ಮೇ ೧೮ ಮತ್ತು ೧೯ ರಂದು ರೋಮನ್ ಕ್ಯಾಥೋಲಿಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ

No comments



ಮೇ 18 ಮತ್ತು 19 ರಂದು ರೋಮನ್ ಕ್ಯಾಥೋಲಿಕ್ ಬಾಲ್ ಕ್ರಿಕೆಟ್ ಪಂದ್ಯಾವಳಿ : 
ಮಡಿಕೇರಿ ಮೇ 9 :
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ 8ನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ-2019ನ್ನು ಮೇ 18 ಮತ್ತು 19ರಂದು ನಗರದ ಜನರಲ್ ತಿಮ್ಮಯ್ಯ ಜಿಲ್ಲಾ ಕ್ರೀಡಾಂಗಣದಲ್ಲಿ ಆಯೋಜಿಸಲಾಗಿದೆ ಎಂದು 

ಅಸೋಸಿಯೇಷನ್ ಪ್ರಧಾನ ಕಾರ್ಯದರ್ಶಿ ಜಾನ್ಸನ್ ಪಿಂಟೋ ತಿಳಿಸಿದ್ದಾರೆ.
ಒಂದು ಧರ್ಮ ಕೇಂದ್ರದ ಎರಡು ತಂಡಗಳಿಗೆ ಅವಕಾಶ ನೀಡಲಾಗಿದೆ, ಆಟಗಾರರು ಕಡ್ಡಾಯವಾಗಿ ಅದೇ ಧರ್ಮಕೇಂದ್ರಕ್ಕೆ ಸೇರಿದವರಾಗಿದ್ದು, ಕ್ಯಾಥೋಲಿಕ್ ಕ್ರಿಶ್ಚಿಯನ್ನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಆಟಗಾರರ ತಂಡಗಳು ಮೇ 10ರೊಳಗೆ ಹೆಸರನ್ನು ನೋಂದಾಯಿಸಿಕೊಳ್ಳಬೇಕು. ಅರ್ಜಿಯ ಮೇಲೆ ಧರ್ಮಕೇಂದ್ರದ ಗುರುಗಳ ಸಹಿ ಮತ್ತು ಮೊಹರು ಇರಬೇಕು, ತಂಡವೊಂದು 1500 ರೂ.ಗಳನ್ನು ನೋಂದಣಿ ಶುಲ್ಕವಾಗಿ ಪಾವತಿಸಬೇಕು. ತೀರ್ಪುಗಾರರ ತೀರ್ಮಾನವೇ ಅಂತಿಮವಾಗಿರುತ್ತದೆ ಎಂದು ಜಾನ್ಸನ್ ಪಿಂಟೋ ಹೇಳಿದ್ದಾರೆ.
ಪಂದ್ಯಾಟವು ನಾಕೌಟ್ ಮಾದರಿಯಲ್ಲಿದ್ದು, 6 ಓವರ್‍ಗಳಾಗಿರುತ್ತದೆ, ಸೆಮಿ ಫೈನಲ್ 8 ಓವರ್ ಆಗಿದ್ದು, ಫೈನಲ್ ಹಂತದಲ್ಲಿ 10 ಓವರ್‍ಗಳ ಪಂದ್ಯಾಟವಾಗಿರುತ್ತದೆ. ಲೀಗ್ ಹಂತದಲ್ಲಿ ಪಂದ್ಯಾಟ ಡ್ರಾ ಆದಲ್ಲಿ ವಿಕೆಟ್‍ಗಳ ಆಧಾರದ ಮೇಲೆ ಫಲಿತಾಂಶ ಘೋಷಿಸಲಾಗುವುದು. ಪ್ರತಿ ತಂಡವು ತಮಗೆ ನೀಡಿರುವ ಸಮಯಕ್ಕಿಂತ 30 ನಿಮಿಷ ಮುಂಚಿತವಾಗಿ ತಮ್ಮ ಇರುವಿಕೆಯನ್ನು ತಿಳಿಸಬೇಕು, ತಪ್ಪಿದ್ದಲ್ಲಿ ವಾಕ್ ಓವರ್ ನೀಡಲಾಗುವುದು ಎಂದು ಮಾಹಿತಿ ನೀಡಿದ್ದಾರೆ.
ಪ್ರತಿ ತಂಡ 11+3 ಆಟಗಾರರನ್ನು ಹೊಂದಿರಬೇಕು, ಮೈದಾನದಲ್ಲಿ ಆಟಗಾರರು ಪರಸ್ಪರ ಸೌಜನ್ಯದಿಂದ ವರ್ತಿಸಬೇಕು. ಗೊಂದಲಗಳು ಮೂಡಿದರೆ ತೀರ್ಪುಗಾರರು ಮತ್ತು ಸಂಘಟಕರು ಸೂಕ್ತ ಕ್ರಮ ಕೈಗೊಳ್ಳಲಿದ್ದಾರೆ. ಇದುವೇ ಅಂತಿಮ ತೀರ್ಮಾನವಾಗಿರುತ್ತದೆ ಎಂದು ಜಾನ್ಸನ್ ಪಿಂಟೋ ತಿಳಿಸಿದ್ದಾರೆ.
ಹೆಚ್ಚಿನ ಮಾಹಿತಿಗಾಗಿ 94480 00436, 94497 67492, 99800 60342, 94482 78216ನ್ನು ಸಂಪರ್ಕಿಸಬಹುದು.
================

No comments

Post a Comment