ನವದೆಹಲಿ: ಹಿಂದಿ ಭಾಷೆ ಕಲಿಕೆ ಕಡ್ಡಾಯವಲ್ಲ ಎಂದು ಕೇಂದ್ರ ಸರ್ಕಾರ ಹೇಳಿದೆ. ಈ ಮೂಲಕ ರಾಜ್ಯಗಳಿಗಿದ್ದ ಆತಂಕವನ್ನು ದೂರ ಮಾಡಿದೆ.
ಈ ಮೊದಲು ಸ್ಥಳೀಯ ಭಾಷೆಗಳ ಜೊತೆಗೆ ಹಿಂದಿ ಕಡ್ಡಾಯ ಎನ್ನಲಾಗಿತ್ತು. ಆದರೆ ಹಿಂದಿ ಭಾಷೆ ಹೇರಿಕೆಗೆ ಕರ್ನಾಟಕ, ತಮಿಳುನಾಡು ಹಾಗೂ ಕೇರಳದಲ್ಲಿ ಭಾರೀ ವಿರೋಧ ವ್ಯಕ್ತವಾಗಿತ್ತು. ವಿರೋಧದ ಹಿನ್ನೆಲೆ ಕರಡು ನೀತಿಯಲ್ಲಿ ಕೇಂದ್ರ ಸರ್ಕಾರ ಬದಲಾವಣೆ ಮಾಡಿದೆ ಎನ್ನಲಾಗಿದೆ.ಯಾರ ಮೇಲೂ ಯಾವುದೇ ಭಾಷೆ ಹೇರುವ ಉದ್ದೇಶ ಸರ್ಕಾರಕ್ಕಿಲ್ಲ. ಹೊಸ ಶಿಕ್ಷಣ ನೀತಿ ಕುರಿತ ವರದಿಯನ್ನು ಮಾತ್ರ ಸಲ್ಲಿಸಲಾಗಿತ್ತು. ಆದರೆ ಕೇಂದ್ರ ಈ ಬಗ್ಗೆ ಯಾವುದೇ ನಿರ್ಧಾರ ಕೈಗೊಂಡಿರಲಿಲ್ಲ. ಇದನ್ನು ತಪ್ಪಾಗಿ ಅರ್ಥೈಸಲಾಗಿದೆ ಎಂದು ಕೇಂದ್ರ ಸರ್ಕಾರ ಹೇಳಿದೆ.
No comments
Post a Comment