ಚೆಟ್ಟಳ್ಳಿ: ಸಮೀಪದ ಕಂಡಕರೆಯಲ್ಲಿ ಈದ್ ಕಪ್ ೨೦೧೯ ಕಂಡಕರೆ ಪ್ರೀಮಿಯರ್ ಲೀಗ್ ಕಾಲ್ಚೆಂಡು ಪಂದ್ಯಾಟದಲ್ಲಿ ಯಂಗ್ ಸ್ಪೈಡರ್ಸ್ ತಂಡವು ಚಾಂಪಿಯನ್ ತಂಡವಾಗಿ ಹೊರಮ್ಮಿದೆ. ಎಫ್.ಸಿ ಕಂಡಕರೆ ತಂಡವು ದ್ವಿತೀಯ ಸ್ಥಾನಕ್ಕೆ ತೃಪ್ತಿ ಪಟ್ಟುಕೊಂಡರು. ಎರಡು ಬಲಿಷ್ಠ ತಂಡಗಳ ನಡುವಿನ ಜಿದ್ದಾಜಿದ್ದಿನ ಫೈನಲ್ ಪಂದ್ಯಾಟದ ಪ್ರಥಮಾರ್ಧದಲ್ಲಿ ಎರಡು ತಂಡಗಳು ಗೋಲು ವಿಫಲರಾಗಿದ್ದರು. ಸೆಕೆಂಡ್ ಆಪ್ ಸಮಯದಲ್ಲಿ ಯಂಗ್ ಸ್ಪೈಡರ್ಸ್ ತಂಡವು ರಕ್ಷಣಾತ್ಮಕ ಆಟಕ್ಕೆ ಮುಂದಾಗಿ, ಆಬಿದ್, ಹಾಗೂ ರಶೀದ್ ಒಂದು ಗೋಲು ದಾಖಲಿಸುವುದರ ಮುಖಾಂತರ ೨-೦ ಗೋಲುಗಳ ಅಂತರದಿಂದ ಎಫ್.ಸಿ ಕಂಡಕರೆ ತಂಡವನ್ನು ಮಣಿಸಿ ಚಾಂಪಿಯನ್ ಪ್ರಶಸ್ತಿಯನ್ನು ಅಲಂಕರಿಸಿತು. ಇದಕ್ಕೂ ಮೊದಲು ನಡೆದ ಮೊದಲನೇ ಸೆಮಿಫೈನಲ್ ಪಂದ್ಯವು ಅಡಿಂಗಪ್ಪ ತಂಡದ ವಿರುದ್ಧ ಪೆನಾಲ್ಟಿ ಶೂಟೌಟ್ ನಲ್ಲಿ ೩-೧ ಗೋಲುಗಳು ಅನಂತರದಿಂದ ಕಂಡಕರೆ ಎಫ್.ಸಿ ತಂಡವು ಜಯಸಾಧಿಸಿ ಫೈನಲ್ ಪ್ರವೇಶಿಸಿತು. ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ಫ್ರಾನ್ಸಿ ಕಂಡಕರೆ ತಂಡವನ್ನು ೩-೦ ಗೋಲುಗಳ ಅಂತರದಿಂದ ಮಣಿಸಿ ಫೈನಲ್ ಪ್ರವೇಶಿಸಿತು. ಪಂದ್ಯಾವಳಿಯ ಎಮರ್ಜಿಂಗ್ ಆಟಗಾರ ಪ್ರಶಸ್ತಿಯನ್ನು ಎವರ್ ಶೈನ್ ತಂಡದ ನಾಯಕ ಸಮ್ಮಾಸ್ ಹಾಗೂ ಅತೀ ಹೆಚ್ಚು ಗೋಲು ಬಾರಿಸಿದ ಆಟಗಾರ ಪ್ರಶಸ್ತಿಯನ್ನು ಯಂಗ್ ಸ್ಪೈಡರ್ಸ್ ತಂಡದ ಮುನ್ನಡೆ ಆಟಗಾರ ರಶೀದ್ ಪಡೆದುಕೊಂಡರು. ಪಂದ್ಯಾವಳಿಯ ತೀರ್ಪುಗಾರರಾಗಿ ವಿನೋದ್, ಶರಿನ್, ಲತೀಫ್, ಆಲಿ , ಇಬ್ರಾಹಿಂ ಕಾರ್ಯನಿರ್ವಹಿಸಿದರು. ಪ್ರಶಸ್ತಿ ವಿತರಣಾ ಸಮಾರಂಭದಲ್ಲಿ ಚೆಟ್ಟಳ್ಳಿ ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ರಫಿ, ಕಂಡಕರೆ ಮಹಲ್ ಕಾರ್ಯದರ್ಶಿ ಗಫೂರ್ ಸಾಹೇಬ್, ಆದಂ, ಹುಸೈನ್ , ಸಹೈಲ್ ಮನ್ಸೂರ್ ಇದ್ದರು. *ಚಿತ್ರ ವಿನ್ನರ್ಸ್* ಯಂಗ್ ಸ್ಪೈಡರ್ಸ್..
ಕೆಪಿಎಲ್ ಕಾಲ್ಚೆಂಡು ಪಂದ್ಯಾಟ:ಯಂಗ್ ಸ್ಪೈಡರ್ಸ್ ಚಾಂಪಿಯನ್

No comments
Post a Comment