ಕುಶಾಲನಗರ,ಜೂ೮: ಕೊಡಗು ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಮಾಧ್ಯಮದವರ ಮೇಲೆ ತೋರಿದ ಅನುಚಿತ ವರ್ತನೆಯನ್ನು ಖಂಡಿಸಿ ಕುಶಾಲನಗರ ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘದ ವತಿಯಿಂದ ಪಟ್ಟಣದ ಕಾರ್ಯಪ್ಪ ವೃತ್ತದಲ್ಲಿ ಶನಿವಾರ ಪ್ರತಿಭಟನೆ ನಡೆಸಲಾಯಿತು. ಮಡಿಕೇರಿಯಲ್ಲಿ ನಡೆದ ಸಭೆಯೊಂದರಲ್ಲಿ ಜಿಲ್ಲಾ ಉಸ್ತುವಾರಿ ಸಚಿವರಾದ ಸಾ.ರಾ.ಮಹೇಶ್ ಅವರು ಮಾಧ್ಯಮದವರನ್ನು ಸಭೆಯಿಂದ ಹೊರಹೋಗುವಂತೆ ಹೇಳಿ ಮಾಧ್ಯಮದವರನ್ನು ಅವಮಾನಿಸಿದ್ದನ್ನು ಖಂಡಿಸಿ ಸಚಿವರ ವಿರುಧ್ಧ ಘೋಷಣೆ ಕೂಗಿದರು. ಸಚಿವರು ಮಾಧ್ಯಮದವರ ಬಳಿ ಕ್ಷಮೆ ಕೇಳಬೇಕು ಎಂದು ಒತ್ತಾಯಿಸಿದರು. ಈ ಸಂದರ್ಭ ಮಾತನಾಡಿದ ಕುಶಾಲನಗರ ಪ್ರೆಸ್ ಕ್ಲಬ್ ಅಧ್ಯಕ್ಷ ರಘು, ಸಚಿವರು ಮಾಧ್ಯಮದವರ ಮೇಲೆ ದರ್ಪತನ ತೋರಿರುವುದು ಸರಿಯಲ್ಲ. ಇದನ್ನು ಕುಶಾಲನಗರ ಪ್ರೆಸ್ ಕ್ಲಬ್ ಹಾಗೂ ಕರ್ನಾಟಕ ಸಂಪಾದಕರು ಹಾಗೂ ವರದಿಗಾರರ ಸಂಘ ಖಂಡಿಸುತ್ತದೆ ಎಂದರು. ಕುಶಾಲನಗರ ಪ್ರೆಸ್ ಕ್ಲಬ್ ಪ್ರಭಾರ ಕಾರ್ಯದರ್ಶಿ ಕೆ.ಟಿ.ಶ್ರೀನಿವಾಸ್ ಮಾತನಾಡಿ, ಸಚಿವರಾದ ಸಾ.ರಾ.ಮಹೇಶ್ ಅವರು ಮಾಧ್ಯಮದವರನ್ನು ಸಭೆಯಿಂದ ಹೊರನಡೆಯುವಂತೆ ಹೇಳಿ ಪತ್ರಕರ್ತರನ್ನು ಅವಮಾನಿಸಿದ್ದಾರೆ. ಈ ಹಿನ್ನಲೆ ಸಚಿವರ ವಿರುದ್ಧ ಪ್ರತಿಭಟನೆ ನಡೆಸಲಾಗುತ್ತಿದೆ. ಸಚಿವರ ಕೂಡಲೇ ಮಾಧ್ಯಮದವರ ಬಳಿ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದರು. ಕುಶಾಲನಗರ ಪ್ರೆಸ್ ಕ್ಲಬ್ ಸಹಕಾರ್ಯದರ್ಶಿಯಾದ ಕೆ.ಬಿ.ಶಂಶುದ್ಧೀನ್ ಮಾತನಾಡಿ, ಈ ಹಿಂದೆ ಸಚಿವರಾದ ಸಾರಾ ಮಹೇಶ್ ಅವರು ಕುಶಾಲನಗರದ ಆನೆಕಾಡಿನ ಬಳಿ ಅಪಘಾತಕ್ಕೀಡಾದ ಜಿಂಕೆಯನ್ನು ತಮ್ಮ ವಾಹನ ನಿಲ್ಲಿಸಿ ನೋಡಿದ್ದಕ್ಕಾಗಿ, ಮಾನವೀಯತೆ ಮೆರೆದ ಉಸ್ತುವಾರಿ ಸಚಿವರು ಎಂದು ಇದೇ ಮಾಧ್ಯಮ ಮಿತ್ರರು ಪ್ರಚಾರ ನೀಡಿದ್ದರು. ಆದರೆ ಪರಿಸರ ದಿನದಂದು ಮರಗಳ ಮಾರಣ ಹೋಮ ಮಾಡಿದ ಬಗ್ಗೆ ಪತ್ರಕರ್ತರು ವರದಿ ಮಾಡಿದ್ದಕ್ಕಾಗಿ ಸಚಿವರು ಈ ರೀತಿ ವರ್ತಿಸಿದ್ದು ಖಂಡನೀಯ ಎಂದರು. ಈ ಸಂದರ್ಭ ಕುಶಾಲನಗರ ಪ್ರೆಸ್ ಕ್ಲಬ್ ಖಜಾಂಚಿ ಶಿವರಾಜ್, ಪ್ರಶಾಂತ್, ಸದಸ್ಯರಾದ ಮೋಹನ್ ಹಾಗೂ ಇನ್ನಿತರರು ಇದ್ದರು.
ಉಸ್ತುವಾರಿ ಸಚಿವರ ವರ್ತನೆ ಖಂಡಿಸಿ ಕುಶಾಲನಗರ ಪ್ರೆಸ್ ಕ್ಲಬ್ ವತಿಯಿಂದ ಪ್ರತಿಭಟನೆ

No comments
Post a Comment