ಮೇ ೨೬ ರಂದು ಜಿಲ್ಲಾ ಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆ

No comments

ಮಡಿಕೇರಿ ಮೇ 10 :
ನಗರದ ಕಿಂಗ್ಸ್ ಆಫ್ ಕೂರ್ಗ್ ಡ್ಯಾನ್ಸ್ ಇನ್‍ಸ್ಟಿಟ್ಯುಷನ್ ವತಿಯಿಂದ ಇದೇ ಮೇ 26 ರಂದು ಜಿಲ್ಲಾ ಮಟ್ಟದ ಸೋಲೋ ಡ್ಯಾನ್ಸ್ ಸ್ಪರ್ಧೆ ನಡೆಯಲಿದೆ ಎಂದು ಸಂಸ್ಥೆಯ ತರಬೇತುದಾರ ಹೆಚ್.ಎನ್.ಮಹೇಶ್ ತಿಳಿಸಿದ್ದಾರೆ.
ಮೇ 26 ರಂದು ಬೆಳಗ್ಗೆ 11 ಗಂಟೆಗೆ ನಗರದ ಹಿಲ್ ರಸ್ತೆ ಬಳಿ ಇರುವ ಇನ್‍ಸ್ಟಿಟ್ಯುಷನ್‍ನ ಕಚೇರಿಯಲ್ಲಿ ಸ್ಪರ್ಧೆಯನ್ನು ಆಯೋಜಿಸಲಾಗಿದ್ದು, ಆಸಕ್ತರು ಮೇ 24 ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಯಾವುದೇ ಪ್ರವೇಶ ಶುಲ್ಕವಿರುವುದಿಲ್ಲ ಮತ್ತು ವಿಜೇತರಿಗೆ ಆಕರ್ಷಕ ಟ್ರೋಫಿ ಹಾಗೂ ಪ್ರಶಸ್ತಿ ಪತ್ರ ನೀಡಲಾಗುವುದು.
ಸಬ್ ಜೂನಿಯರ್ ವಿಭಾಗದಲ್ಲಿ 4 ರಿಂದ 8 ವರ್ಷದೊಳಗಿನ ಮಕ್ಕಳಿಗೆ ಹಾಗೂ ಜೂನಿಯರ್ಸ್ ವಿಭಾಗದಲ್ಲಿ 9 ರಿಂದ 14 ವರ್ಷದೊಳಗಿನ ಮಕ್ಕಳು ಸ್ಪರ್ಧಿಸಬಹುದಾಗಿದೆ. ಎರಡೂ ವಿಭಾಗಗಳಲ್ಲೂ ಪ್ರಥಮ, ದ್ವಿತೀಯ ಹಾಗೂ ತೃತೀಯ ಬಹುಮಾನಗಳಿರುತ್ತವೆ. ಸ್ಪರ್ಧೆಯಲ್ಲಿ ಭಾಗವಹಿಸುವ ಎಲ್ಲಾ ಮಕ್ಕಳಿಗೆ ಪ್ರಮಾಣಪತ್ರ ನೀಡಲಾಗುವುದೆಂದು ಮಹೇಶ್ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 96633 26204

No comments

Post a Comment