ಸರ್ಕಾರಿ ರಸ್ತೆಯಲ್ಲೇ ಅಕ್ರಮವಾಗಿ ಕಟ್ಟಡ ನಿರ್ಮಾಣ. ಮೈಸೂರಿನಲ್ಲಿ ರಸ್ತೆಗೆ ಅಡ್ಡಲಾಗಿ ನಿರ್ಮಾಣವಾಯ್ತು ಐಷಾರಾಮಿ ಮನೆ.

No comments
ವರದಿ : ಮಾಂಸುಷರೀಫ್ ಹುಣಸೂರು

 ಹುಣಸೂರು : ಮೈಸೂರಿನಲ್ಲಿ ರಸ್ತೆಗೆ ಅಕ್ರಮವಾಗಿ ಅಡ್ಡಲಾಗಿ  ಐಷಾರಾಮಿ ಮನೆ ನಿರ್ಮಿಸಲಾಗಿದೆ. ಯಾವುದೇ ದಾಖಲೆಗಳು ಇಲ್ಲದೆ ಮನೆ ನಿರ್ಮಿಸಲಾಗಿದೆ. ಹುಣಸೂರಿನ ಹೌಸಿಂಗ್ ಬೋರ್ಡ್‌ನಲ್ಲಿ ಮನೆ ನಿರ್ಮಾಣ ಮಾಡಲಾಗಿದೆ. ಪುರಸಭೆಯ ಎಚ್ಚರಿಕೆಗು ಬಗ್ಗದೆ ಮನೆಯ ಮಾಲೀಕರು ಮನೆಯನ್ನು ನಿರ್ಮಿಸಿದ್ದಾರೆ. ಹುಣಸೂರು ಪುರಸಭೆಯಿಂದ ನೋಟಿಸ್ ಮೇಲೆ ನೋಟಿಸ್. ಈಗಾಗಲೇ ಸಾಕಷ್ಟು ಬಾರೀ ಸೂಕ್ತ ದಾಖಲೆ ಒದಗಿಸುವಂತೆ ಕಟ್ಟಡದ ಮಾಲೀಕರಿಗೆ ಸೂಚನೆ ನೀಡಲಾಗಿತ್ತು. ಆದರೆ ಸೂಚನೆ ಮೂಲಕ ನೋಟಿಸ್ ನೀಡಿದ್ರು ಯಾವುದೇ ದಾಖಲೆ ಸಲ್ಲಿಕೆ ಇಲ್ಲ. ಅಕ್ರಮವಾಗಿದೆ ಎಂದು ಸಾರ್ವಜನಿಕರು ಸ್ಥಳೀಯರಿಂದ ಸರಣಿ ದೂರು ನೀಡಿದ್ದಾರೆ. ಆದರೆ ತಲೆಕೆಡಿಸಿಕೊಳ್ಳದ ನಿರ್ಮಾಣವಾಗ್ತಿದೆ ಬೃಹತ್ ಮನೆ.


 ಇದು ನಿಮಗೆ ಕೊನೆಯ ಎಚ್ಚರಿಕೆ ಎಂದು ನೋಟಿಸ್ ಜಾರಿ ಮಾಡಿದ್ದಾರೆ. ಆದರು ಕಾಮಗಾರಿ ಮುಂದುವರೆಸಿರುವ ಮನೆ ಮಾಲೀಕರು. 30ಅಡಿ ರಸ್ತೆಯಲ್ಲೇ ನಿರ್ಮಾಣವಾಗ್ತಿದೆ ಅದ್ದೂರಿ ಮನೆ. ನೋಟಿಸ್ ಕೊಟ್ಟಾಗ ಸ್ಟಾಪ್ ಆಗುತ್ತೆ, ಏಕಾಏಕಿ ಶುರುವಾಗುತ್ತೆ. 30ಅಡಿ ರಸ್ತೆಗಾಗಿ ಇರುವ ಜಾಗವೇ ಇವರಿಗೆ ಸೈಟ್.? ಕೆ.ಟಿ.ರಮ್ಯ ಎಂಬುವವರಿಂದ ಅಕ್ರಮ ಕಟ್ಟಡ ನಿರ್ಮಾಣ ಆರೋಪ. ಸ್ಥಳೀಯರು ಹಾಗೂ ಹೌಸಿಂಗ್ ಬೋರ್ಡ್ ನಿವಾಸಿಗಳಿಂದ ಗಂಭೀರ ಆರೋಪ. ಆರೋಪಕ್ಕೆ ಪುಷ್ಠಿ ನೀಡುವಂತೆ ಯಾವುದೇ ದಾಖಲೆ ಸಲ್ಲಿಸದ ಕೆ.ಟಿ.ರಮ್ಯ. ಪ್ರಭಾವಿಗಳು ನನ್ನ ಹಿಂದಿದ್ದಾರೆ ಎಂದು ಹೇಳ್ತಾರಂತೆ ಮಾಲೀಕರು. ಪುರಸಭೆಯ ಕೆಳ ಹಂತದ ಅಧಿಕಾರಿಗಳು ಅಕ್ರಮದಲ್ಲಿ ಭಾಗಿಯಾಗಿರೋ ಶಂಕೆ. ಆ ಕಾರಣದಿಂದಲೇ ಕಂಡು ಕಾಣದಂತಿರುವ ಹಿರಿಯ ಅಧಿಕಾರಿಗಳು.

No comments

Post a Comment