ಲಾರಿ - ಕಾರು ಡಿಕ್ಕಿ: ಬೆಂಗಳೂರಿನಲ್ಲಿ ವೈದ್ಯರಾಗಿರುವ ಮೂರ್ನಾಡಿನ ಅಪ್ಪಯ್ಯ ಸಾವು : ಸಾಕುನಾಯಿ ಬಚಾವ್

No comments

ಮಡಿಕೇರಿ: ಲಾರಿ ಹಾಗೂ ಕಾರು ನಡುವೆ ಡಿಕ್ಕಿ ಸಂಭವಿಸಿ ವ್ಯಕ್ತಿಯೊಬ್ಬರು ದುರ್ಮರಣವನ್ನಪ್ಪಿ ಮಹಿಳೆ ಚಿಂತಾಜನಕರಾಗಿ ಆಸ್ಪತ್ರೆಗೆ ದಾಖಲಾಗಿರುವ ಘಟನೆ ವರದಿಯಾಗಿದೆ. ಅದೃಷ್ಟವಶಾತ್ ಕಾರಿನಲ್ಲಿದ್ದ ಸಾಕು ನಾಯಿ ಪ್ರಾಣಾಪಾಯದಿಂದ ಪಾರಾಗಿದೆ. ಬೆಂಗಳೂರಿನಲ್ಲಿ ವೈದ್ಯರಾಗಿರುವ ಮೂಲತಃ ಮೂರ್ನಾಡಿನ ಕರ್ನಯನ ಅಪ್ಪಯ್ಯ (50) ಎಂಬುವವರೇ ಮೃತ ದುರ್ದೈವಿಯಾಗಿದ್ದಾರೆ. ಇಂದು (ತಾ. 4) ಬೆಳಿಗ್ಗೆ ಕೆ.ಎ. 03 ಎಂ.ಕೆ. 4095 ಸ್ವಿಫ್ಟ್ ಡಿಸೈರ್ ಕಾರನ್ನು ಸ್ವತಃ ಚಲಾಯಿಸಿಕೊಂಡು ಬೆಂಗಳೂರಿನಿಂದ ಪತ್ನಿ ಹಾಗೂ ಸಾಕು ನಾಯಿಯೊಂದಿಗೆ ಚೆನ್ನರಾಯಪಟ್ಟಣ ಮಾರ್ಗವಾಗಿ ಮೂರ್ನಾಡಿನತ್ತ ಪ್ರಯಾಣ ಬೆಳೆಸಿದ್ದಾರೆ. ಬೆಳಿಗ್ಗೆ 11.30ರ ಸಮಯದಲ್ಲಿ ಮಾರ್ಗಮಧ್ಯದ ತೊರೆನೂರಿನಲ್ಲಿ ನಿಯಂತ್ರಣ ಕಳೆದುಕೊಂಡ ಕಾರು ವಿರುದ್ಧ ದಿಕ್ಕಿನಿಂದ ಬರುತ್ತಿದ್ದ ಕೆ.ಎ. 42 – 3826 ಲಾರಿಗೆ ಅಪ್ಪಳಿಸಿದೆ. ಇದರಿಂದ ತೀವ್ರ ಗಾಯಗೊಂಡು ಚಿಂತಾಜನಕರಾದ ಅಪ್ಪಯ್ಯ ಅವರು ಸ್ಥಳದಲ್ಲಿಯೇ ಪ್ರಾಣತೆತ್ತಿದ್ದಾರೆ. ಕಾರಿನಲ್ಲಿದ್ದ ಅಪ್ಪಯ್ಯರವರ ಪತ್ನಿಗೆ ಗಂಭೀರ ಗಾಯವಾಗಿದ್ದು ಮೈಸೂರು ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಇವರೊಂದಿಗೆ ಇದ್ದ ಸಾಕುನಾಯಿ ಅದೃಷ್ಟವಶಾತ್ ಯಾವುದೇ ಗಾಯಕ್ಕೊಳಗಾಗದೇ ಪ್ರಾಣಾಪಾಯದಿಂದ ಪಾರಾಗಿದೆ. ಕುಶಾಲನಗರ ಸಂಚಾರಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಸಬ್ ಇನ್ಸ್ ಪೆಕ್ಟರ್ ಸೋಮೇಗೌಡ ಮತ್ತು ಸಿಬ್ಬಂದಿಗಳು ಸ್ಥಳಕ್ಕೆ ಭೇಟಿ ನೀಡಿ ಮುಂದಿನ ಕ್ರಮಕೈಗೊಂಡಿದ್ದಾರೆ.

No comments

Post a Comment