ಇಂಡೋ-ಇಂಟರ್ನ್ಯಾಶನಲ್ ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟ : ಪುಣೆ ಪ್ರೈಡ್ ತಂಡದಲ್ಲಿ ಕೊಡಗಿನ ಸೋಮವಾರಪೇಟೆಯ ಸಚಿನ್ ಪೂವಯ್ಯ

No comments

ವರದಿ : ಕೆ.ಎಂ ಇಸ್ಮಾಯಿಲ್ ಕಂಡಕರೆ
ಮಡಿಕೇರಿ:ಕೊಡಗು ಜಿಲ್ಲೆ ಕ್ರೀಡೆಯ ತವರೂರು. ಪುಟ್ಟ ಜಿಲ್ಲೆಯಾದ ಕೊಡಗು ರಾಜ್ಯ, ರಾಷ್ಟ್ರ, ಅಂತಾರಾಷ್ಟ್ರೀಯ ಮಟ್ಟಕ್ಕೆ ಕ್ರೀಡೆಯಲ್ಲಿ ತನ್ನದೇ ಆದ ಕೊಡುಗೆಯನ್ನು ನೀಡಿದೆ. ಕೊಡಗಿನಲ್ಲಿ ಹಾಕಿ ಕ್ರೀಡೆಗೆ ಅತೀ ಹೆಚ್ಚು ಪ್ರೋತ್ಸಾಹ , ಬೆಂಬಲ ನೀಡುತ್ತಿದೆ ಎಂದರೆ ತಪ್ಪಾಗಲಾರದು. ಆದರೆ ಇತ್ತೀಚಿನ ದಿನಗಳಲ್ಲಿ ದೇಸಿ ಕ್ರೀಡೆ ಕಬಡ್ಡಿಗೆ ಕ್ರೀಡಾಪ್ರೇಮಿಗಳ ಸಹಕಾರದಿಂದ , ಎಲೆ ಮರೆ ಕಾಯಿಯಂತಿರುವ ಕೊಡಗಿನ ಕಬಡ್ಡಿ ಕ್ರೀಡಾಪಟುಗಳಿಗೆ ಕೊಂಚ ಮಟ್ಟಿಗೆ ಪ್ರೋತ್ಸಾಹ ದೊರಕುತ್ತಿರುವುದು ನಮಗೆ ಮೇಲ್ನೋಟಕ್ಕೆ ಕಂಡುಬರುತ್ತಿದೆ. ದೇಶದ ಪ್ರತಿಷ್ಠಿತ ಪ್ರೊ ಕಬಡ್ಡಿ ಲೀಗ್ ಗೆ ಬಂಡಾಯವಾಗಿ ಆರಂಭಗೊಂಡಿರುವ ಇಂಡೋ ಇಂಟರ್ ನ್ಯಾಶನಲ್ ಪ್ರೀಮಿಯರ್ ಕಬಡ್ಡಿ ಲೀಗ್ ಗೆ ಕೊಡಗಿನ ಸೋಮವಾರಪೇಟೆಯ ೨೧ರ ಹರೆಯದ ಯುವ ಕಬಡ್ಡಿ ಪಟು ಸಚಿನ್ ಪೂವಯ್ಯ ಆಯ್ಕೆಯಾಗಿದ್ದಾರೆ. ಮೇ ೧೩ ರಿಂದ ಪುಣೆಯಲ್ಲಿ ಇಂಡೋ ಇಂಟರ್ ನ್ಯಾಶನಲ್ ಪ್ರೀಮಿಯರ್ ಲೀಗ್ ಕಬಡ್ಡಿ ಪಂದ್ಯಾಟಕ್ಕೆ ವಿಧ್ಯುಕ್ತ ಚಾಲನೆ ದೊರೆತಿದೆ. ಸಚಿನ್ ನನ್ನು ಟೂರ್ನಿಯ ಬಲಿಷ್ಠ ತಂಡವಾದ ಪುಣೆ ಪ್ರೈಡ್ ತಂಡವು ೮ ಲಕ್ಷ ರೂ ನೀಡಿ ಬಿಕರಿ ಮಾಡಿದೆ. ಇವರ ಜೊತೆ ಕರ್ನಾಟಕದ ಸ್ಟಾರ್ ಆಟಗಾರರಾದ ಅಜಿತ್, ಮಂಡ್ಯದ ವೆಂಕಟೇಶ್, ಬೇರೆ ತಂಡಗಳ ಪಾಲಾಗಿದ್ದಾರೆ. ಸಚಿನ್ ಕೊಡಗು ಜಿಲ್ಲೆಯ ಸೋಮವಾರಪೇಟೆ ತಾಲೂಕಿನ ಗೋಣಿಮಾರೂರು ಗ್ರಾಮದ ಪೂವಯ್ಯ.