ಪತ್ರಕರ್ತರ ಕ್ರಿಕೆಟ್ ಕಪ್ : ವಿರಾಜಪೇಟೆ ಸೌತ್ ಟೈಗರ್ಸ್ ವಿನ್ನರ್ಸ್
--ಮೀಡಿಯಾ ರನ್ನರ್ ಅಪ್, ಪ್ರಿಂಟ್ ಪಂಟರ್ಸ್ ತೃತೀಯ

ಮಡಿಕೇರಿ : ಕೊಡಗು ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದಿಂದ ನಗರದ ಫೀಲ್ಡ್ ಮಾರ್ಷಲ್ ಕೆ.ಎಂ ಕಾರ್ಯಪ್ಪ ಕಾಲೇಜು ಮೈದಾನದಲ್ಲಿ ಭಾನುವಾರ ನಡೆದ ಜಿಲ್ಲಾ ಮಟ್ಟದ ಕ್ರಿಕೆಟ್ ಪಂದ್ಯದಲ್ಲಿ ವಿರಾಜಪೇಟೆ ಸೌತ್ ಟೈಗರ್ಸ್ ವಿನ್ನರ್ಸ್ ಪ್ರಶಸ್ತಿ ಗಳಿಸಿತು.
ಮಡಿಕೇರಿ ಮೀಡಿಯಾ ತಂಡ ರನ್ನರ್ ಅಪ್ ಪಡೆದರೆ, ಮಡಿಕೇರಿಯ ಪ್ರಿಂಟ್ ಪಂಟರ್ಸ್ ತೃತೀಯ ಬಹುಮಾನಕ್ಕೆ ತೃಪ್ತಿಪಟ್ಟುಕೊಂಡಿತು.
ಮಡಿಕೇರಿ ಮೀಡಿಯಾ ಹಾಗೂ ವಿರಾಜಪೇಟೆ ಸೌತ್ ಟೈಗರ್ಸ್ ತಂಡಗಳ ನಡುವೆ ನಡೆದ ಫೈನಲ್ ಪಂದ್ಯದಲ್ಲಿ ಟೈಗರ್ಸ್ ತಂಡ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆಮಾಡಿ ನಿಗದಿತ 6 ಓವರ್ ನಲ್ಲಿ 105 ರನ್ ಕಲೆಯಾಕಿತು. ನಂತರ ಬ್ಯಾಟಿಂಗ್ ಮಾಡಿದ ಮಡಿಕೇರಿ ಮೀಡಿಯಾ 62 ರನ್ ಗಳಿಸಿ ಸೋಲೊಪ್ಪಿಕೊಂಡಿತು.

