ಪರಿಸರ ಸಂರಕ್ಷಣೆ ಸರ್ಕಾರದ ಹೊಣೆಯಲ್ಲ, ಪ್ರತಿಯೊಬ್ಬ ನಾಗರಿಕನ ಹೊಣೆಯಾಗಿದೆ

No comments

ಕೆ.ಎಂ ಇಸ್ಮಾಯಿಲ್ ಕಂಡಕರೆ*

ಕಾಲ ಬದಲಾದಂತೆ ನಾವು ಬದಲಾಗಬೇಕು ಎಂದು ಕೆಲವರು ಹೇಳಿ ನಾನು ಕೇಳಿದ್ದೇನೆ.
ಆದರೆ ನಮ್ಮ ಬದಲಾವಣೆಗೆ ಅನುಸಾರವಾಗಿ ಪರಿಸರವನ್ನು ಬದಲಾಯಿಸಲು ಸಾಧ್ಯವೇ? ಇಲ್ಲ.
ನಾವೆಲ್ಲರೂ ಪ್ರಕೃತಿಯನ್ನು ತಾಯಿಯಂತೆ ನೋಡಿ ಪೂಜಿಸುವವರು ಅಲ್ಲವೇ..
ಆದರೇ ಹಾ ಪ್ರಕೃತಿ ತಾಯಿಗೆ ನಾವು ಮಾಡುವ ಅನ್ಯಾಯ ಅಷ್ಟಿಷ್ಟಲ್ಲ.
ಪ್ರಕೃತಿ ಉಳಿದರೆ, ನಾವು ಬದುಕುಳಿಯುತ್ತೇವೆ.
 ಮಾತಿದು, ಕಾಡು ಬೆಳೆಸಿ, ನಾಡು ಉಳಿಸಿ ಎಂದು. ಶಾಲಾ ದಿನಗಳಲ್ಲಿ ಶಿಕ್ಷಕರು ಪಾಠ ಮಾಡುವಾಗ, ಹಾಗೂ ವರ್ಷಕ್ಕೆ ಒಮ್ಮೆ ಬರುವ ವಿಶ್ವ ಪರಿಸರ ದಿನದಂದು ಮಾತ್ರ ಕೇಳುವ ಮಾತಿದು.
ಇಂದು ಮಾನವನು ಪ್ರಕೃತಿ ತಾಯಿಯ ಮೇಲೆ ದೌರ್ಜನ್ಯವನ್ನು ಎಸೆಗುತ್ತಿದ್ದಾ‌ನೆ.
ನಾಡು ಬೆಳೆಸಿ , ಕಾಡನ್ನು ನಾಶ ಪಡಿಸುತ್ತಿದ್ದಾನೆ.
ಒಂದೆಡೆ ಕಾಡು ನಾಶವಾಗಿ , ದೊಡ್ಡ, ಬಂಗ್ಲೆ, ಅಪಾರ್ಟ್ ಮೆಂಟ್ , ರೆಸಾರ್ಟ್ ತಲೆ ಎತ್ತುತ್ತಿದೆ.
ಮನುಷ್ಯ ಸಂಕುಲವು ಪ್ರಕೃತಿಯ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಒಂದಿಲ್ಲಾ ಒಂದು ರೀತಿಯಲ್ಲಿ ಎಸೆಗುತ್ತಾ ಬಂದಿದ್ದಾನೆ.
ಪ್ರಕೃತಿಯ ಅವಿಭಾಜ್ಯ ಅಂಗವಾಗಿದೆ ಪರಿಸರ.
ಪರಿಸರವನ್ನು ಸಂರಕ್ಷಿಸಬೇಕಾದ ಮಾನವನು ತನ್ನ ದುರುದ್ದೇಶಗಳಿಗೆ ಪರಿಸರವನ್ನು ಬಳಕೆ ಮಾಡಿ ಹೇಳಿಕೊಳ್ಳಲಾಗದಷ್ಟು ಪರಿಸರವು ಮಲೀನಗೊಂಡಿದೆ.
