ರಾಜ್ಯ ಸರ್ಕಾರವು ಅನುಷ್ಠಾನಕ್ಕೆ ತರಲು ನಿರ್ಧರಿಸಿರುವ ಮೋಡ ಬಿತ್ತನೆ ಯೋಜನೆಯನ್ನು ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಯಾವುದೇ ಕಾರಣಕ್ಕೂ ಅನುಷ್ಠಾನಗೊಳಿಸಬಾರದೆಂದು ಅಖಿಲ ಕೊಡವ ಸಮಾಜವು ತೀವ್ರ ವಿರೋದ ವ್ಯಕ್ತಪಡಿಸಿದೆ. *ಈ ಕುರಿತು ಮಾನ್ಯ, ಮುಖ್ಯ ಮಂತ್ರಿಗಳು, ಕೊಡಗು ಜಿಲ್ಲಾ ಉಸ್ತುವಾರಿ ಸಚಿವರು, ಶಾಸಕರಾದ ಅಪ್ಪಚ್ಚು ರಂಜನ್, ಕೆ.ಜಿ.ಬೋಪಯ್ಯ, ವೀಣಾಅಚ್ಚಯ್ಯ, ಸುನಿಲ್ ಸುಬ್ರಮಣಿ ಹಾಗೂ ಕೊಡಗು ಜಿಲ್ಲಾದಿಕಾರಿಗಳಿಗೆ ಇಮೈಲ್ ಮೂಲಕ ಪತ್ರ ಬರೆದಿರುವ ಅಖಿಲ ಕೊಡವ ಸಮಾಜ ಅಧ್ಯಕ್ಷ ಮಾತಂಡ ಮೊಣ್ಣಪ್ಪ* ಅವರು, ಕಳೆದ ಬಾರಿಯ ಪ್ರಾಕ್ರುತಿಕ ವಿಕೋಪದಿಂದಾಗಿ, ಜರ್ಜರಿತವಾಗಿರುವ ಕೊಡಗು, ಇನ್ನೂ ಕೂಡ ಚೇತರಿಸಿಕೊಂಡಿಲ್ಲ. ಮತ್ತೆ ಗಾಯದ ಮೇಲೆ ಬರೆ ಎಂಬಂತೆ ಮೋಡ ಬಿತ್ತನೆಯಾದರೆ ಮತ್ತೋಮ್ಮೆ ಅನಾಹುತ ಸಂಭವಿಸುವುದರಲ್ಲಿ ಅನುಮಾನವೇ ಇಲ್ಲ. ವಾಡಿಕೆಯಂತೆ ಕೊಡಗು ಹಾಗೂ ಮಲೆನಾಡು ಭಾಗದಲ್ಲಿ ಮುಂಗಾರು ಮಳೆಯು ಜೂನ್ ತಿಂಗಳಲ್ಲಿ ನಿಧಾನವಾಗಿ ಪ್ರಾರಂಭವಾಗಿ ಜುಲೈ ಹಾಗೂ ಅಗಷ್ಟ್ ತಿಂಗಳುಗಳಲ್ಲಿ ದಾರಾಕಾರವಾಗಿ ಯತೇಚ್ಚ ಮಳೆಯಾಗುತ್ತದೆ. ಇದು ಪ್ರಾಕ್ರುತಿಕವಾಗಿ ನಡೆಯುವ ಘಟನೆಯಾಗಿದ್ದು ಇದರ ವಿರುದ್ದ ಮಾನವ ನಿರ್ಮಿತ ಮೋಡಬಿತ್ತನೆ ಮಾಡಿದರೆ ಪ್ರಕ್ರುತಿಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರಿ ಮತ್ತೆ ವಿಕೋಪ ಸಂಭವಿಸುವ ಎಲ್ಲಾ ಸಾಧ್ಯತೆ ಇದೆ. ಇದರಿಂದ ಈ ಭಾಗದ ನಾಗರೀಕರೇ ಅಲ್ಲದೆ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೂ ಸಂಕಷ್ಟ ಎದುರಾಗಲಿದೆ ಮತ್ತು ಈಗಾಗಲೇ ವಿಕೋಪದಿಂದ ಜರ್ಜರಿತರಾಗಿರುವ ರೈತರು, ವರ್ತಕರು, ಉದ್ಯಮಿಗಳು, ಕಾರ್ಮಿಕರು ಸೇರಿದಂತೆ, ಎಲ್ಲಾ ಜೀವ ಸಂಕುಲವೂ ಅಸ್ತಿತ್ವ ಕಳೆದು ಕೊಳ್ಳುವ ಅಪಾಯವಿದೆ. ಹೀಗಾಗಿ, ಯಾವುದೇ ಕಾರಣಕ್ಕೂ ಸರ್ಕಾರ ಕೊಡಗು ಸೇರಿದಂತೆ ಮಲೆನಾಡುಭಾಗದಲ್ಲಿ ಮೋಡ ಬಿತ್ತನೆ ಮಾಡಬಾರದು. ಆದರೆ ಬರಪೀಡಿತ ಪ್ರದೇಶಗಳಲ್ಲಿ ಮೋಡ ಬಿತ್ತನೆ ಕೈಗೊಳ್ಳಲು ನಮ್ಮ ವಿರೋದವಿಲ್ಲ. ಒಂದು ವೇಳೆ ನಮ್ಮ ವಿರೋಧವನ್ನು ಲೆಕ್ಕಿಸದೆ ಸರ್ಕಾರ ಈ ಭಾಗದಲ್ಲಿ ಮೋಡಬಿತ್ತನೆ ಮಾಡಿದರೆ ಅಖಿಲ ಕೊಡವ ಸಮಾಜದ ನೇತ್ರುತ್ವದಲ್ಲಿ ಈ ಭಾಗದ ರೈತರು ಹಾಗೂ ಎಲ್ಲ ಸಂಘ ಸಂಸ್ಥೆಗಳ ಸಹಯೋಗದಲ್ಲಿ ಉಗ್ರ ಪ್ರತಿಭಟನೆ ಕೈಗೊಳ್ಳಲಾಗುವುದೆಂದು ಆಗ್ರಹಿಸಿದ್ದಾರೆ. ಈ ವಿಚಾರದಲ್ಲಿ ಕೊಡಗು ಸೇರಿದಂತೆ ಮಲೆನಾಡು ಭಾಗದ ರೈತರು ಸೇರಿದಂತೆ ಎಲ್ಲ ಸಂಘ ಸಂಸ್ಥೆಗಳು ಜಾಗ್ರುತರಾಗಿ, ತಮ್ಮ ಅಸ್ತಿತ್ವಕ್ಕಾಗಿ, ಸರಾಕಾರಕ್ಕೆ ತಮ್ಮ ಪ್ರತಿಭಟನೆಯನ್ನು ದಾಖಲಿಸುವ ಮೂಲಕ ಸರ್ಕಾರದ ಕ್ರಮವನ್ನು ವಿರೋದಿಸ ಬೇಕೆಂದು ಮಾತಂಡ ಮೊಣ್ಣಪ್ಪ ಅವರು ಮನವಿ ಮಾಡಿದ್ದಾರೆ. - ಚಾಮೆರ ದಿನೇಶ್ ಬೆಳ್ಯಪ್ಪ. ಕೇಂದ್ರ ಸಮಿತಿ ಸದಸ್ಯ ಅಖಿಲ ಕೊಡವ ಸಮಾಜ
ಕೊಡಗಿನಲ್ಲಿ ಮೋಡ ಬಿತ್ತನೆಗೆ ಅಖಿಲ ಕೊಡವ ಸಮಾಜ ತೀವ್ರ ವಿರೋದ

No comments
Post a Comment