ಜೂನ್, 10 ರಿಂದ 21 ರವರೆಗೆ ಯೋಗ ಶಿಬಿರ 

No comments

ಮಡಿಕೇರಿ ಜೂ.07(ಕರ್ನಾಟಕ ವಾರ್ತೆ):-ಪ್ರಸಕ್ತ (2019-20) ಸಾಲಿನಲ್ಲಿ ಜೂನ್, 21 ರಂದು ನಡೆಯುವ 5 ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಪ್ರಯುಕ್ತ ಜೂನ್, 10 ರಿಂದ 21 ರವರೆಗೆ ಉಚಿತ ಯೋಗ ಶಿಬಿರ ನಡೆಯಲಿದೆ. ಯೋಗ ಶಿಬಿರ ನಡೆಯುವ ಕೇಂದ್ರಗಳ ವಿವರ, ಮೊಬೈಲ್ ಸಂಖ್ಯೆ : ಭಾರತೀಯ ವಿದ್ಯಾಭವನ ಶ್ರೀ ಓಂಕಾರೇಶ್ವರ ದೇವಾಲಯದ ಬಳಿ ಕೆ.ಕೆ.ಮಹೇಶ್ ಕುಮಾರ್(9480731020), ಶಶಿ(7760038574), ಪಥಂಜಲಿ ಯೋಗ ಶಿಕ್ಷಣ ಸಮಿತಿ, ಬಾಲಭವನ, ಕೆ.ಎಸ್.ಆರ್.ಟಿ.ಸಿ ಬಸ್ ನಿಲ್ದಾಣದ ಹತ್ತಿರ ಶ್ರೀಪತಿ(9945987828), ಅಶ್ವಿನಿ ಯೋಗ ಕೇಂದ್ರ, ಅಶ್ವಿನಿ ಆಸ್ಪತ್ರೆ, ಮಡಿಕೇರಿ ಕರವಂಡ ಕುಶಾಲಪ್ಪ(9448530363), ಶ್ರೀ ಚೌಡೇಶ್ವರಿ ದೇವಸ್ಥಾನ ಮಹದೇವಪೇಟೆ, ಮಡಿಕೇರಿ ಸುಧಾಕರ್ (9449779823), ಬಸಪ್ಪ ಶಿಶುವಿಹಾರ, ದಾಸವಾಳ ರಸ್ತೆ, ಮಡಿಕೇರಿ ವೀಣಾ ರವೀಂದ್ರ(9980607059), ಗೌಡ ಸಮಾಜ, ಸುಬೇದಾರ್ ಅಪ್ಪಯ್ಯಗೌಡ ರಸ್ತೆ, ಮಡಿಕೇರಿ, ಮೈತ್ರಿಹಾಲ್, ಮಡಿಕೇರಿ ಜಾನ್ಸಿ(9448367264) ಇಲ್ಲಿ ಯೋಗ ಶಿಬಿರ ನಡೆಯಲಿದೆ. ಹಾಗೆಯೇ ಜೂನ್, 18 ರಂದು ಸಂಜೆ 6 ಗಂಟೆಯಿಂದ 7 ಗಂಟೆಯವರೆಗೆ ನಗರದ ಕೋಟೆ ಸಭಾಂಗಣದಲ್ಲಿ ಸೇರಿ ಪ್ರಮುಖ ಬೀದಿಗಳಲ್ಲಿ ಯೋಗ ಜಾಥಾ ಕಾರ್ಯಕ್ರಮ ನಡೆಯಲಿದೆ. ಇದಕ್ಕಾಗಿ ಪೂರ್ವ ತಯಾರಿಯ ಯೋಗ ಪ್ರದರ್ಶನವನ್ನು ಮೈತ್ರಿ ಹಾಲ್‍ನಲ್ಲಿ ಒಂದು ದಿವಸ ಮುಂಚಿತವಾಗಿ ಸಂಜೆ 6 ಗಂಟೆಗೆ ನಡೆಸಲಾಗುವುದು ಎಂದು ಜಿಲ್ಲಾ ಆಯುಷ್ ಅಧಿಕಾರಿ ಅವರು ತಿಳಿಸಿದ್ದಾರೆ.

No comments

Post a Comment