ಮದ್ರಸ ವಿದ್ಯಾರ್ಥಿಗಳಿಗೆ ಉಚಿತ ಪಠ್ಯಪುಸ್ತಕ ವಿತರಣೆ

No comments

ಮಡಿಕೇರಿ: ವಿರಾಜಪೇಟೆ ಸಮೀಪದ ಕಡಂಗದ ತಾಜುಲ್ ಉಲಮಾ ಬದ್ರಿಯಾ ಸುನ್ನಿ ಮದರಸದ ೧ನೇ ತರಗತಿಯಿಂದ ೧೦ನೇ ತರಗತಿಯವರೆಗೆ ವ್ಯಾಸಾಂಗ ಮಾಡುತ್ತಿರುವ ೧೨೦ಕ್ಕೂ ವಿದ್ಯಾರ್ಥಿಗಳಿಗೆ ಉಚಿತವಾಗಿ ಅಬೂಬಕರ್ ಕುವೈತ್ ಹಾಗೂ ಮುಜೀಬ್ ನೀಡಿರುವ ಪಠ್ಯಪುಸ್ತಕವನ್ನು ಜಮಾಹತ್ ಪ್ರತಿನಿಧಿಗಳು ವಿತರಣೆ ಮಾಡಿದರು‌. ಈ ಸಂದರ್ಭ
ಮಾತನಾಡಿದ ಮದರಸ ಅಧ್ಯಾಪಕರಾದ ಹಾರಿಸ್ ಬಯಾನಿ ಕಳೆದ ೮ ವರ್ಷಗಳಿಂದ ಮದರಸ ವಿದ್ಯಾರ್ಥಿಗಳಿಗೆ ಅಬೂಬಕರ್ ಹಾಗೂ ಮುಜೀಬ್ ಉಚಿತ ಪಠ್ಯ ಪುಸ್ತಕವನ್ನು ನೀಡುತ್ತಾ ಬಂದಿದ್ದಾರೆ ಎಂದರು. ಈ ಸಂದರ್ಭ ಜಮಾಹತ್ ಉಪಾಧ್ಯಕ್ಷರಾದ ಹಸೈನಾರ್, ಕುಂಞಿ ಅಹ್ಮದ್, ಟಿ.ಪಿ ಸಲಾಂ, ಪಿ.ಎ ಫಿರೋಜ್ ಅಧ್ಯಾಪಕರಾದ ರಜಾಕ್ ಉಸ್ತಾದ್ ಮತ್ತಿತರರು ಇದ್ದರು.

No comments

Post a Comment