ಸಮೀಕ್ಷೆ ಬಗ್ಗೆ ಭಯಪಡಬೇಡಿ, ಅದೆಲ್ಲಾ ಸುಳ್ಳು : ರಾಹುಲ್ ಗಾಂಧಿ

No comments

ನವದೆಹಲಿ : ಲೋಕಸಭೆ ಚುನಾವಣೆಯ ಮತ ಎಣಿಕೆ ಪ್ರಕ್ರಿಯೆಗೆ ಕ್ಷಣಗಣನೆ ಆರಂಭವಾಗಿದ್ದು, ಮತ ಎಣಿಕೆಗೆ ಕೆಲವೇ ಗಂಟೆಗಳು ಉಳಿದಿದೆ.
ಹೀಗಿರುವಾಗ ಫಲಿತಾಂಶದ ಬಗ್ಗೆ ಪಕ್ಷದ ಬೆಂಬಲಿಗರು ಕಾರ್ಯಕರ್ತರು ಆತಂಕಪಡಬೇಡಿ ಎಂದು ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಹೇಳಿದ್ದಾರೆ.
ಮುಂದಿನ 24 ಗಂಟೆಗಳು ಬಹಳ ಮುಖ್ಯವಾದುದು. ಎಚ್ಚರದಿಂದಿರಿ. ಭಯ ಪಡಬೇಡಿ, ನಾವು ಸತ್ಯಕ್ಕಾಗಿ ಹೋರಾಡುತ್ತಿದ್ದೇವೆ, ಸುಳ್ಳು ಮತಗಟ್ಟೆ ಸಮೀಕ್ಷೆಗಳಿಂದ ಧೈರ್ಯಗುಂದಬೇಡಿ ಎಂದು ರಾಹುಲ್ ಟೀಕಿಸಿದ್ದಾರೆ.

No comments

Post a Comment