ಬೆಂಗಳೂರು: ಬಿಎಂಟಿಸಿ ಸಾರಿಗೆ ಸಂಸ್ಥೆ ದೇಶದಲ್ಲಿ ನಂ.1 ಸಾರಿಗೆ ವ್ಯವಸ್ಥೆ ಅನ್ನೊ ಹೆಗ್ಗಳಿಕೆಗೆ ಪಾತ್ರವಾಗಿದ್ರು ಕೂಡ ಬಿಎಂಟಿಸಿಯಲ್ಲಿ ಅವ್ಯವಹಾರಗಳಿಗೇನೂ ಕಡಿಮೆಯಿಲ್ಲ. ಇಲ್ಲಿವರೆಗೂ ಕೇವಲ ಬಸ್ ಡಿಪೊಗಳಲ್ಲಿ ವರದಿಯಾಗ್ತಿದ್ದ ಡೀಸೆಲ್ ಕಳವು ಪ್ರಕರಣಗಳು ಇತ್ತೀಚೆಗೆ ರಾತ್ರಿ ವೇಳೆ ಡಿಪೋಗಳಿಂದ ಹೊರಗೆ ನಿಲುಗಡೆಗೊಳ್ಳುವ ಬಸ್ ಗಳಲ್ಲೂ ಕಂಡುಬರುತ್ತಿರುವುದು ಬಿಎಂಟಿಸಿ ಸಂಸ್ಥೆಗೆ ತಲೆನೋವಾಗಿ ಪರಿಣಮಿಸಿದೆ.
ರಾತ್ರಿ ಪಾಳಿಯಲ್ಲಿ ಬಿಎಂಟಿಸಿ ಬಸ್ ಗಳು ಬಗಲುಗುಂಟೆ, ಯಲಹಂಕ, ಮೈಸೂರ್ ರೋಡ್, ಬೊಮ್ಮನಹಳ್ಳಿ, ಸೋಲದೇವನಹಳ್ಳಿ, ಹೇರೋಹಳ್ಳಿ, ಜಾಲಹಳ್ಳಿ, ಸುಂಕದಕಟ್ಟೆ ಕಾಡುಗೋಡಿ ಸೇರಿ ನಗರದ ಹೊರವಲಯಗಳಲ್ಲಿ ನಿಲುಗಡೆಯಾಗುತ್ತವೆ. ಈ ಪೈಕಿ ಪ್ರತಿನಿತ್ಯ ಸಾವಿರಾರು ಲೀಟರ್ ಗಟ್ಟಲೇ ಡೀಸೆಲ್ ಕಳುವಾಗ್ತಿದ್ರೂ, ಕೆಲವೇ ಕೆಲವು ಪ್ರಕರಣಗಳು ಬೆಳಕಿಗೆ ಬರುತ್ತಿವೆ.
ದಿನೇ ದಿನೇ ಬಿಎಂಟಿಸಿ ಬಸ್ ಗಳಲ್ಲಿ ಡಿಸೇಲ್ ಕಳವು ಪ್ರಕರಣಗಳು ಹೆಚ್ಚಾಗ್ತಿರೋದು ಬಿಎಂಟಿಸಿ ಸಂಸ್ಥೆಯ ಹಿರಿಯ ಅಧಿಕಾರಿಗಳಿಗೆ ನಿದ್ದೆಕೆಡಿಸಿದೆ.
ಕಳೆದ ನಾಲ್ಕರಂದು ಸೋಲದೇವನಹಳ್ಳಿಯ ಬಿಎಂಟಿಸಿಯ 8ನೇ ಡಿಪೊ ದ ಬಸ್ಅನ್ನು ಹೆಸರುಘಟ್ಟ ಮುಖ್ಯರಸ್ತೆಯಲ್ಲಿ ರಾತ್ರಿ ವೇಳೆ ನಿಲುಗಡೆ ಮಾಡಿ ಚಾಲಕ ಹಾಗೂ ನಿರ್ವಾಹಕ ಬಸ್ ನ ಒಳಗೆ ಮಲಗಿದ್ರು ಕೂಡ ಸುಮಾರು 80 ಲೀಟರ್ ಫುಲ್ ಟ್ಯಾಂಕ್ ಇದ್ದ ಡೀಸೆಲ್ ಅನ್ನ ಕಳ್ಳರು ಕದ್ದು ಪರಾರಿಯಾಗಿದ್ದಾರೆ. ಚಾಲಕ ಹಾಗೂ ನಿರ್ವಾಹಕ ಬೆಳಗ್ಗೆ ಎದ್ದು ಬಸ್ ಚಾಲನೆ ಮಾಡಲು ನೋಡಿದಾಗ ಬಸ್ ನಲ್ಲಿ ಡಿಸೇಲ್ ತೆಗೆದಿರೋದು ಬೆಳಕಿಗೆ ಬಂದಿದೆ. ಘಟನೆ ಸಂಬಂಧ ಗುರುಸ್ವಾಮಿ ಸೋಲದೇವನಹಳ್ಳಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.

No comments
Post a Comment