ಡಿಸಿಎಫ್ ಮಂಜುನಾಥ್ ಅಮಾನತು


 ಮಡಿಕೇರಿ: ಕರ್ತವ್ಯ ಲೋಪ ಆರೋಪದ ಮೇಲೆ ಮಡಿಕೇರಿ ಡಿಸಿಎಫ್ (ಅರಣ್ಯ ಸಂರಕ್ಷಣಾಧಿಕಾರಿ) ಮಂಜುನಾಥ್​ರನ್ನ ಅಮಾನತು ಮಾಡಿ ಸರ್ಕಾರದ ಆದೇಶ ಹೊರಡಿಸಿದೆ. ಮಡಿಕೇರಿ ಹೊರ ವಲಯದ ಕೆ.ನಿಡುಗಣೆ ಗ್ರಾಮದಲ್ಲಿ 800ಕ್ಕೂ ಹೆಚ್ಚು ಮರಗಳನ್ನ ಕಡಿಯಲು ಮಂಜುನಾಥ್​ ಅನುಮತಿ ನೀಡಿದ್ದರು. ಮರಗಳ ಮಾರಣಹೋಮದ ಕುರಿತು ಮಾಧ್ಯಮಗಳು ವರದಿ ಮಾಡಿದ್ದವು. ವರದಿ ಬಳಿಕ ಎಚ್ಚೆತ್ತಿದ್ದ ಸರ್ಕಾರ ಡಿಸಿಎಫ್​ರನ್ನ ಅಮಾನತು ಮಾಡಿ ಆದೇಶ ನೀಡಿದೆ. ಸದ್ಯ ವೀರಾಜಪೇಟೆ ಡಿಸಿಎಫ್ ಮರಿಯಾ ಕ್ರಿಸ್ಟರಾಜ್‌ಗೆ ಹೆಚ್ಚುವರಿ ಜವಾಬ್ದಾರಿ ನೀಡಲಾಗಿದೆ.