ಮಂಗಳೂರು, ಜು.5: ಮುಸ್ಲಿಂ ಭಾಂಧವರ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಪವಿತ್ರ ಹಬ್ಬ ‘ಈದುಲ್ ಫಿತ್ರ್ ’ ಅನ್ನು ಇಂದು ನಾಡಿನಾದ್ಯಂತ ಮುಸ್ಲಿಮರು ಸಡಗರ, ಸಂಭ್ರಮದಿಂದ ಆಚರಿಸಿದರು. ಪವಿತ್ರ ರಮಝಾನ್ ತಿಂಗಳ ಉಪವಾಸ ಮಂಗಳವಾರ ಮುಸ್ಸಂಜೆ ಮುಕ್ತಾಯವಾದ ಹಿನ್ನೆಲೆಯಲ್ಲಿ ಇಂದು ಮುಂಜಾನೆ ದಕ್ಷಿಣ ಕನ್ನಡ ಜಿಲ್ಲೆಯ ಮುಸ್ಲಿಮರು ಮಂಗಳೂರಿನ ವಿವಿಧ ಮಸೀದಿಗಳಲ್ಲಿ ವಿಶೇಷ ನಮಾಝ್‌ನಲ್ಲಿ ಪಾಲ್ಗೊಂಡು ಬಳಿಕ ಸಡಗರ, ಸಂಭ್ರಮದಿಂದ ‘ಈದುಲ್ ಫಿತ್ರ್ ’ ಆಚರಿಸಿದರು.
ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬ ಈದುಲ್ ಫಿತ್ರ್ ಪ್ರೀತಿ ಮತ್ತು ಸಹೋದರತೆಯನ್ನು ಸಾರುವ ಹಬ್ಬವಾಗಿದೆ. ಎಲ್ಲಾ ಧರ್ಮಿಯ ಸಹೋದರರ ನಡುವೆ ಪ್ರೀತಿ,ವಿಶ್ವಾಸ,ಭ್ರಾತೃತ್ವ ಸುದೃಢವಾಗಲು, ಸೌಹಾರ್ದತೆಯ ಪರಂಪರೆಯನ್ನು ಇನ್ನಷ್ಟು ಬಲಪಡಿಸಲು ಈದ್ ಎಲ್ಲರಿಗೂ ಪ್ರೇರಣೆಯಾಗಿದೆ. ಇದು ಒಂದು ತಿಂಗಳ ಕಠಿಣ ಉಪವಾಸದ ಸಮಾರೋಪವಾಗಿದೆ ಈದುಲ್ ಫಿತ್ರ್. ಹಸಿವು-ದಾಹ, ಲೈಂಗಿಕ ಆಸಕ್ತಿ, ನಿದ್ದೆ ಇವೆಲ್ಲವುಗಳ ಮೇಲಿನ ನಿಯಂತ್ರಣ ಉಪವಾಸದ ಉದ್ದೇಶವಾಗಿದೆ. ಸ್ವಚ್ಛ ನಾಲಗೆ ಮತ್ತು ಸ್ವಚ್ಛ ಮನಸ್ಸು ಉಪವಾಸದ ಗುರಿಯಾಗಿದೆ. ವಿವೇಕ, ಸಹನೆ, ಉಪವಾಸದ ಪಾಠಗಳಾಗಿವೆ. ದುರ್ಬಲರ ಮತ್ತು ಹಕ್ಕು ವಂಚಿತರ ದುಃಖ ಮತ್ತು ಬವಣೆಗಳನ್ನು ಅರಿಯುವ ಸಂದರ್ಭವೂ ಆಗಿದೆ. ಒಂದು ತಿಂಗಳ ಉಪವಾಸದ ತರಬೇತಿಯ ಕೊನೆಯಲ್ಲಿ ಆಚರಿಸಲ್ಪಡುವ ಈದುಲ್ ಫಿತ್ರ್ ಬದುಕನ್ನು ಸುಧಾರಿಸಲು ಮತ್ತು ಕ್ರಮಬದ್ಧಗೊಳಿಸಲು ಪ್ರೇರಣೆಯಾಗಿದೆ.
ಈದುಲ್ ಫಿತ್ರ್ ನಮಾಝ್ ಬಳಿಕ ಪ್ರತಿಯೊಬ್ಬರೂ ಮನೆಮನೆಗಳಿಗೆ ತೆರಳಿ ಹಬ್ಬದ ತಿಂಡಿ ತಿನಿಸುಗಳು, ಭೂರಿ ಭೋಜನವನ್ನು ಸವಿದು ಹಬ್ಬವನ್ನು ವಿಶಿಷ್ಟ ರೀತಿಯಲ್ಲಿ ಆಚರಿಸುವುದು ಎಲ್ಲೆಡೆ ನಡೆದು ಬರುತ್ತಿರುವ ಒಂದು ಉತ್ತಮ ಸಂಪ್ರದಾಯವಾಗಿದೆ.
ಯಾವುದಾದರೂ ಕಾರಣ ಗಳಿಂದಾಗಿ ಪರಸ್ಪರ ಕೋಪಿಸಿಕೊಂಡವರು ಕೂಡ ಈದುಲ್ ಫಿತ್ರ್ ಹಬ್ಬದಂದು ಎಲ್ಲವನ್ನೂ ಮರೆತು ಸಹೋದರತೆ ಮೆರೆಯುತ್ತಾರೆ.
ಆದರೆ ಈ ಬಗ್ಗೆ ಅಸಡ್ಡೆ ತೋರಿಸಿ ಹಿಂದಿನ ಅದೇ ವೈರತ್ವದಲ್ಲಿ ಮುಂದುವರಿಯುವ ಭಾಗ್ಯಹೀನರು ಕೂಡ ನಮ್ಮ ನಡುವೆಯಿದ್ದಾರೆನ್ನಲು ದುಃಖ ವಾಗುತ್ತಿದೆ.
ಆದರೆ ಈ ಬಗ್ಗೆ ಅಸಡ್ಡೆ ತೋರಿಸಿ ಹಿಂದಿನ ಅದೇ ವೈರತ್ವದಲ್ಲಿ ಮುಂದುವರಿಯುವ ಭಾಗ್ಯಹೀನರು ಕೂಡ ನಮ್ಮ ನಡುವೆಯಿದ್ದಾರೆನ್ನಲು ದುಃಖ ವಾಗುತ್ತಿದೆ.
ಎಲ್ಲಾ ವೈರಾಗ್ಯ ವನ್ನು ಮರೆತು ಈದ್ ದಿನವನ್ನು ಸಂಭ್ರಮ ದಿಂದ ಆಚರಿಸುವಂತಾಗಲಿ ಬ್ಲಡ್ ಡೋನರ್ಸ್ ಮಂಗಳೂರು(ರಿ) ತಂಡ ಆಶಿಸುತ್ತದೆ.















No comments
Post a Comment