ್ ನಿವಾಸ್, ರೈಲ್ವೆ ಎಸ್​ಪಿ ಆಗಿ ಎಂ.ಎನ್. ಅನುಚೇತ್​, ಬೆಂಗಳೂರು ಪಶ್ಚಿಮ ವಿಭಾಗ ಡಿಸಿಪಿ ಬಿ ರಮೇಶ್, ಸಿಐಡಿ ಎಸ್​​ಪಿ ಆಗಿ ರವಿ ಡಿ ಚನ್ನಣ್ಣನವರ್, ಬೆಂಗಳೂರು ಈಶಾನ್ಯ ವಿಭಾಗ ಡಿಸಿಪಿ ಆಗಿ ಡಾ. ಭೀಮಾಶಂಕರ್ ಎಸ್ ಗುಳೇದ್, ಮೈಸೂರು ಎಸ್​ಪಿ ಆಗಿ ಸಿ.ಬಿ.  ರಿಶ್ಯಂತ್ ವರ್ಗಾವಣೆ ಗೊಂಡಿದ್ದಾರೆ.
ಉಳಿದಂತೆ, ಮಾಹಮದ್ ಸುಜೀತಾ  ಕೋಲಾರ ಎಸ್​ಪಿ ಆಗಿ, ಟಿಪಿ ಶಿವಕುಮಾರ್  ಬೆಂಗಳೂರು ಗ್ರಾಮಾಂತರ ಎಸ್​​ಪಿ ಆಗಿ, ಎನ್ ವಿಷ್ಣುವರ್ಧನ ಬೆಂಗಳೂರು ಅಡಳಿತ ಡಿಸಿಪಿ ಆಗಿ, ಕಲಾ ಕೃಷ್ಣ ಸ್ವಾಮಿ ಏಫ್​​ಎಸ್​​ಎಲ್ ನಿರ್ದೇಶಕರಾಗಿ ವರ್ಗಾವಣೆ ಮಾಡಲಾಗಿದೆ.