ಮಡಿಕೇರಿ :ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯನ್ನು ವ್ಯವಸ್ಥಿತವಾಗಿ ಆಯೋಜಿಸಲು ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಆಯುಷ್ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಸೂಚನೆ ನೀಡಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಐದನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆಯ ಪೂರ್ವಭಾವಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಜಿಲ್ಲಾಧಿಕಾರಿ ಅನೀಸ್ ಕಣ್ಮಣಿ ಜಾಯ್ ಅವರು ಕಳೆದ ವರ್ಷ ನಡೆಸಿದ ರೀತಿಯಲ್ಲಿ ಯಾವುದಾದರೂ ಮಾರ್ಪಾಡು, ಬದಲಾವಣೆಗಳು ಇದ್ದಲ್ಲಿ ಸರಿಪಡಿಸಿಕೊಂಡು ಅಂತರರಾಷ್ಟ್ರೀಯ ಯೋಗದಿನವನ್ನು ಯಶಸ್ವಿಗೊಳಿಸಲು ತಿಳಿಸಿದರು. ಜಿಲ್ಲಾ ಆಯುಷ್ ಅಧಿಕಾರಿ ಡಾ.ಎಚ್.ರಾಮಚಂದ್ರ ಅವರು ಯೋಗ ದಿನಾಚರಣೆ ಸಂಬಂಧ ತೆಗೆದುಕೊಂಡಿರುವ ಕ್ರಮಗಳ ಕುರಿತು ಸಭೆಗೆ ಮಾಹಿತಿ ನೀಡಿ ನಗರದ ಮೈತ್ರಿ ಹಾಲ್‍ನಲ್ಲಿ ಯೋಗ ದಿನಾಚರಣೆ ಆಚರಿಸಲು ಉದ್ದೇಶಿಸಿದ್ದು, ತಾಲ್ಲೂಕು ಮಟ್ಟ ಮತ್ತು ಗ್ರಾ.ಪಂ.ಮಟ್ಟದಲ್ಲೂ ಯೋಗ ದಿನಾಚರಣೆ ಆಚರಿಸಲು ಕ್ರಮ ಕೈಗೊಳ್ಳಲಾಗಿದೆ ಎಂದು ತಿಳಿಸಿದರು. ಜೂನ್, 18 ರಂದು ಸಂಜೆ 6 ರಿಂದ 7 ಗಂಟೆಯವರೆಗೆ ಯೋಗ ಜಾಥ ಹಮ್ಮಿಕೊಂಡಿದ್ದು, ಜಾಥವು ಕೋಟೆ ಆವರಣದಿಂದ ಪ್ರಾರಂಭಗೊಂಡು ನಗರದ ಬಸ್ ನಿಲ್ದಾಣದವರೆಗೆ ನಡೆಯಲಿದೆ. ಈ ಬಾರಿಯ ಯೋಗ ದಿನಾಚರಣೆಯ ಘೋಷ ವಾಕ್ಯ ಹೃದಯಕ್ಕಾಗಿ ಯೋಗ ಎಂದು ಮಾಹಿತಿ ನೀಡಿದರು. ಜೂನ್, 21 ರಂದು ಬೆಳಗ್ಗೆ 6.30 ಕ್ಕೆ ಮೈತ್ರಿಹಾಲ್‍ನಲ್ಲಿ ಕಾರ್ಯಕ್ರಮ ಆರಂಭಗೊಳ್ಳಲಿದ್ದು, ಬೆಳಗ್ಗೆ 7 ರಿಂದ 8 ಗಂಟೆಯವರೆಗೆ ಸಾಮೂಹಿಕ ಯೋಗ ಕಾರ್ಯಕ್ರಮ ನಡೆಯಲಿದ್ದು, ಕೇಂದ್ರ ಸರ್ಕಾರ ನಿಗದಿಪಡಿಸಿದ 22 ಯೋಗಾಸನಗಳು ಹಾಗೂ 4 ಪ್ರಾಣಾಯಾಮ ನಡೆಯಲಿದೆ ಎಂದು ಸಭೆಗೆ ಡಾ.ಎಚ್.ರಾಮಚಂದ್ರ ಅವರು ಮಾಹಿತಿ ನೀಡಿದರು. ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಡಾ.ಸುಮನ್ ಡಿ.ಪೆನ್ನೇಕರ್ ಅವರು ಅಂತರರಾಷ್ಟ್ರೀಯ ಯೋಗ ದಿನಾಚರಣೆ ಸಂಬಂಧ ಹಲವು ಸಲಹೆ ಸೂಚನೆ ನೀಡಿದರು. ಉಪ ವಿಭಾಗಾಧಿಕಾರಿ ಟಿ.ಜವರೇಗೌಡ, ಡಿಎಚ್‍ಒ ಡಾ.ಕೆ.ಮೋಹನ್, ಆಯುಷ್ ವೈದ್ಯರಾದ ಡಾ.ಶುಭ, ಅಶ್ವಿನಿ ಆಸ್ಪತ್ರೆಯ ವೈದ್ಯಾಧಿಕಾರಿ ಕುಲಕರ್ಣಿ, ಭಾರತೀಯ ವಿದ್ಯಾಭವನದ ಮಹೇಶ್ ಕುಮಾರ್, ಎನ್‍ಸಿಸಿ ಕಮಾಂಡೆಂಟ್ ಅಧಿಕಾರಿ ಇತರರು ಇದ್ದರು.
ಅಂತರರಾಷ್ಟ್ರೀಯ ಯೋಗ ದಿನಾಚರಣೆ ವ್ಯವಸ್ಥಿತವಾಗಿ ಆಯೋಜಿಸಲು ಡಿಸಿ ಸಲಹೆ