ಪ್ರವಾಸಿ ಟ್ಯಾಕ್ಸಿಗೆ ಅರ್ಜಿ ಆಹ್ವಾನ

No comments

 ಮಡಿಕೇರಿ: ಕರ್ನಾಟಕ ಪ್ರವಾಸೋದ್ಯಮ ಇಲಾಖೆಯು 2019-20 ಸಾಲಿನಲ್ಲಿ ಕೊಡಗು ಜಿಲ್ಲೆಯಲ್ಲಿ ವಾಸಿಸುತ್ತಿರುವ ಲಘು ವಾಹನ ಚಾಲನ ಪರವಾನಗಿಯೊಂದಿಗೆ ಲಘು ವಾಹನ ಚಾಲನ ಬ್ಯಾಡ್ಜ್ ಹೊಂದಿದ ಅರ್ಹ ಪರಿಶಿಷ್ಟ ಜಾತಿಯ 03 ಹಾಗೂ ಪರಿಶಿಷ್ಟ ಪಂಗಡದ 01 ವಿದ್ಯಾವಂತ ನಿರುದ್ಯೋಗಿ ಅಭ್ಯರ್ಥಿಗಳಿಗೆ ರೂ.3.00 ಲಕ್ಷಗಳ ಸಹಾಯಧನದೊಂದಿಗೆ ಪ್ರವಾಸಿ ಟ್ಯಾಕ್ಸಿ ವಿತರಿಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಪ್ರವಾಸಿ ಟ್ಯಾಕ್ಸಿಗೆ ತಗಲುವ ಒಟ್ಟು ವೆಚ್ಚದಲ್ಲಿ ರೂ.3 ಲಕ್ಷಗಳನ್ನು ಸಹಾಯಧನ ಹಾಗೂ 2009-10 ನೇ ಸಾಲಿಗೆ ರೂ.1.80 ಲಕ್ಷ, 2016-17ನೇ ಸಾಲಿಗೆ ರೂ.2.00 ಲಕ್ಷ, 2018-19ನೇ ಸಾಲಿಗೆ ರೂ.3 ಲಕ್ಷಗಳನ್ನು ವಿವಿಧ ಯೋಜನಾ ವರ್ಷಗಳಲ್ಲಿ ಬಾಕಿ ಉಳಿದಿರುವ ಫಲಾನುಭವಿಗಳಿಗೆ ಸಹಾಯಧನ ರೂಪದಲ್ಲಿ ಶೇ.5ರಷ್ಟು ಫಲಾನುಭವಿ ಭರಿಸುವುದು ಮತ್ತು ಒಟ್ಟು ಕಾರಿನ ಬೆಲೆಯ ಉಳಿಕೆ ಮೊತ್ತವನ್ನು ಫಲಾನುಭವಿಯು ಬ್ಯಾಂಕ್ ಸಾಲದ ಮುಖಾಂತರ ಭರಿಸಿ ಪ್ರವಾಸಿ ಟ್ಯಾಕ್ಸಿ ವಿತರಿಸಲು ಯೋಜನೆಯನ್ನು ರೂಪಿಸಲಾಗಿದೆ. ಇದರೊಂದಿಗೆ ಹಿಂದಿನ ಯೋಜನಾ ವರ್ಷಗಳಲ್ಲಿ ಬಾಕಿ ಉಳಿದಿರುವ ಪರಿಶಿಷ್ಟ ಪಂಗಡದ 05 ಫಲಾನುಭವಿಗಳನ್ನು ಆಯ್ಕೆ ಮಾಡಲಾಗುವುದು. ಅರ್ಹ ಅಭ್ಯರ್ಥಿಗಳು ಅರ್ಜಿ ನಮೂನೆಗಳನ್ನು ಜೂನ್ 06 ರಿಂದ ಸಹಾಯಕ ನಿದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಸ್ಟೀವರ್ಟ್ ಹಿಲ್ ರಸ್ತೆ, ಮಡಿಕೇರಿ, ಇವರಿಂದ ಪಡೆದು, ಭರ್ತಿ ಮಾಡಿದ ಅರ್ಜಿಗಳನ್ನು ಅಗತ್ಯ ದಾಖಲಾತಿಗಳೊಂದಿಗೆ ಜುಲೈ 07ರ ಸಂಜೆ 5.00 ಗಂಟೆಯೊಳಗೆ ಸಲ್ಲಿಸಲು ತಿಳಿಸಿದೆ. ಹೆಚ್ಚಿನ ವಿವರಗಳಿಗೆ ಸಹಾಯಕ ನಿರ್ದೇಶಕರ ಕಛೇರಿ, ಪ್ರವಾಸೋದ್ಯಮ ಇಲಾಖೆ, ಮಡಿಕೇರಿ ಇಲ್ಲಿ ಸಂಪರ್ಕಿಸಲು ಕೋರಿದೆ.

No comments

Post a Comment