ವಿಶ್ವದಲ್ಲಿ ಪರಿಸರವನ್ನು ಸಂರಕ್ಷಿಸುವ ಅಗತ್ಯದ ಬಗ್ಗೆ ಅರಿವಯ ಮೂಡಿಸುವ ಸಲುವಾಗಿ ವಿಶ್ವಸಂಸ್ಥೆಯ ಪರಿಸರ ಘಟಕವು ೧೯೭೨ ರಿಂದ ಪ್ರತೀ ವರ್ಷ ಜೂನ್ 05 ರಂದು ವಿಶ್ವದಾದ್ಯಂತ *ವಿಶ್ವ ಪರಿಸರ ದಿನ*" ವನ್ನು ಆಚರಿಸುತ್ತಿದೆ.
ಮಾನವನು ಪ್ರಕೃತಿ ಮೇಲೆ ನಿರಂತರವಾಗಿ ದೌರ್ಜನ್ಯವನ್ನು ಎಸೆಗಿ, ತನ್ನ ಸ್ವಾರ್ಥಕ್ಕಾಗಿ ಪರಿಸರವನ್ನು ಬಳಸಿ ನಾಶ ಪಡಿಸುತ್ತಿದ್ದಾನೆ.
ಒಂದು ಕಾಲದಲ್ಲಿ ಹಸಿರಿನಿಂದ ಕಂಗೊಳಿಸುತ್ತಿದ್ದ ನಾಡುಗಳೆಲ್ಲವೂ ಇಂದು ಕಾಂಕ್ರೀಟ್ ಕಾಡುಗಳಾಗಿ ಪರಿವರ್ತನೆ ಹೊಂದುತ್ತಿದೆ.
ಪ್ರವಾಸೋದ್ಯಮ ಹೆಸರಿನಲ್ಲಿ ಬೆಟ್ಟ, ಗುಡ್ಡಗಳನ್ನು ನೆಲಸಮ‌ ಮಾಡಿ ದೊಡ್ಡ, ದೊಡ್ಡ ಹೋಂಸ್ಟೇಗಳನ್ನು ನಿರ್ಮಿಸಿ ಸುಂದರವಾದ ರಮಣೀಯ ಪರಿಸರವನ್ನು ನಾಶಪಡಿಸುತ್ತಿದೆ.
ಒಂದೆಡೆ ಪರಿಸರ ಸ್ನೇಹಿ ಪ್ರವಾಸೋದ್ಯಮ ಮಾಡಬೇಕು ಎಂದು ಜಾಗೃತಿ ಮೂಡಿಸುತ್ತಿದೆ, ಅದೆಲ್ಲವೂ ಜಾಗೃತಿಯಾಗಿಯೇ ಉಳಿದಿದೆ.
ನಾಡು, ದೇಶ, ಪಟ್ಟಣಗಳು ಅಭಿವೃದ್ಧಿ ಹೊಂದಬೇಕು.
ಆದರೆ ಲಕ್ಷಾಂತರ ಎಕರೆ ಪರಿಸರವನ್ನು ನಾಶ ಪಡಿಸಿ ಅಭಿವೃದ್ಧಿ ಮಾಡಬೇಕಾ?
ಅಭಿವೃದ್ಧಿ ಎಂಬ ಹೆಸರಿನಲ್ಲಿ ಕೋಟ್ಯಾನುಕೋಟಿ ಮರಗಳ ಮಾರಣ ಹೋಮವಾಗುತ್ತಿದೆ.
ಒಂದು ಮರವನ್ನು ಕಡಿದರೆ , ನೂರ ಮರವನ್ನು ನಾವು ನಡುತ್ತೇವೆ ಎಂದೆಲ್ಲಾ ಹೇಳುವವರು ಇದುವರೆಗೆ ಒಂದು ಮರವನ್ನಾದರೂ ತಮ್ಮ ಕೈಯಿಂದ ನೆಟ್ಟಿದ್ದಾರಾ.
ಪ್ರಕೃತಿ, ಪರಿಸರವನ್ನು ಸಂರಕ್ಷಿಸುವುದು, ಸರ್ಕಾರ, ಆಡಳಿತ ವರ್ಗ, ಸರ್ಕಾರಿ ನೌಕರರಿಗೆ ಮಾತ್ರ ಸೀಮಿತವಲ್ಲ,‌ಪ್ರಕೃತಿಯನ್ನು ಸಂರಕ್ಷಿಸುವುದು ಪ್ರತಿಯೊಬ್ಬ ನಾಗರಿಕನ ಕರ್ತವ್ಯವಾಗಿದೆ.
