
ಮಡಿಕೇರಿ: ಮಾನವೀಯ ಸ್ನೇಹಿತರ ಒಕ್ಕೂಟದ ವ್ಯಾಟ್ಸ್ ಅಪ್ ಗ್ರೂಪ್ ವತಿಯಿಂದ ಮಡಿಕೇರಿಯ ಇಂಡ್ರಸ್ಟೀಯಲ್ ರಸ್ತೆಯ ಬಲ ಭಾಗದಲ್ಲಿ ಔಷಧಿ ಪೆಟ್ಟಿಗೆಯನ್ನು ಅಳವಡಿಸಲಾಯಿತು. ಈ ಸಂದರ್ಭ ಮಾತನಾಡಿದ ಗ್ರೂಪ್ ಅಡ್ಮಿನ್ ಮೈಕಲ್ ವೆಗಾಸ್ ಸಾರ್ವಜನಿಕರು ತಾವು ಉಪಯೋಗಿಸಿ ಬಾಕಿ ಉಳಿದ ಔಷಧಿಯನ್ನು ಈ ಪೆಟ್ಟಿಗೆಗೆ ಹಾಕುವುದರ ಮೂಲಕ ಬಡ ರೋಗಿಗಳ ಸಾಹಯಕ್ಕೆ ನಮ್ಮ ಒಕ್ಕೂಟದೊಂದಿಗೆ ಕೈಜೋಡಿಸಬೇಕು ಎಂದರು. ರಶೀದ್ ಕೂರತ್ ಮಾತನಾಡಿ ಮುಂದಿನ ದಿನಗಳಲ್ಲಿ ಮಡಿಕೇರಿ ನಗರದ ಎಲ್ಲಾ ಭಾಗಗಲ್ಲಿಯೂ ಔಷಧಿ ಪೆಟ್ಟಿಗೆಯನ್ನು ಮಾನವೀಯ ಸ್ನೇಹಿತರ ಒಕ್ಕೂಟದ ವತಿಯಿಂದ ಅಳವಡಿಸಲಾಗುವುದು ಎಂದರು. ಈ ಸಂದರ್ಭ ಮಡಿಕೇರಿ ಹಿತರಕ್ಷಣಾ ವೇದಿಕೆಯ ಅಧ್ಯಕ್ಷರಾದ ರವಿ ಗೌಡ ಇದ್ದರು.
No comments
Post a Comment