ಕಂಡಕರೆಯಲ್ಲಿ ಸಂಭ್ರಮದ ಈದುಲ್ ಫಿತ್ರ್ ಆಚರಣೆ

No comments

 ಚೆಟ್ಟಳ್ಳಿ: ಸಮೀಪದ ಕಂಡಕರೆಯಲ್ಲಿ ಈದುಲ್ ಫಿತ್ರ್ (ರಂಜಾನ್) ಹಬ್ಬವನ್ನು ಸಂಭ್ರಮದಿಂದ ಆಚರಿಸಲಾಯಿತು. ಎಲ್ಲರೂ
ಪರಸ್ಪರ ಹಸ್ತಲಾಂಘನ ಮಾಡುವುದರ ಮುಖಾಂತರ ಶುಭಕೋರಿದರು. ಈದ್ ನಮಾಜಿನ ನಂತರ ಮರಣ ಹೊಂದಿದರವರಿಗೆ ಹಾಗೂ ಸಂತ್ರಸ್ತರಿಗೆ ವಿಶೇಷ ಪ್ರಾರ್ಥನೆ ನೆರವೇರಿಸಲಾಯಿತು. ಈ ಸಂದರ್ಭ ಮಾತನಾಡಿದ ಮಹಲ್ ಖತೀಬರಾದ ಮುಸ್ತಫಾ ಸಖಾಫಿ, ಶಾಂತಿ ಹಾಗೂ

ಸೌರ್ಹಾದತೆಯ ಪ್ರತೀಕವಾಗಿದೆ ಈದುಲ್ ಫಿತ್ರ್. ಒಂದು ತಿಂಗಳ ವ್ರತಾಚರಣೆಯ ನಂತರ ಎಲ್ಲರೂ ಹಬ್ಬವನ್ನು ಸಂಭ್ರಮದಿಂದ ಆಚರಿಸುತ್ತಿದ್ದಾರೆ. ಎಲ್ಲರೂ ಕೂಡ ಸೌಹಾರ್ದತೆಯಿಂದ ಹಬ್ಬವನ್ನು, ಆಚರಿಸಬೇಕು ಎಂದರು. ಈ ಸಂದರ್ಭ ಆದಂ ಸಹದಿ, ಮಹಲ್ ಕಾರ್ಯದರ್ಶಿ ಗಫೂರ್ ಸಾಹೇಬ್, ಗ್ರಾಮ ಪಂಚಾಯತಿ ಸದಸ್ಯರಾದ ಮೊಹಮ್ಮದ್ ರಫಿ, ರಜಾಕ್, ಹನೀಫ ಇಮಮಿ ಇದ್ದರು.

No comments

Post a Comment