ಸೌತ್ ಕೊರಿಯಾದ ಸ್ಟ್ರೀಟ್ ಫುಡ್ ಇದೀಗ ನಿಸರ್ಗಧಾಮದಲ್ಲಿ 

No comments

ಸೌತ್ ಕೊರಿಯಾದ ಸ್ಟ್ರೀಟ್ ಫುಡ್ ಇದೀಗ ನಿಸರ್ಗಧಾಮದಲ್ಲಿ 
ಕುಶಾಲನಗರ,ಮೇ೬: ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ನಲ್ಲಿ ಸೌತ್ ಕೊರಿಯಾದ ಪ್ರಸಿದ್ಧ ಸ್ಟ್ರೀಟ್ ಫುಡ್ ಆದ ಟೋರ್ನಾಡೋ ಟ್ವಿಸ್ಟ್ ಲಭ್ಯವಿದ್ದು, ಪ್ರವಾಸಿಗರು ಹಾಗೂ ಸ್ಥಳೀಯರು ಇದಕ್ಕೆ ಮಾರುಹೋಗಿ ಅಂಗಡಿ ಮುಂದೆ

ಮುಗಿಬಿದ್ದು ಮಾರುಹೋದ ಘಟನೆ ನಡೆದಿದೆ. ಪೊಟಾಟೋ ಟ್ವಿಸ್ಟ್ ಎಂಬ ಹೆಸರಿನಿಂದ ಕೂಡಾ ಕರೆಯಲ್ಪಡುವ ಈ ತಿನುಸನ್ನು ದಕ್ಷಿಣ ಕೊರಿಯಾದ 'ಜಿಯಾಂಗ್ ಈನ್ ಸುಕ್' ಎಂಬವರು ಪರಿಚಯಿಸಿದ್ದಾರೆ. ಇದು ದಕ್ಷಿಣ ಕೊರಿಯಾದ ಪ್ರಸಿದ್ಧಿ ತಿನುಸಾಗಿದ್ದು, ಇದೀಗ ಕುಶಾಲನಗರದ ನಿಸರ್ಗಧಾಮ ಟೂರಿಸ್ಟ್ ಸೆಂಟರಿನಲ್ಲಿ ಸಿಗಲಿದೆ. ಈ ತಿನುಸಿಗೆ ಮಾರು ಹೋದ ಪ್ರವಾಸಿಗರು ಹಾಗೂ ಸ್ಥಳೀಯರು ಎನ್.ಟಿ.ಸಿ ಯ ಪೊಟಾಟೋ ಟ್ವಿಸ್ಟೆಡ್ ಗ್ರಿಲ್ ಅಂಗಡಿ ಮಳಿಗೆಯತ್ತ ಮುಗಿಬಿದ್ದಿದ್ದಾರೆ. ವಿಶೇಷವಾಗಿ ಪೊಟಾಟೋ ಟ್ವಿಸ್ಟೆಡ್ ಗ್ರಿಲ್ ಅಂಗಡಿಯನ್ನು ಕುಶಾಲನಗರದ ಅಯ್ಯೂಬ್ ರವ

ರು ಪ್ರಾರಂಭಿಸಿದ್ದು, ಸ್ಥಳೀಯರಿಂದ ಕೂಡಾ ಉತ್ತಮವಾಗ ಸ್ಪಂದನೆ ದೊರೆತಿದೆ. ಒಂದಕ್ಕೆ ೬೦ ರೂಗಳು ಕೊಂಚ ದುಬಾರಿಯಾದರೂ ಕೂಡಾ ಅದರ ರುಚಿಯನ್ನು ಸವಿದ ಬಳಿಕ ೬೦ ರೂಗಳಿಗೆ ಯೋಗ್ಯವಾಗಿದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ. ಇದರಲ್ಲಿ ಸ್ಪ್ರಿಂಗ್ ಸ್ಪೆಷಲ್, ಚಿಲ್ಲಿ ಚೀಸ್ ಸ್ಪ್ರಿಂಗ್, ಚೀಸ್ ಸ್ಪ್ರಿಂಗ್, ಪೆರಿ ಪೆಪ್ಪರ್ ಸ್ಪ್ರಿಂಗ್, ಟೊಮಾಟೋ ಸ್ಪ್ರಿಂಗ್, ಅಮೆರಿಕನ್ ಸ್ಪೆಷಲ್, ಬಾರ್ಬಿ ಕ್ಯೂ ಸ್ಪ್ರಿಂಗ್, ಟೊಮಾಟೊ ಚಿಲ್ಲಿ ಸ್ಪ್ರಿಂಗ್, ಸೆಸ್ವಾನ್ ಸ್ಪ್ರಿಂಗ್ ಹಾಗೂ ಮುಂತಾದ ಬಗೆಬಗೆಯ ರುಚಿಭರಿತವಾದ ಸ್ಪ್ರಿಂಗ್ ಗಳು ಸಿಗಲಿವೆ. ಈ ಕುರಿತು ಮಾತನಾಡಿದ ಸ್ಥಳೀಯರಾದ ಅಯ್ಯೂಬ್, ಪೊಟಾಟೊ ಸ್ಪ್ರಿಂಗ್ ಗ್ರಿಲ್ ಮಳಿಗೆಯನ್ನು ಪ್ರಾರಂಭಿಸಿದ್ದು, ಇದು ದಕ್ಷಿಣ ಕೊರಿಯಾದ ಪ್ರಸಿದ್ಧಿ ತಿನಿಸಾಗಿರುತ್ತದೆ. ಪ್ರವಾಸಿಗರು ಹಾಗೂ ಸ್ಥಳೀಯರಿಂದ ಒಳ್ಳೆಯ ಸ್ಪಂದೆನೆ ದೊರೆತಿದೆ. ಸ್ಥಳೀಯರು ಕೂಡಾ ಒಮ್ಮೆ ಭೇಟಿ ನೀಡಿ ಇದರ ರುಚಿಯನ್ನು ಅನುಭವಿಸಿರಿ ಎಂದು ಮನವಿ ಮಾಡಿದರು. ಪೊಟಾಟೊ ಸ್ಪ್ರಿಂಗ್ ಗೆ ಚೀಸ್, ಜೇನು ಮುಂತಾದವುಗಳನ್ನು ಹಾಕಿ ತಯಾರಿಸುವುದರಿಂದ ಇದರ ರುಚಿ ಅದ್ಭುತವಾಗಿದೆ. ಇದನ್ನು ಹೈದ್ರಾಬಾದಿನಲ್ಲಿ ಒಮ್ಮೆ ತಿಂದ ನೆನಪಿದೆ. ಆಗತಾನೆ ತಯಾರಿಸಿ ಕೊಡುತ್ತಿದ್ದು, ಬಿಸಿಬಿಸಿಯಾದ ಪೊಟಾಟೋ ಸ್ಪ್ರಿಂಗನ್ನು ತಿನ್ನುವುದು ತುಂಬಾ ರುಚಿಕರವಾಗಿದೆ ಎಂದು ಸ್ಥಳೀಯರಾದ ಹಕೀಂ ತಿಳಿಸಿದರು.

No comments

Post a Comment