ಕುಶಾಲನಗರ,ಜು೭: ಇತ್ತೀಚಿಗೆ ಕುಶಾಲನಗರ ವ್ಯಾಪ್ತಿಯಲ್ಲಿ ಯುವಕರು ಮಾದಕ ವಸ್ತುಗಳಿಗೆ ಬಲಿಯಾಗುತ್ತಿದ್ದು, ಮಾದಕವಸ್ತುಗಳನ್ನು ಸೇವಿಸಿ ಸಾರ್ವಜನಿಕರಿಗೆ ತೊಂದರೆ ನೀಡುತ್ತಿದ್ದಾರೆ ಎಂದು ಕುಶಾಲನಗರ ನಾಗರಿಕರು ಆರೋಪಿಸಿದ್ದಾರೆ. ಕುಶಾಲನಗರದಲ್ಲಿ ವಿಪರೀತವಾಗಿ ಗಾಂಜಾ ವ್ಯಸನಿಗಳು ಹೆಚ್ಚುತ್ತಿದ್ದು, ಗಾಂಜಾದ ಅಮಲಿನಲ್ಲಿ ಅಮಾಯಕರ ಮೇಲೆ ಹಲ್ಲೆ ನಡೆಸುತ್ತಿರುವ ಪ್ರಕರಣಗಳು ಹೆಚ್ಚಾಗುತ್ತಿವೆ. ಕೆಲವು ದಿನಗಳ ಹಿಂದೆ ಪಟ್ಟಣದ ಹೃದಯ ಭಾಗದಲ್ಲಿಯೇ ಸಂಬಂಧವಿಲ್ಲದ ವಿಷಯಕ್ಕೆ ಗಾಂಜಾ ವ್ಯಸನಿಗಳ ಗುಂಪೊಂದು ಅಮಾಯಕ ಯುವಕನ ಮೇಲೆ ಹಲ್ಲೆ ನಡೆಸಿದ್ದು, ಈ ಬಗ್ಗೆ ಕುಶಾಲನಗರ ಪಟ್ಟಣ ಪೋಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಇಪ್ಪತ್ತರ ಹರೆಯದ ಯುವಕರು, ಕಾಲೇಜು ವಿದ್ಯಾರ್ಥಿಗಳು ಗಾಂಜಾ ಸರಬರಾಜು ಮಾಡುವ ಕೆಲಸ ಮುಂದಾಗಿದ್ದು, ಯುವಕರನ್ನು ಗಾಂಜಾ ಸಪ್ಲೈ ಮಾಡುವ ಏಜೆಂಟರುಗರುಗಳಾಗಿ ಬಳಸಿಕೊಳ್ಳುತ್ತಿದ್ದಾರೆ ಎಂದು ಜನವಲಯದಲ್ಲಿ ಮಾತುಗಳು ಕೇಳಿ ಬರುತ್ತಿದೆ. ಒಂದೆಡೆ ಮಾದಕ ವಸ್ತುಗಳಿಗೆ ಯುವಕರು ಬಲಿಯಾಗುತ್ತಿದ್ದರೇ ಮತ್ತೊಂದೆಡೆ ಕಾಲೇಜು ವಿದ್ಯಾರ್ಥಿಗಳು, ಇಪ್ಪತ್ತರ ಹರೆಯದ ಯುವಕರು ಮಾದಕ ವಸ್ತುಗಳನ್ನು ಸರಬರಾಜು ಮಾಡುತ್ತಿರುವುದು ವಿಪರ್ಯಾಸ. ಕುಶಾಲನಗರದ ಬೈಚನಹಳ್ಳಿಯ ಪೆಟ್ರೋಲ್ ಬಂಕ್ ಮುಂಭಾಗದ ಲೇಔಟ್, ಖಾಸಗಿ ಬಸ್ ನಿಲ್ದಾಣ, ಅಯ್ಯಪ್ಪ ಸ್ವಾಮಿ ದೇವಾಲಯ ರಸ್ತೆಯ ಹೊಳೆ, ಪಟ್ಟಣದ ಸಂತೆಮಳ, ತ್ಯಾಗರಾಜ ರಸ್ತೆ ಯ ಹೊಳೆ, ಕುಶಾಲನಗರದ ಸರ್ಕಾರಿ ಕಾಲೇಜಿನ ಪಕ್ಕದಲ್ಲಿರುವ ಖಾಸಗಿ ಲೇಔಟ್, ಸುಂದರನಗರದ ಪ್ರಥಮ ದರ್ಜೆ ಕಾಲೇಜು ಬಳಿಯಿರುವ ವಾಲ್ಮೀಕಿ ಭವನ , ಮಾದಾಪಟ್ಟಣ ಇಂಜಿನಿಯರಿಂಗ್ ಹಾಗೂ ಪಾಲಿಟೆಕ್ನಿಕ್ ಕಾಲೇಜಿನ ಸುತ್ತಮುತ್ತ ಹಾಗೂ ಇನ್ನಿತರ ಪ್ರದೇಶಗಳಲ್ಲಿ ಗಾಂಜಾ ಸೇವಿಸುವ ಯುವಕರು