ಲಾರಿ-ಕಾರು ಮಧ್ಯೆ ಅಪಘಾತ, ಆರು ಜನರಿಗೆ ಗಾಯ

No comments

ಮಡಿಕೇರಿ: ಚಾಲಕನ ನಿಯಂತ್ರಣ ತಪ್ಪಿದ ಕಾರಿಗೆ ಲಾರಿ ಡಿಕ್ಕಿ ಹೊಡೆದ ಪರಿಣಾಮ ಆರು ಜನರಿಗೆ ಗಾಯಗೊಂಡಿದ್ದಾರೆ. ಸೋಮವಾರಪೇಟೆ ತಾಲೂಕಿನ ಶನಿವಾರಸಂತೆ ಬಳಿ ದುರ್ಘಟನೆ ಸಂಭವಿಸಿದೆ.ನಿವಾರಸಂತೆ ಸಮೀಪದ ಬೆಳ್ಳರಳ್ಳಿ ತಿರುವಿನಲ್ಲಿ ಕ್ಯಾಂಟರ್ ಲಾರಿ ಮತ್ತು ಕಾರಿನ ನಡುವೆ ಅಪಘಾತವಾಗಿದೆ. ಕ್ಯಾಂಟರ್ ಹಾಸನದಿಂದ ಸೊಮವಾರಪೇಟೆ ಕಡೆಯಿಂದ ಅರಕಲಗೂಡಿಗೆ ಮನೆ ವಸ್ತುಗಳನ್ನು ತುಂಬಿಕೊಂಡು ಹೋಗುತ್ತಿತ್ತು ಎನ್ನಲಾಗಿದೆ. ಕಾರು ಹೊಸೂರು ಗ್ರಾಮದ ಗಿರೀಶ್ ಎಂಬುವರಿಗೆ ಸೇರಿದ್ದು ಎಂದು ತಿಳಿದು ಬಂದಿದೆ. ಗಾಯಾಳುಗಳು ಸ್ಥಳೀಯ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದಿದ್ದಾರೆ.

No comments

Post a Comment