ಮಡಿಕೇರಿ :ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ಆರಂಭಗೊಂಡಿದೆ. ಸಾಮಾನ್ಯವಾಗಿ ನೈಋತ್ಯ ಭಾಗಕ್ಕೆ ಜೂನ್ ಮೊದಲ ವಾರದಲ್ಲಿ ಮುಂಗಾರು ಪ್ರವೇಶ ಮಾಡಿ ಕೊಡಗು ಜಿಲ್ಲೆಗೆ ಜೂನ್ ತಿಂಗಳ ಎರಡನೇ ಅಥವಾ ಮೂರನೇ ವಾರದಲ್ಲಿ ಮುಂಗಾರು ಚುರುಕು ಪಡೆಯುತ್ತದೆ. ಜಿಲ್ಲಾ ಕೇಂದ್ರ ಮಡಿಕೇರಿ ಮಂಜಿನ ನಗರಿಯಾಗಿ ಬದಲಾಗಿದೆ. ಮುಂಗಾರು ಮಳೆಗೆ ಪ್ರತಿಯೊಬ್ಬರೂ ಕೊಡೆ, ಸ್ವೆಟರ್, ಗಂಬೂಟು, ಬಟ್ಟೆ ಒಣಗಲು ಬಳಂಜಿ ಹೀಗೆ ನಾನಾ ರೀತಿಯ ಸಿದ್ಧತೆ ಮಾಡಿಕೊಳ್ಳಬೇಕಿದೆ. ಇನ್ನು ಮುಂದಿನ ನಾಲ್ಕು ತಿಂಗಳ ಕಾಲ ಮೋಡ ಕವಿದ ವಾತಾವರಣವನ್ನು ಕೊಡಗು ಜಿಲ್ಲೆಯಲ್ಲಿ ಕಾಣಬಹುದಾಗಿದೆ. ಕಳೆದ ಬಾರಿಯ ತೀವ್ರ ಅತಿವೃಷ್ಟಿಯಿಂದಾಗಿ ಜಿಲ್ಲೆಯ ಜನರು ತುಂಬಾ ಸಂಕಷ್ಟ ಅನುಭವಿಸಿದ್ದರು. ಭತ್ತ, ಮುಸುಕಿನ ಜೋಳ, ಕಾಫಿ, ಏಲಕ್ಕಿ, ಕಾಳು ಮೆಣಸು, ಬಾಳೆ ಹೀಗೆ ನಾನಾ ಕೃಷಿ, ತೋಟಗಾರಿಕೆ ಹಾಗೂ ವಾಣಿಜ್ಯ ಬೆಳೆಗಳು ನಾಶವಾದವು. ಇದರಿಂದಾಗಿ ಜಿಲ್ಲೆಯ ಕೃಷಿಕರು ಚೇತರಿಸಿಕೊಳ್ಳುವುದೇ ಕಷ್ಟಸಾಧ್ಯವಾಗಿತ್ತು. ಸರ್ಕಾರ ಬೆಳೆ ಹಾನಿಗೆ ಪರಿಹಾರ ನೀಡಿದೆ. ಸಂತ್ರಸ್ತರಿಗೆ ಮನೆ ನಿರ್ಮಾಣ ಮಾಡುತ್ತಿದ್ದು ಸದ್ಯದಲ್ಲಿಯೇ ಮನೆ ಹಸ್ತಾಂತರ ಪ್ರಕ್ರಿಯೆ ನಡೆಯಲಿದೆ. ಆದರೂ ಕಳೆದ ಬಾರಿಯ ತೀವ್ರ ಅತಿವೃಷ್ಟಿಯಿಂದಾಗಿ ಒಂದು ರೀತಿ ಜಿಲ್ಲೆಯ ಜನರ ಬದುಕು ಅಸ್ತವ್ಯಸ್ತ ಉಂಟಾಗಿತ್ತು. ಕಳೆದ ನಾಲ್ಕು ವರ್ಷದಲ್ಲಿ ಜನವರಿಯಿಂದ ಮೇ ಅಂತ್ಯದ ವರೆಗಿನ ವಾಡಿಕೆ ಮಳೆಯ ಪ್ರಮಾಣ ಅವಲೋಕನ ಮಾಡಿದಾಗ ಜಿಲ್ಲೆಯಲ್ಲಿ ಜನವರಿಯಿಂದ ಮೇ ಅಂತ್ಯದ ವರೆಗೆ ವಾಡಿಕೆ ಮಳೆಯ ಪ್ರಮಾಣವು 245.50 ಮಿ.ಮೀ.ಗಳಾಗಿದ್ದು, 2016 ರಲ್ಲಿ 158.20 ಮಿ.ಮೀ ಮಳೆಯಾಗಿದ್ದು, 2017 ರಲ್ಲಿ 305.04 ಮಿ.