ಗುಂಪನ್ನು ಕಾಣಬಹುದಾಗಿದೆ. ಅಲ್ಲಲ್ಲಿ ಗುಂಪುಕಟ್ಟಿ ನಿಲ್ಲುವ ಗಾಂಜಾ ವ್ಯಸನಿಗಳು, ತಮ್ಮತಮ್ಮಲ್ಲೇ ಗೊಂದಲ ಗಲಾಟೆ ಗಳನ್ನು ಮಾಡಿಕೊಳ್ಳುವುದು, ಸಾರ್ವಜನಿಕರಿಗೆ ಕಿರುಕುಳ ನೀಡಿವುದು, ಗಾಂಜಾ ಅಮಲಿನಲ್ಲಿ ಬೇಕಾಬಿಟ್ಟಿಯಾಗಿ ವಾಹನಗಳನ್ನು ಚಲಾಯಿಸ ಮೂಲಕ ಸಾರ್ವಜನಿಕರಿಗೆ ಕಿರುಕುಳ ನೀಡುತ್ತಿದ್ದಾರೆ. ಪ್ರತ್ಯೇಕವಾಗಿ ಪುಂಡ ಯುವಕರ ತಂಡ ಕಾಲೇಜು ವ್ಯಾಪ್ತಿಯಲ್ಲಿ ಕರ್ಕಶಭರಿತವಾದ ವಾಹನಗಳನ್ನು ಚಲಾಯಿಸಿ ಶಾಲಾ ಕಾಲೇಜಿನಲ್ಲಿ ಪಾಠ ಪ್ರವಚನಗಳನ್ನು ನಡೆಸಲು ತೊಂದರೆ ಮಾಡುತ್ತಿದ್ದಾರೆ. ಅಲ್ಲದೇ ವಿದ್ಯಾರ್ಥಿನಿಯರು ಶಾಲೆ, ಕಾಲೇಜಿಗೆ ತೆರಳುವಾಗ ಹಾಗೂ ಮನೆಗೆ ಹಿಂದಿರುಗುವಾಗ ಪುಂಡ ಹುಡುಗರು ಚುಡಾಯಿಸುತ್ತಿರುವ ಬಗ್ಗೆ ಕೆಲವು ವಿದ್ಯಾರ್ಥಿನಿಯರು ಹಾಗೂ ಸಾರ್ವಜನಿಕರು ಆರೋಪಿಸಿದ್ದಾರೆ. ಪುಂಡ ಯುವಕರು ಗಾಂಜಾ ಸೇವಿಸಿ ಕಾಲೇಜು ಬಳಿ ಕೈಬಿಟ್ಟು ಬೈಕನ್ನು ಓಡಿಸುವುದು, ವೀಲಿಂಗ್ ಮುಂತಾದ ಸ್ಟಂಟ್ ಮಾಡಿ ವಿದ್ಯಾರ್ಥಿನಿಯರಿಗೆ ತೊಂದರೆ ನೀಡುತ್ತಾರೆ ಎಂದು ಕುಶಾಲನಗರದ ಗುಮ್ಮನಕೊಲ್ಲಿ ನಿವಾಸಿ ದೀಪಕ್ ಪತ್ರಿಕೆಗೆ ಮಾಹಿತಿ ನೀಡಿದ್ದಾರೆ. ಗಾಂಜಾ ಸೇವಿಸಿ ವಾಹನ ಚಲಾಯಿಸಿವ ಯುವಕರಿಂದ ಹಲವು ಅಪಘಾತಗಳು ಸಂಭವಿಸಿದ್ದು, ಹೆಲ್ಮೆಟ್ ದಾಳಿಯಲ್ಲಿ ಬಿಸಿಯಾಗಿರುವ ಸಂಚಾರಿ ಪೋಲೀಸರು ಇವುಗಳಿಗೆ ಕಡಿವಾಣ ಹಾಕಬೇಕಾಗಿದೆ. ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವಕರ ಮೇಲೆ ಸಂಬಂಧಪಟ್ಟ ಪೋಷಕರು ಹೆಚ್ಚಿನ ಜವಾಬ್ದಾರಿಯನ್ನು ವಹಿಸಬೇಕಾಗಿದೆ. ಒಟ್ಟಿನಲ್ಲಿ ವಿಪರೀತವಾಗಿ ಹೆಚ್ಚುತ್ತಿರುವ ಗಾಂಜಾ ವ್ಯಸನಿಗಳ ಹಾವಳಿಗೆ ಕುಶಾಲನಗರ ಪೋಲೀಸರು ಕಡಿವಾಣ ಹಾಕಬೇಕಾಗಿದೆ.
ಮಾದಕ ವಸ್ತುಗಳಿಗೆ ಬಲಿಯಾಗುತ್ತಿರುವ ಯುವಕರು: ಕುಶಾಲನಗರದಲ್ಲಿ ಹೆಚ್ಚುತ್ತಿರುವ ಗಾಂಜಾ ವ್ಯಸನಿಗಳ ಹಾವಳಿ

No comments
Post a Comment