ಜೂ.10 ರಿಂದ 29 ರವರೆಗೆ ಉದ್ಯೋಗ ನೋಂದಣಿ ಶಿಬಿರ 

No comments

ಮಡಿಕೇರಿ ಜೂ.07(ಕರ್ನಾಟಕ ವಾರ್ತೆ):-ಜಿಲ್ಲಾ ಉದ್ಯೋಗ ವಿನಿಮಯ ಕಚೇರಿ ವತಿಯಿಂದ ಜೂನ್ 10 ರಂದು ಸೋಮವಾರಪೇಟೆ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೂನ್, 12 ರಂದು ವಿರಾಜಪೇಟೆ ತಾಲ್ಲೂಕು ಪೊನ್ನಂಪೇಟೆಯ ಸರ್ಕಾರಿ ಕೈಗಾರಿಕಾ ತರಬೇತಿ ಸಂಸ್ಥೆ, ಜೂನ್, 18 ರಂದು ವಿರಾಜಪೇಟೆ ಸರ್ಕಾರಿ ಪ್ರಥಮ ದರ್ಜೆ ಕಾಲೇಜು, ಜೂನ್, 20 ರಂದು ಮಡಿಕೇರಿ ತಾಲ್ಲೂಕು ನಾಪೋಕ್ಲು ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಹಾಗೂ ಜೂನ್, 22 ರಂದು ವಿರಾಜಪೇಟೆ ತಾಲ್ಲೂಕು ಸಿದ್ದಾಪುರ ಇಕ್ರಾ ಪದವಿಪೂರ್ವ ಕಾಲೇಜಿನಲ್ಲಿ, ಜೂನ್, 25 ರಂದು ಸೋಮವಾರಪೇಟೆ ತಾಲ್ಲೂಕು ಕುಶಾಲನಗರ ಸರ್ಕಾರಿ ಪದವಿ ಪೂರ್ವ ಕಾಲೇಜು, ಜೂನ್, 27 ರಂದು ಸೋಮವಾರಪೇಟೆ ತಾ. ಶನಿವಾರಸಂತೆ ಭಾರತಿ ಪ್ರಥಮ ದರ್ಜೆ ಕಾಲೇಜು ಮತ್ತು ಜೂನ್, 29 ರಂದು ವಿರಾಜಪೇಟೆ ತಾ. ತಿತಿಮತಿ ಸರ್ಕಾರಿ ಪದವಿ ಪೂರ್ವ ಕಾಲೇಜುಗಳಲ್ಲಿ ಆಯಾಯ ದಿನಗಳಂದು ಬೆಳಗ್ಗೆ 11 ಗಂಟೆಯಿಂದ ಮಧ್ಯಾಹ್ನ 3 ಗಂಟೆಯವರೆಗೆ ಉದ್ಯೋಗ ನೋಂದಣಿ ಶಿಬಿರ ನಡೆಯಲಿದೆ. ಎಸ್‍ಎಸ್‍ಎಲ್‍ಸಿ ಅನುತ್ತೀರ್ಣ, ಎಸ್‍ಎಸ್‍ಎಲ್‍ಸಿ, ಪಿಯುಸಿ, ಡಿಪ್ಲೋಮಾ ಮತ್ತು ಪದವಿ ವಿದ್ಯಾರ್ಹತೆ ಹೊಂದಿದ ಅಭ್ಯರ್ಥಿಗಳು ಶಾಲೆಯಿಂದ ಪಡೆದ ವರ್ಗಾವಣೆ ಪ್ರಮಾಣ ಪತ್ರ(ಎಸ್‍ಎಸ್‍ಎಲ್‍ಸಿಯಲ್ಲಿ ಅನುತ್ತೀರ್ಣಗೊಂಡವರಿಗೆ ಮಾತ್ರ), ಎಸ್‍ಎಸ್‍ಎಲ್‍ಸಿ. ಮೂಲ ಅಂಕಪಟ್ಟಿ ಹಾಗೂ ನಕಲು ಪ್ರತಿ, ಪಿಯುಸಿ ಮೂಲ ಅಂಕಪಟ್ಟಿ ಹಾಗೂ ನಕಲು ಪ್ರತಿ(ಅನ್ವಯಿಸುವವರಿಗೆ) ಪದವಿಯ ಎಲ್ಲಾ ಸೆಮಿಸ್ಟರ್‍ಗಳ ಮೂಲ ಅಂಕಪಟ್ಟಿಗಳು ಹಾಗೂ ನಕಲು ಪ್ರತಿಗಳು(ಅನ್ವಯಿಸುವವರಿಗೆ), ಐಟಿಐ ಅಥವಾ ಡಿಪ್ಲೋಮಾ ಮೂಲ ಅಂಕಪಟ್ಟಿಗಳು ಹಾಗೂ ನಕಲುಪ್ರತಿಗಳು(ಅನ್ವಯಿಸುವವರಿಗೆ), ಜಾತಿ ದೃಢೀಕರಣ ಪತ್ರ(ಅನ್ವಯಿಸುವವರಿಗೆ), ಎರಡು ಪಾಸ್ ಪೋರ್ಟ್ ಅಳತೆಯ ಭಾವಚಿತ್ರ ಈ ದಾಖಲಾತಿಗಳ ಮೂಲಪ್ರತಿ ಹಾಗೂ ನಕಲು ಪ್ರತಿಗಳೊಂದಿಗೆ ಶಿಬಿರ ನಡೆಯುವ ಸ್ಥಳದಲ್ಲಿ ಹಾಜರಿದ್ದು, ಉದ್ಯೋಗ ನೋಂದಣಿಯನ್ನು ಮಾಡಿಕೊಳ್ಳಬಹುದು ಎಂದು ಜಿಲ್ಲಾ ಉದ್ಯೋಗ ವಿನಿಮಯ ಕಚೇರಿಯ ಉದ್ಯೋಗಾಧಿಕಾರಿ ಅವರು ತಿಳಿಸಿದ್ದಾರೆ.

No comments

Post a Comment