ನಂದನವನದೊಳ್' ಚಿತ್ರ ತೆರೆಗೆ ಬರಲು ಸಜ್ಜು..


✍ಲಕ್ಷ್ಮಿಕಾಂತ್ ಕೋಮರಪ್ಪ
ಸೋಮವಾರಪೇಟೆ : ಕೊಡಗು ಜಿಲ್ಲೆ ಪುಟ್ಟ ಜಿಲ್ಲೆ ಆದರು ದೇಶಕ್ಕೆ ಯೋದರನ್ನು, ಕ್ರೀಡಾ ಪಟುಗಳನ್ನು, ಸಿನಿಮಾ ತಾರೆಯರನ್ನು ಹೀಗೆ ಹಲವು ಕ್ಷೇತ್ರದಲ್ಲಿನ ಪ್ರತಿಭೆಗಳನ್ನು ಕೊಡುಗೆ ನೀಡಿದೆ ಕೊಡಗಿನ ಸೌಂದರ್ಯ,ಸಂಸ್ಕೃತಿ,ಸೈನಿಕರ ಧೈರ್ಯ ಸಹಾಸಗಳನ್ನು ವ್ಯಕ್ತಪಡಿಸುವ ಚಲನಚಿತ್ರಗಳನ್ನು ಚಿತ್ರರಂಗಗಳು ನೀಡಿದೆ. ಅದೇ ರೀತಿಯಲ್ಲಿ ಹೊಸ ಪ್ರತಿಭೆಗಳನೊಳಗೊಂಡ ಹೊಸ ಚಿತ್ರ ತಂಡವು ಕೊಡಗಿನ ಸೌಂದರ್ಯ ಹಾಗೂ ಸಂಸ್ಕೃತಿಯನ್ನು ತಿಳಿಸಿಕೊಡುವಂತಹ 'ನಂದನವನದೊಳ್' ಚಿತ್ರವನ್ನು ತೆರೆ ಮೇಲೆ ತರಲು ಸಜ್ಜಾಗಿದೆ. "ಯಕ್ಷಸಿರಿ" ಕ್ರಿಯೇಶನ್ಸ್ ರವರ ಪ್ರಪ್ರಥಮ ಚಿತ್ರವಾಗಿದ್ದು ನಿರ್ದೇಶಕ ಸಂದೀಪ್ ಶೆಟ್ಟಿ ರವರ ನಿರ್ದೇಶನದಲ್ಲಿ ಮೂಡಿ ಬರಲಿದೆ. ನಾಯಕ ನಟನಾಗಿ ಭರತ್ ರೈ , ನಾಯಕಿ ನಟಿಯಾಗಿ ಕೈಬಿಲಿರ ಸ್ಮಿತಾ ಕುಶಾಲಪ್ಪ ,ಸಹ ನಟರಾಗಿ ವಿಠಲ್ ನಾಣಯ್ಯ, ಭಜನ್ ಭೋಜಪ್ಪ, ಪ್ರಭ ನಾಣಯ್ಯ ಸೇರಿದಂತೆ ಹೀಗೆ ಹಲವು ಕೊಡಗಿನ ಹೊಸ ಪ್ರತಿಭೆಗಳು ಈ ಚಿತ್ರದಲ್ಲಿ ನಟಿಸಿದ್ದಾರೆ ಸದ್ಯ ಈ ಸಿನಿಮಾದ "ಉಪ್ಪು ಕಾರ" ಎನ್ನುವ ಹಾಡು ಬಿಡುಗಡೆಯಾಗಿದ್ದು. ಕೊಡಗಿನ ಕಾವೇರಿ ತಾಯಿಯ ಬಗ್ಗೆಗಿನ ಹಾಡುಗಳು , ಶ್ರೀ ಪಂಜೆ ಮಂಗೇಶರಾಯರು ಈ ಹಾಡಿನ ಸಾಹಿತ್ಯ ಬರೆದಿದ್ದಾರೆ. ಶಿವಸತ್ಯ ರವರ ಸಂಗೀತ ಹಾಗೂ ರೀಟಾ ಉತ್ತಯ್ಯ ಅವರ ದ್ವನಿ ಹಾಡಿನಲಿದೆ. 'ನಂದನವನದೊಳ್' ಸಿನಿಮಾ ಬಹುತೇಕ ಕೊಡಗಿನಲ್ಲಿ ಚಿತ್ರೀಕರಣಗೊಂಡಿದ್ದು ಜುಲೈ ತಿಂಗಳಲ್ಲಿ ಬಿಡುಗಡೆಯಾಗಿ ತೆರೆಮೇಲೆ ಬರಲಿದೆ.