ಮತ್ತೊಂದೆಡೆ ಕೋಟಿ, ಕೋಟಿ ಉದ್ಯೋಗ ಸೃಷ್ಟಿ ಮಾಡುತ್ತೇವೆ ಎಂದು ಹೇಳಿ ಕಾರ್ಖಾನೆಗಳು ತಲೆ ಎತ್ತುತ್ತಿದೆ ಸಂತೋಷ‌.ಆದರೆ ಅದೇ ಕಾರ್ಖಾನೆಯಿಂದ ಬರುವ ಮಲೀನ, ತ್ಯಾಜ್ಯ ಹಾಗೂ ಇನ್ನುತರ ಪ್ಲಾಸ್ಟಿಕ್ ವಸ್ತುಗಳು ಎಲ್ಲಿ ಸೇರುತ್ತಿದೆ?
ಉದ್ಯೋಗದ ಹೆಸರಿನಲ್ಲಿ ನಾವು ಪರಿಸರವನ್ನು ನಾಶ ಪಡಿಸುತ್ತಿದ್ದೇವೆ ಅಲ್ವೇ?.
ಮಿತಿಮೀರಿ ಬೆಳೆಯುತ್ತಿರುವ ಕೈಗಾರಿಕರಣ ನಮ್ಮ ಪರಿಸರದ ಮೇಲೆ ಸಾಕಷ್ಟು ಘೋರ ಪರಿಣಾಮ ಬೀರುತ್ತಿದೆ.
ಕಾರ್ಖಾನೆಗಳಿಂದ ಹೊರಚೆಲ್ಲುವ ವಿಷಾನೀಲಗಳು, ಧೂಮುಗಳು, ವಾಯುಮಾಲಿನ್ಯಕ್ಕೆ ಕಾರಣವಾಗುತ್ತಿದೆ.
೧೯೮೬ ರಲ್ಲಿ "ಮಧ್ಯಪ್ರದೇಶ ಭೋಪಾಲ್ ನಲ್ಲಿ" ಯೂನಿಯನ್ ಕಾರ್ಬೈಡ್ ಕಾರ್ಖಾನೆ ಹೊರಚೆಲ್ಲಿದ ವಿಷಾನೀಲ ಸಾವಿರಾರು ಜನರನ್ನು ಬಲಿ ಪಡೆದದ್ದು ಮರೆಯಲು ಸಾಧ್ಯವೇ?..
ಅದೇ ರೀತಿ ರಷ್ಯಾ ದೇಶದ "ಜೆರ್ನೊಬಿಲ್" ನಗರದಲ್ಲಿ ಸಂಭವಿಸಿದ ಪರಮಾಣು ದುರಂತದಿಂದ ಸಾವಿರಾರು ಜನರು ಮೃತಪಟ್ಟಿದ್ದರು.
ಪ್ರಕೃತಿಯ ಮೇಲೆ ನಿರಂತರ ಸವಾರಿ ಮಾಡುತ್ತಿರುವ ಮಾನವ ಕುಲವು ತನ್ನ ಸುಖ ಹಾಗೂ ನೆಮ್ಮದಿಯ ಬದುಕಿಗೋಸ್ಕರ ಪರಿಸರವನ್ನು ಹಾಳು ಮಾಡುತ್ತಿದ್ದಾನೆ.
ಕಂಡ ,ಕಂಡ, ಕಡೆ ಉಗುಳುವುದು ತ್ಯಾಜ್ಯ ವಸ್ತುಗಳನ್ನು ಎಲ್ಲೆಂದರಲ್ಲಿ ಬಿಸಾಕುವುದು, ವಿನಾಕಾರಣ ನಮ್ಮ ಸುತ್ತ-ಮುತ್ತಲಿನ ಗಿಡಮರಗಳನ್ನು ಕತ್ತರಿಸಿ ಹಾಕುವುದು ಇಂತಹಾ ಸಣ್ಣಪುಟ್ಟ ತಪ್ಪಗಳಿಂದಲೂ ಸಹಾ ಪರಿಸರವನ್ನು ಹಾಳು ಮಾಡುತ್ತದೆ.
ಪರಿಸರ ಉಳಿಯಬೇಕಾದರೆ ಪ್ಲಾಸ್ಟಿಕ್ ವಸ್ತುಗಳ ಬಳಕೆ ಸಂಪೂರ್ಣ ನಿಷೇಧವಾಗಬೇಕಿದೆ.
