ಮುಂಬೈ: ಮೇ 30ರಿಂದ ಆರಂಭಗೊಳ್ಳಲಿರುವ ಐಸಿಸಿ ಏಕದಿನ ವಿಶ್ವಕಪ್ಗಾಗಿ ವಿರಾಟ್ ಕೊಹ್ಲಿ ನೇತೃತ್ವದ ಟೀಂ ಇಂಡಿಯಾ ನಾಳೆ ಇಂಗ್ಲೆಂಡ್‌ನತ್ತ ಪ್ರಯಾಣ ಬೆಳೆಸಲಿದೆ. ಅದಕ್ಕೂ ಮುಂಚಿತವಾಗಿ ಇಂದು ಮುಂಬೈನಲ್ಲಿ ಸುದ್ದಿಗೋಷ್ಠಿ ನಡೆಸಲಾಯಿತು.
ಟೀಂ ಇಂಡಿಯಾ ಕೋಚ್ ರವಿಶಾಸ್ತ್ರಿ ಹಾಗೂ ಕ್ಯಾಪ್ಟನ್ ವಿರಾಟ್ ಕೊಹ್ಲಿ ಸುದ್ದಿಗೋಷ್ಠಿ ನಡೆಸಿದರು. ಈ ಬಾರಿಯ ವಿಶ್ವಕಪ್ ಹೆಚ್ಚು ಸ್ಪರ್ಧಾತ್ಮಕವಾಗಿದ್ದು, ಉತ್ತಮ ಪ್ರದರ್ಶನದತ್ತ ಗಮನ ಹರಿಸಲಾಗುವುದು ಎಂದು ಕೊಹ್ಲಿ ಪ್ರಶಸ್ತಿ ಗೆಲ್ಲುವ ವಿಶ್ವಾಸ ವ್ಯಕ್ತಪಡಿಸಿದರು.
ವಿಶ್ವಕಪ್ಗಾಗಿ ಎಲ್ಲ ಆಟಗಾರರು ಉತ್ತಮ ಫಾರ್ಮ್ನಲ್ಲಿದ್ದಾರೆ. ಟ್ರೋಫಿ ಗೆಲ್ಲುವತ್ತ ಹೆಚ್ಚಿನ ಗಮನ ಹರಿಸಲಾಗುವುದು. ಎದುರಾಳಿ ತಂಡ ಯಾವುದೇ ಟಾರ್ಗೆಟ್ ನೀಡಿದರೂ ಅದನ್ನ ಬೆನ್ನಟ್ಟುವತ್ತ ಗಮನ ಹರಿಸಲಾಗುವುದು ಎಂದು ತಿಳಿಸಿರುವ ಕೊಹ್ಲಿ, ಬ್ಯಾಟಿಂಗ್ ಹಾಗೂ ಬೌಲಿಂಗ್‌ನಲ್ಲಿ ಭಾರತ ಹೆಚ್ಚು ಸದೃಢವಾಗಿದೆ ಎಂದರು.ವಿಶ್ವಕಪ್‌ನಂತಹ ಅತೀ ದೊಡ್ಡ ಟೂರ್ನಿಗಳಲ್ಲಿ ಒತ್ತಡ ನಿರ್ವಹಣೆ ಬಹಳ ಮುಖ್ಯ ಅಂತಾ ಕೊಹ್ಲಿ ಅಭಿಪ್ರಾಯಪಟ್ಟಿದ್ದಾರೆ.ಇದೇ ವೇಳೆ ಮಾತನಾಡಿರುವ ಕೋಚ್ ರವಿ ಶಾಸ್ತ್ರಿ, ವಿಶ್ವಕಪ್ನಲ್ಲಿ ಧೋನಿ ಹೆಚ್ಚಿನ ಪಾತ್ರ ನಿರ್ವಹಿಸಲಿದ್ದಾರೆ. ಅವರ ಸ್ಥಾನವನ್ನ ತುಂಬುವ ಬೇರೆ ಯಾವುದೇ ಆಟಗಾರ ಸದ್ಯಕ್ಕಿಲ್ಲ. ಕೆಲ ಕಠಿಣ ಸಂದರ್ಭಗಳಲ್ಲಿ ಅವರು ತೆಗೆದಿಕೊಳ್ಳುವ ನಿರ್ಧಾರ ಮಹತ್ವವಾಗಿರುತ್ತವೆ ಎಂದರು.
ಮೇ 30 ರಿಂದ ವಿಶ್ವಕಪ್ ಪಂದ್ಯ ಆರಂಭವಾಗಲಿದ್ದು, ಮೇ 22 ರಂದು ಭಾರತ ತಂಡ ಇಂಗ್ಲೆಂಡ್ ಗೆ ಪ್ರಯಾಣ ಬೆಳೆಸಲಿದೆ.

No comments
Post a Comment