ಜಿಝಾನ್ ಬೈಶ್ ಫ್ರೆಂಡ್ಸ್ ಮಂಗಳೂರು ಕ್ರಿಕೇಟರ್ಸ್ ಆಯೋಜಿಸಿದ್ದ ಕ್ರೀಡಾಕೂಟದಲ್ಲಿ ಫ್ರೆಂಡ್ಸ್ ಮಂಗಳೂರು ಚಾಂಪಿಯನ್ಸ್ ಹಾಗೂ ಬ್ಲಡ್ ಡೋನರ್ಸ್ ಮಂಗಳೂರು (ರಿ) ಸಂಸ್ಥೆಯ ಲೋಗೋ ಅಳವಡಿಸಿದ ಸಮವಸ್ತ್ರ ಬಿಡುಗಡೆ.
ಜಿದ್ದಾ ಜೂನ್ 22
ದಿನಾಂಕ 21.06.2019 ಶುಕ್ರವಾರ ಸೀಮಿತ ಒವರ್ ಗಳ ಕ್ರೀಡಾಕೂಟವನ್ನು ಫ್ರೆಂಡ್ಸ್ ಮಂಗಳೂರು ಕ್ರಿಕೇಟರ್ಸ್ ಆಯೋಜಿಸಿತು. ಇದರಲ್ಲಿ ಬೈಶ್ನ ಹೆಸರಾಂತ 12 ತಂಡಗಳು ಭಾಗವಹಿಸಿದ್ದವು. ಬಹಳ ಕುತೂಹಲಕಾರಿಯಾದ ಫೈನಲ್ ಪಂದ್ಯದಲ್ಲಿ ಫ್ರೆಂಡ್ಸ್ ಮಂಗಳೂರು ತಂಡವು ಫ್ರೆಂಡ್ಸ್ ಮಂಗಳೂರು ಬಿ ತಂಡವನ್ನು ಮಣಿಸಿ ಚಾಂಪಿಯನ್ ಆಗಿ ಹೊರ ಹೊಮ್ಮಿತು. ಫೈನಲ್ ಪಂದ್ಯದ ರುವಾರಿ ಫಯಾಝ್ ಕೃಷ್ಣಾಪುರ ಪಂದ್ಯಶ್ರೇಷ್ಟ ಪ್ರಶಸ್ತಿಗೆ ಬಾಜನಾದರು. ಕ್ರೀಡಾಕೂಟದ ಉತ್ತಮ ಎಸೆತಗಾರ ಸಲಾಮ್ ಪೂಲೊಗ್ ಪಾಲಾಯಿತು ಹಾಗೂ ಸರಣಿ ಶ್ರೇಷ್ಠ ನವಾಝ್ ಕೃಷ್ಣಾಪುರ ಸ್ವೀಕರಿಸಿದರು. ಕೊನೆಯಲ್ಲಿ ಸಮಾರೋಪ ಸಮಾರಂಭ ನಡೆಯಿತು. ಜಿಝಾನ್ ಬೈಶ್ ನ ಫೆನ್ಸ್ ಕ್ರಿಡಾಂಗಣ ಹಲವು ಅವಿಸ್ಮರಣಿಯ ಗಳಿಗೆಗೆ ಸಾಕ್ಷಿಯಾಯಿತು. ಈ ಸಮಾರಂಭದಲ್ಲಿ ಫ್ಯಾಷನ್ ಪ್ಲಸ್ ಮೂಡಬಿದ್ರೆ, ಮೆಲ್ಟಿಂಗ್ ಪಾಯಿಂಟ್ ಕೃಷ್ಣಾಪುರ ಮತ್ತು ಅಲ್ ಫವಾದ್ ಜುಬೈಲ್ ಪ್ರಾಯೋಜಕತ್ವದ ನೂತನ ಕ್ರಿಕೇಟ್ ಸಮವಸ್ತ್ರದಲ್ಲಿ ಬ್ಲಡ್ ಡೋನರ್ಸ್ ಮಂಗಳೂರು (ರಿ) ಇದರ ಲೋಗೊ ಅಳವಡಿಸಿದ ಬ್ಲಡ್ ಡೋನರ್ಸ್ ಮಂಗಳೂರು ಇದರ ಅಡ್ಮಿನ್ ಜನಾಬ್ ನೌಶಾದ್ ಕಲಂದರ್ ಕರ್ನಿರೆ ನೇತೃತ್ವದಲ್ಲಿ ಬಿಡುಗಡೆಗೊಳಿಸಲಾಯಿತು. ವೇದಿಕೆಯಲ್ಲಿ ಝಕರಿಯ ವಳವೂರು, ಸಲೀಮ್ ಉಪ್ಪಿನಂಗಡಿ, ನವಾಝ್ ಹಾಗೂ ಅರ್ಶಾದ್ ಬಿನ್ ಫಹಾದ್ ಉಪಸ್ಥಿತರಿದ್ದರು. ಕಾರ್ಯಮವನ್ನು ಅಝೀದ್ ಫತೇಹ್ ನಿರೂಪಿಸಿ ಝಿಯಾದ್ ಕೃಷ್ಣಾಪುರ ವಂದಿಸಿದರು.
ವರದಿ - ಹಫೀಝ್ ಇಸ್ಮಾಯಿಲ್ ಕೆ.ಸಿ ರೋಡ್ (ಅಡ್ಮಿನ್ - ಬ್ಲಡ್ ಡೋನರ್ಸ್ ಮಂಗಳೂರು(ರಿ)
)

No comments
Post a Comment