ಪ್ಲಾಸ್ಟಿಕ್ ಬಳಕೆ ನಿಷೇಧ ಬರೀ ನಾಮಫಲಕಗಳಿಗೆ ಮಾತ್ರ ಸೀಮಿತವಾಗುತ್ತಿದೆ.
ರಸ್ತೆ, ಬದಿಗಳಲ್ಲಿ ನಾವು ಅತಿಯಾಗಿ ಕಾಣುವ ತ್ಯಾಜ್ಯ ಪ್ಲಾಸ್ಟಿಕ್ ವಸ್ತುಗಳಾಗಿವೆ.
ಜಗತ್ತಿನಾದ್ಯಂತ ಪ್ರತೀ ವರ್ಷ ೫೦೦ ಶತಕೋಟಿ ಪ್ಲಾಸ್ಟಿಕ್ ಚೀಲಗಳನ್ನು ಬಳಸಲಾಗುತ್ತಿದೆ.ಪ್ರತಿ ನಿಮಿಷಕ್ಕೆ ಒಂದು ಲಾರಿ ಲೋಡ್ ಪ್ಲಾಸ್ಟಿಕ್ ಸಾಗರವನ್ನು ಸೇರುತ್ತಿದೆ.
ಪ್ರತಿ ನಿಮಿಷಕ್ಕೆ ೧೦ ಲಕ್ಷ ಬಾಟಲಿಗಳ ವಹಿವಾಟು ನಡೆಯುತ್ತಿದೆ.
ಪ್ಲಾಸ್ಟಿಕ್ ಬಳಕೆಯಲ್ಲಿ ಶೇ ೫೦ ರಷ್ಟನ್ನು ಒಮ್ಮೆ ಮಾತ್ರ ಬಳಸಿ ನಂತರ ಎಸೆಯಲಾಗುತ್ತಿದೆ.
ಜಗತ್ತಿನ ಒಟ್ಟು ತ್ಯಾಜ್ಯದ ಉತ್ಪಾದನೆಯಲ್ಲಿ
ಶೇ ೧೦ ರಷ್ಟು ಪ್ಲಾಸ್ಟಿಕ್ ಆಗಿದೆ ಎಂದು ವರದಿಗಳು ಹೇಳುತ್ತಿವೆ.
ಪ್ರತೀ ವರ್ಷ ಲಕ್ಷಗಟ್ಟಲೆ ಎಕರೆ ಕಾಡು ಪ್ರದೇಶಗಳು ಕಾಡ್ಗಿಚ್ಚಿಗೆ ನಾಶವಾಗುತ್ತಿದೆ.ಇದೆಕ್ಕೆಲ್ಲಾ ಕಾರಣ ಮನುಷ್ಯರಾದ ನಾವಲ್ಲವೇ? ಪರಿಸರವನ್ನು ಸಂರಕ್ಷಿಸಬೇಕಾದ ಕರ್ತವ್ಯ ನಮ್ಮದಲ್ಲವೇ? ಪ್ರಕೃತಿಯ ಮೇಲೆ ನಾವು ದೌರ್ಜನ್ಯ ಎಸೆಗಿದರೆ, ಪ್ರಕೃತಿ ತಾಯಿಯು ಕೂಡ ನಮ್ಮೊಡನೆ ತನ್ನ ಕೋಪವನ್ನು ತೋರ್ಪಡಿಸುತ್ತಾಳೆ.
ಎಲ್ಲರೂ ಕೂಡ ಕನಿಷ್ಠ ಒಂದು ಗಿಡವನ್ನಾದರೂ ನೆಟ್ಟು ಪರಿಸರವನ್ನು ಸಂರಕ್ಷಿಸಿ , ನಮ್ಮ ಮುಂದಿನ‌ ಪೀಳಿಗೆಗೆ ಕೊಂಚಾದರೂ ಪರಿಸರವನ್ನು ಉಳಿಸಿ ಕೊಡೋಣ.
ಹಾಗೂ ಶಾಲಾ ದಿನಗಳಿಂದಲೇ ಪರಿಸರ ಸಂರಕ್ಷಣೆಯ ಬಗ್ಗೆ ವಿದ್ಯಾರ್ಥಿಗಳಲ್ಲಿ ಕಾಳಜಿ ಮೂಡಿಸಬೇಕಾಗಿದೆ.

No comments

Post a Comment