ಪಶ್ಚಿಮ ಬಂಗಾಲದ ಹೌರಾ ಜಿಲ್ಲೆಯಲ್ಲಿ ಚುನಾವಣೆ ಕರ್ತವ್ಯದಲ್ಲಿ ನಿರತರಾಗಿದ್ದ ಅಸ್ಸಾಂ ರೈಫಲ್ಸ್‌ನ ಯೋಧ ಗುಂಡು ಹಾರಿಸಿದ ಪರಿಣಾಮ ಒಬ್ಬ ಸಹಾಯಕ ಸಬ್ ಇನ್ಸ್‌ಪೆಕ್ಟರ್ ಅಸುನೀಗಿ, ಇಬ್ಬರು ಗಾಯಗೊಂಡಿದ್ದಾರೆ.
ಬಗ್ನಾನ್ ಎಂಬಲ್ಲಿ ಲಕ್ಷ್ಮೀಕಾಂತ್ ಬರ್ಮನ್ ಎಂಬಾತ 13 ಸುತ್ತು ಗುಂಡು ಹಾರಿಸಿದ್ದಾನೆ. ಅಸುನೀಗಿದ ಅಧಿಕಾರಿಯನ್ನು ಭೋಲಾನಾಥ್ ದಾಸ್ ಮತ್ತು ಗಾಯಗೊಂಡವರನ್ನು ಅನಿಲ್ ರಾಜ್‌ಬಾನ್ ಶಾಹಿ, ರಂತು ಮನಿ ಎಂಬವರಾಗಿದ್ದು ಆಸ್ಪತ್ರೆಗೆ ದಾಖಲಿಸಲಾಗಿದೆ. ಗುಂಡು ಹಾರಿಸಿದಾತನನ್ನು ವಶಕ್ಕೆ ಪಡೆಯಲಾಗಿದೆ. ಆತ ಮಾನಸಿಕವಾಗಿ ಅಸ್ವಸ್ಥನಾಗಿದ್ದ. ಹೀಗಾಗಿ ಆತನನ್ನು ಚುನಾವಣೆ ಕರ್ತವ್ಯದಿಂದ ಹೊರಗಿಡಲಾಗಿತ್ತು. ಇದರ ಹೊರತಾಗಿಯೂ ಲಕ್ಷ್ಮೀಕಾಂತ್ ಬರ್ಮನ್ ಎಂಬಾತ ಗನ್ ಸೆಳೆದು ಗುಂಡು ಹಾರಿಸಿದ್ದಾನೆ ಎಂದು ಹೆಚ್ಚುವರಿ ಪೊಲೀಸ್ ಮಹಾನಿರ್ದೇಶಕ ಸಿದ್ಧಿನಾಥ್ ಗುಪ್ತಾ ಹೇಳಿದ್ದಾರೆ.

No comments
Post a Comment