ಚಿಕ್ಲಿಹೊಳೆ ಜಲಾಶಯದಲ್ಲಿ ಈಜಲು ಹೋದ ಯುವಕರಿಬ್ಬರು ನೀರುಪಾಲು

No comments

ಚೆಟ್ಟಳ್ಳಿ: ಈಜಲು ತೆರಳಿದ ಯುವಕರಿಬ್ಬರು ನೀರು ಪಾಲಾದ ಘಟನೆ ಸುಂಟಿಕೊಪ್ಪ ಸಮೀಪದ ಕಂಬಿಬಾಣೆಯ ಚಿಕ್ಲಿಹೊಳೆ ಜಲಾಶಯದಲ್ಲಿ ಇಂದು (ತಾ. 12) ಸಂಜೆ ಸಂಭವಿಸಿರುವ ಕುರಿತು ವರದಿಯಾಗಿದೆ. ಕೊಡಗರಹಳ್ಳಿ ಸ್ಕೂಲ್ ಬಾಣೆ ನಿವಾಸಿ ಸಹದೇವ ಎಂಬುವವರ ಮಗನಾದ ಪವನ್ (19) ಮತ್ತು ಕಂಬಿಬಾಣೆಯ ಸುಬ್ರಮಣಿ ಎಂಬುವವರ ಮಗನಾದ ನಂದೀಶ್ (16) ಜಲಾಶಯದ ನೀರಿನ ಸೆಳತಕ್ಕೆ ಸಿಲುಕಿ ಮೃತಪಟ್ಟಿರುವ ನತದೃಷ್ಟರಾಗಿದ್ದಾರೆ. ಪವನ್ ಹಾಗೂ ನಂದೀಶ್ ರವರು ತಮ್ಮ ಇನ್ನಿಬ್ಬರು ಗೆಳೆಯರೊಂದಿಗೆ ಈಜಲೆಂದು ಚಿಕ್ಲಿಹೊಳೆಗೆ ತೆರಳಿದ್ದಾರೆ. ನೀರಿನಲ್ಲಿ ಆಟವಾಡುತ್ತಿದ್ದ ಸಂದರ್ಭದಲ್ಲಿ ಆಯತಪ್ಪಿದ ಪವನ್ ಹಾಗೂ ನಂದೀಶ್ ಮುಳುಗಿದ್ದಾರೆ. ಕೂಡಲೇ ಜೊತೆಯಲ್ಲಿದ್ದ ಗೆಳೆಯರು ಸ್ಥಳೀಯರಿಗೆ ಮಾಹಿತಿ ನೀಡಿದ್ದಾರೆ. ವಿಷಯವರಿತ ಸ್ಥಳೀಯ ನುರಿತ ಈಜುಗಾರರು ತೆಪ್ಪದ ಮೂಲಕ ಜಲಾಶಯಕ್ಕಿಳಿದು ಮುಳುಗಿದ ಯುವಕರ ರಕ್ಷಾಣಾ ಕಾರ್ಯಚರಣೆಗೆ ತೊಡಗಿದ್ದಾರೆ. ಆದರೆ ಅದಗಾಲೇ ಇವರಿಬ್ಬರನ್ನು ನೀರು ತನ್ನೊಡಲೊಳಗೆ ಸೇರಿಸಿಕೊಂಡಿತ್ತು. ಸಂಜೆ 6 ಗಂಟೆ ಸುಮಾರಿಗೆ ಇವರಿಬ್ಬರು ಈಜಾಡುತ್ತಿದ್ದಲ್ಲಿಂದ ಅನತಿ ದೂರದಲ್ಲಿ ಮೃತದೇಹಗಳು ದೊರೆತ್ತಿದ್ದು, ಕುಶಾಲನಗರ ಸರ್ಕಾರಿ ಆಸ್ಪತ್ತೆಯಲ್ಲಿ ಮರಣೋತ್ತರ ಪರೀಕ್ಷೆಗೆ ರವಾನಿಸಲಾಗಿದೆ. ಸುಂಟಿಕೊಪ್ಪ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

No comments

Post a Comment