ಮೀ. ಮಳೆಯಾಗಿದ್ದು, 2018 ರ ಇದೇ ಅವಧಿಯಲ್ಲಿ 423.68 ಮಿ.ಮೀ. ಮಳೆಯಾಗಿದ್ದರೆ, 2019ರ ಇದೇ ಅವಧಿಯಲ್ಲಿ 146.92 ಮಿ.ಮೀ ಮಳೆಯಾಗಿರುವುದನ್ನು ಗಮನಿಸಬಹುದಾಗಿದೆ. ತಾಲ್ಲೂಕುವಾರು ಗಮನಿಸಿದಾಗ ಮಡಿಕೇರಿ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 253.60 ಮಿ.ಮೀ.ಗಳಾಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 167.76 ಮಿ.ಮೀ. ಮಳೆಯಾಗಿದೆ. 2018ರಲ್ಲಿ 614.74 ಮಿ.ಮೀ.ಮಳೆಯಾಗಿದೆ. 2017ರಲ್ಲಿ 344.29 ಮಿ.ಮೀ.ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 234.75 ಮಿ.ಮೀ. ಮಳೆಯಾಗಿತ್ತು. ಸೋಮವಾರಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 211.30 ಮಿ.ಮೀ. ಗಳಾಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 87.62 ಮಿ.ಮೀ. ಮಳೆಯಾಗಿದೆ. 2018 ರಲ್ಲಿ 343.70 ಮಿ.ಮೀ ರಷ್ಟು ಮಳೆಯಾಗಿದೆ. 2017 ರ ಇದೇ ಅವಧಿಯಲ್ಲಿ 266.25 ಮಿ.ಮೀ.ಮಳೆಯಾಗಿತ್ತು. ಹಾಗೆಯೇ 2016 ರ ಇದೇ ಅವಧಿಯಲ್ಲಿ 122.33 ಮಿ.ಮೀ. ಮಳೆಯಾಗಿತ್ತು. ವಿರಾಜಪೇಟೆ ತಾಲ್ಲೂಕಿನಲ್ಲಿ ಜನವರಿಯಿಂದ ಮೇ ಅಂತ್ಯದವರೆಗೆ ಸರಾಸರಿ ವಾಡಿಕೆ ಮಳೆ 271.60 ಮಿ.ಮೀ.ಗಳಾಗಿದ್ದು, 2019ರ ಜನವರಿಯಿಂದ ಮೇ ಅಂತ್ಯದವರೆಗೆ 185.35 ಮಿ.ಮೀ. ಮಳೆಯಾಗಿದೆ. 2018 ರಲ್ಲಿ 312.60 ಮಿ.ಮೀ.ಮಳೆಯಾಗಿದ್ದು, 2017ರ ಇದೇ ಅವಧಿಯಲ್ಲಿ 304.56 ಮಿ.ಮೀ. ಮಳೆಯಾಗಿದ್ದು, 2016ರ ಇದೇ ಅವಧಿಯಲ್ಲಿ 117.55 ಮಿ.ಮೀ. ಮಳೆಯಾಗಿತ್ತು ಎಂಬುದನ್ನು ಗಮನಿಸಬಹುದಾಗಿದೆ.
ಕೊಡಗು ಜಿಲ್ಲೆಯಲ್ಲಿ ಮುಂಗಾರು ಮಳೆ ಆರಂಭ

No comments
Post a Comment