ನವದೆಹಲಿ : ಈ ಬಾರಿಯ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಮಿತ್ರ ಪಕ್ಷಗಳ ಸಹಕಾರವಿಲ್ಲದೇ ಬಿಜೆಪಿ ಸರ್ಕಾರ ರಚಿಸಲು ಸಾಧ್ಯವಿಲ್ಲ ಎಂದು ಬಿಜೆಪಿ ಪ್ರಧಾನ ಕಾರ್ಯದರ್ಶಿ ರಾಮ್ ಮಾಧವ್ ಹೇಳಿದ್ದಾರೆ.
ರಾಮ್ ಮಾಧವ್ ರ ಹೇಳಿಕೆಯನ್ನು ಬಿಜೆಪಿಯ ಮಿತ್ರಪಕ್ಷ ಶಿವಸೇನೆ ಕೂಡ ಪುನರುಚ್ಚರಿಸಿದೆ. ಈ ಬಗ್ಗೆ ಮಾತನಾಡಿರುವ ಶಿವಸೇನೆ ನಾಯಕ ಸಂಜಯ್ ರಾವತ್ ರಾಮ್ ಮಾಧವ್ ರ ಅಭಿಪ್ರಾಯ ಸರಿಯಾಗಿದೆ. ಬಿಜೆಪಿಗೆ ಮ್ಯಾಜಿಕ್ ನಂಬರ್ ಸಿಗೋ ಸಾಧ್ಯತೆ ಕಡಿಮೆಯಿದ್ದು, ಇತರೆ ಪಕ್ಷಗಳ ಬೆಂಬಲವಿಲ್ಲದೇ ಸರ್ಕಾರ ರಚಿಸುವುದು ಕಷ್ಟ ಎಂದಿದ್ದಾರೆ.2014 ರಲ್ಲಿನ ದೇಶದ ಚಿತ್ರಣವೇ ಬೇರೆ. ಈಗಿನ ಚಿತ್ರಣವೇ ಬೇರೆಯಾಗಿದೆ. ಆಗಿನ ಸಂದರ್ಭದಲ್ಲಿ ಸರಳ ಬಹುಮತದಿಂದ ಪಕ್ಷ ಗೆಲುವು ಸಾಧಿಸಿತ್ತು, ಈಗ ಬಿಜೆಪಿ 280 ಪ್ಲಸ್ ಸೀಟ್ ಗಳನ್ನು ಪಡೆಯುವುದು ಕಷ್ಟವಿದೆ ಎಂದಿದ್ದಾರೆ.

No comments
Post a Comment