ಸಮಾರೋಪ ಸಮಾರಂಭ
ಜಿಲ್ಲಾ ಮಟ್ಟದ ಪತ್ರಕರ್ತರ ಕ್ರಿಕೆಟ್ ಪಂದ್ಯಾಟದ ಸಮಾರೋಪ ಸಮಾರಂಭ ಭಾನುವಾರ ಸಂಜೆ ನಡೆಯಿತು.
ಕಾರ್ಯಕ್ರಮದಲ್ಲಿ ಫೀ.ಮಾ.ಕೆ.ಎಂ. ಕಾರ್ಯಪ್ಪ ಕಾಲೇಜು ಪ್ರಾಂಶುಪಾಲ ಡಾ. ಟಿ.ಡಿ ತಿಮ್ಮಯ್ಯ ಕ್ರೀಡೆ ಮಾನವನ ಬದುಕಿನ ಅವಿಭಾಜ್ಯ ಅಂಗ. ಕ್ರೀಡೆಯಲ್ಲಿ ತೊಡಗಿಸಿಕೊಂಡಾಗ ದೈಹಿಕ ಹಾಗೂ ಮಾನಸಿಕ ಶಕ್ತಿ ಉತ್ತಮವಾಗಿರುತ್ತದೆ. ಯಾವುದೇ ಕ್ರೀಡೆಯಲ್ಲಿ ಗೆಲುವು - ಸೋಲು ಮುಖ್ಯವಲ್ಲ. ಎಲ್ಲರೂ ಕ್ರೀಡಾ ಮನೋಭಾವನೆಯಿಂದ ಕ್ರೀಡಾಕೂಟದಲ್ಲಿ ಪಾಲ್ಗೊಳ್ಳಬೇಕೆಂದು ಹೇಳಿದರು.
ಜೆಡಿಎಸ್ ರಾಜ್ಯ ಉಪಾಧ್ಯಕ್ಷ ಯಲದಾಳು ಮನೋಜ್ ಬೋಪಯ್ಯ ಮಾತನಾಡಿ ನಾವು ನಮ್ಮ ವೃತ್ತಿಯಲ್ಲಿರುತ್ತೇವೆ. ಆದರೆ ಕ್ರೀಡೆಯಲ್ಲಿ ಎಲ್ಲರೊಂದಿಗೆ ಬೆಸೆಯುವ ಕೆಲಸ ಆಗುತ್ತದೆ ಎಂದರು.
ಕೊಡಗು ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಮಂಜುನಾಥ್ ಮಾತನಾಡಿ ಮನುಷ್ಯನಿಗೆ ತಮ್ಮ ವೃತ್ತಿಯೊಂದಿಗೆ ಖಾಸಗಿ ಬದುಕು ಅನಿವಾರ್ಯ. ಕ್ರೀಡಾ ಸ್ಫೂರ್ತಿ ಇರುವವರಿಗೆ ವಿಶಾಲವಾದ ಸಹೃದಯ ಇರುತ್ತದೆ. ಸಕಾರಾತ್ಮಕ ಚಿಂತನೆಯಿಂದ ಸಮಾಜಕ್ಕೆ ಒಳ್ಳೆಯದಾಗುತ್ತದೆ. ಮುಂದಿನ ದಿನಗಳಲ್ಲಿ ಪತ್ರಕರ್ತರ ರಾಜ್ಯ ಮಟ್ಟದ ಕ್ರೀಡಾಕೂಟ ಯಶಸ್ವಿಯಾಗಿ ನಡೆಯಲಿ ಎಂದು ಹೇಳಿದರು.
ಕರ್ನಾಟಕ ರಾಜ್ಯ ಕನ್ನಡ ಕಲಾ ಬೆಳಕು ಸಂಸ್ಥೆಯ ರಾಜ್ಯಧ್ಯಕ್ಷ ರಾಜು ಮಾತನಾಡಿ ಕ್ರೀಡೆಯ ಮೂಲಕ ಪತ್ರಕರ್ತರು ಒಂದೆಡೆ ಸೇರುವುದು ಖುಷಿಯ ವಿಚಾರ. ಕೊಡಗಿನಲ್ಲಿ ಶಿಸ್ತಿದೆ. ಎಲ್ಲರನ್ನೂ ಬೆಳಕಿಗೆ ತರುವ ಪತ್ರಕರ್ತರು ಬೆಳೆಕಿಗೆ ಬರುವುದು ತುಂಬಾ ವಿರಳ. ಶಿಸ್ತು ಹಾಗೂ ಉತ್ತಮವಾಗಿ ಕ್ರೀಡಾ ಆಯೋಜಿಸಿರುವ ಕೊಡಗಿನ ಪತ್ರಕರ್ತರು ರಾಜ್ಯಕ್ಕೆ ಮಾದರಿಯಾಗಲಿ ಎಂದು ಹೇಳಿದರು.
ಕೊಡಗು ಪ್ರೆಸ್ ಕ್ಲಬ್ ಅಧ್ಯಕ್ಷ ಅಜ್ಜಮಾಡ ರಮೇಶ್ ಕುಟ್ಟಪ್ಪ ಮಾತನಾಡಿ, ಸಂಘಟನೆಯ ಮೂಲಕ ಒಗ್ಗಟ್ಟು ಪ್ರದರ್ಶನ ಮಾಡಲು ಸಾಧ್ಯ ಎಂದರು.
ಅಧ್ಯಕ್ಷತೆ ವಹಿಸಿ ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷೆ ಸವಿತಾ ರೈ ಮಾತನಾಡಿ ಪತ್ರಕರ್ತರು ಕ್ರೀಡೆಯ ಮೂಲಕ ಒಗ್ಗಟ್ಟನ್ನು ಪ್ರದರ್ಶನ ಮಾಡಿದ್ದು, ಇದು ಮುಂದುವರೆಯಬೇಕು ಎಂದರು.
ಕಾರ್ಯಕ್ರಮದಲ್ಲಿ ಉದ್ಯಮಿ ಶರಿನ್, ಸ್ಪೋರ್ಟ್ಸ್ ವಲ್ಡ್ ನ ಅನ್ಸಾಫ್, ಸೋಮವಾರಪೇಟೆ ತಾಲೂಕು ಸಂಘದ ಅಧ್ಯಕ್ಷ ಹರೀಶ್, ವಿರಾಜಪೇಟೆ ತಾಲೂಕು ಸಂಘದ ಅಧ್ಯಕ್ಷ ಚಂಗಪ್ಪ, ಕ್ರಿಯೇಟಿವ್ ನ ಖಲೀಲ್, ಕ್ರೀಡಾ ಸಮಿತಿ ಸಂಚಾಲಕ ಮಂಜು ಸುವರ್ಣ ಮತ್ತಿತರರು ಹಾಜರಿದ್ದರು.

ಬಾಕ್ಸ್...
ವೈಯಕ್ತಿಕ ಪ್ರಶಸ್ತಿಗಳು
ಬೆಸ್ಟ್ ಬೌಲರ್ : ರೆಜಿತ್ ಕುಮಾರ್
ಬೆಸ್ಟ್ ಬ್ಯಾಟ್ಸ್ ಮನ್ ; ಮಂಜು
ಮ್ಯಾನ್ ಆಫ್ ದಿ ಮ್ಯಾಚ್(ಫೈನಲ್): ಉದಯ್ ಮೊಣ್ಣಪ್ಪ
ಮ್ಯಾನ್ ಆಫ್ ದಿ ಸೀರೀಸ್ : ಮುಸ್ತಾಫ
ಬೆಸ್ಟ್ ಕ್ಯಾಚ್ : ನವೀನ್ ಡಿಸೋಜ

No comments
Post a Comment