ಐಎಂಎ ವಂಚನೆ ಪ್ರಕರಣ: ಆರೋಪಿ ಮನ್ಸೂರ್​ಗೆ ಬ್ಲೂ ಕಾರ್ನರ್​​ ನೋಟಿಸ್​​ ಜಾರಿ

No comments


ಬೆಂಗಳೂರು(ಜೂನ್​.23): ಐಎಂಎ ವಂಚನೆ ಪ್ರಕರಣದಲ್ಲಿ ತಲೆ ಮರೆಸಿಕೊಂಡಿರುವ ಮನ್ಸೂರ್​​ ಖಾನ್​​​ ವಿರುದ್ಧ ಬ್ಲೂ ಕಾರ್ನರ್​ ನೋಟಿಸ್​​ ಜಾರಿಗೊಳಿಸಲಾಗಿದೆ. ಇತ್ತೀಚೆಗೆ ವಂಚಕ‌ ಮನ್ಸೂರ್ ಖಾನ್ ವಿರುದ್ಧ ಕ್ರಮಕೈಗೊಳ್ಳುವಂತೆ ಸಿಐಡಿ ಇಂಟರ್ ಪೋಲ್​​ಗೆ ಪ್ರಸ್ತಾವನೆ ಸಲ್ಲಿಸಿತ್ತು. ಸದ್ಯ ಸಿಐಡಿ ಅಧಿಕಾರಿಗಳ ಪ್ರಸ್ತಾವಣೆಗೆ ಸ್ಪಂದಿಸಿದ ಇಂಟರ್​​ ಪೋಲ್​​, ಆರೋಪಿ ಪತ್ತೆ ಹಚ್ಚುವ ಉದ್ದೇಶದಿಂದ ಈ ಆದೇಶ ಹೊರಡಿಸಿದೆ ಎಂದು ತಿಳಿದು ಬಂದಿದೆ.

ಮನ್ಸೂರ್​​ 32 ಸಾವಿರಕ್ಕೂ ಹೆಚ್ಚು ಜನರಿಗೆ 500 ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದಾರೆ. ಇವರ ಮಾಲೀಕತ್ವದ ಐಎಂಎ ಜ್ಯುವೆಲ್ಸ್ ಲಾಕರ್​ಗಳು​ ಕೂಡ ಖಾಲಿಯಾಗಿವೆ. ಇದರಿಂದಾಗಿ ಪ್ರಕರಣದ ಬೆನ್ನತ್ತಿರುವ ಎಸ್​ಐಟಿ ಹಾಗೂ ಇಡಿ ಅಧಿಕಾರಿಗಳಲ್ಲಿ ತೀವ್ರ ನಿರಾಸೆಯೂ ಮೂಡಿದೆ.

ಬಹುಕೋಟಿ ವಂಚನೆ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದ ರಾಜ್ಯ ಸರ್ಕಾರ ಹೇಗಾದರೂ ಮಾಡಿ ಹಣ ಕಳೆದುಕೊಂಡವರಿಗೆ ನ್ಯಾಯ ಕಲ್ಪಿಸುವ ಭರವಸೆ ನೀಡಿದೆ. ಅಲ್ಲದೇ ಪ್ರಕರಣದ ತನಿಖೆಯನ್ನು ಎಸ್​ಐಟಿ ವಶಕ್ಕೆ ನೀಡಿದೆ. ಇದೇ ವೇಳೆ ಐಎಂಎ ಕಂಪನಿಯ ಬ್ಯಾಂಕ್ ಖಾತೆಗಳಲ್ಲಿ ವಿದೇಶಿ ವಿನಿಮಯ ಕೂಡ ನಡೆದಿದೆ ಎಂಬ ಅಂಶ ಪತ್ತೆ ಹಚ್ಚಿದ್ದ ಜಾರಿ ನಿರ್ದೇಶನಾಲಯ ಅಧಿಕಾರಿಗಳು ಸಹ ಈ ಪ್ರಕರಣದ ಬೆನ್ನತ್ತಿದ್ದಾರೆ.

No comments

Post a Comment