ಹೆಚ್.ಎಸ್ ಮತ್ತು ಸರಸು.ಹೆಚ್.ಪಿ ದಂಪತಿಯ ಪುತ್ರ. ಬಾಲ್ಯದಿಂದಲೇ ಕಬಡ್ಡಿ ಕ್ರೀಡೆಯ ಬಗ್ಗೆ ಆಸಕ್ತಿ ಬೆಳೆಸಿಕೊಂಡಿದ್ದ. ಪ್ರಾಥಮಿಕ ಶಿಕ್ಷಣವನ್ನು ಸೋಮವಾರಪೇಟೆಯ ಜ್ಞಾನ ವಿಕಾಸ ಶಾಲೆಯಲ್ಲಿ, ಪಿಯುಸಿಯನ್ನು ಸೇಂಟ್ ಜೋಸೆಫ್ ಕಾಲೇಜು ಹಾಗೂ ಪದವಿ ಶಿಕ್ಷಣವನ್ನು ಕನ್ನಡ ಭಾರತಿ ಕುಶಾಲನಗರದಲ್ಲಿ ಪಡೆದಿದ್ದಾರೆ. ನಂತರ ಸೋಮವರಪೇಟೆಯ ಸತ್ಯ ಸ್ಪೋಟ್ಸ್ ಕ್ಲಬ್‍ ನಲ್ಲಿ ಕಬಡ್ಡಿ ತಂಡದ ಸದಸ್ಯರಾಗಿ ಸೇರಿಕೊಂಡರು. ಕ್ಲಬ್ ನ ತರಬೇತುದಾರ ಕೆ.ಬಿ.ಸತೀಶ್ ಎಂಬುವವರ ಬಳಿ ತರಬೇತಿಯನ್ನು ನಿರಂತರವಾಗಿ ಪಡೆದರು. ಸತ್ಯ ಸ್ಪೋಟ್ಸ್ ಕ್ಲಬ್ ಕಬಡ್ಡಿ ತಂಡದಲ್ಲಿ ಪಾಲ್ಗೊಂಡು ವಿವಿಧ ಪಂದ್ಯಾವಳಿಗಳಲ್ಲಿ ಹಲವು ಪ್ರಶಸ್ತಿಗಳನ್ನು ಪಡೆದಿದ್ದಾರೆ. ವಿಶೇಷವೆಂದರೆ ಮೊದಲ ಬಾರಿಗೆ ಈ ಲೀಗ್ ನಡೆಯಲಿದ್ದು ಅಮೆಚೂರ್ ಕಬಡ್ಡಿ ಸಂಸ್ಥೆಗೆ ಬಂಡಾಯವಾಗಿ ಹುಟ್ಟಿಕೊಂಡಿರುವ ಇಂಡೋ ಇಂಟರ್ ನ್ಯಾಷನಲ್ ಪ್ರೀಮಿಯರ್ ಕಬಡ್ಡಿ ಲೀಗ್ ನಲ್ಲಿ ಸಚಿನ್ ಪೂವಯ್ಯ ಪುಣೆ ಪ್ರೈಡ್ ತಂಡದಲ್ಲಿ ಆಡುತ್ತಿದ್ದಾರೆ. ಇವರ ತರಬೇತುದಾರದದ ಕೆ.ಬಿ.ಸತೀಶ್ ಈ ಕಬಡ್ಡಿ ಲೀಗ್ ನ ತೀರ್ಪುಗಾರರಾಗಿ ಪಾಲ್ಗೊಂಡಿದ್ದಾರೆ ಪಂದ್ಯಗಳು ಪುಣೆ, ಮೈಸೂರು ಹಾಗೂ ಬೆಂಗಳೂರಿನಲ್ಲಿ ನಡೆಯಲಿದೆ ಒಟ್ಟು 44 ಪಂದ್ಯಗಳು ನಡೆಯಲಿದ್ದು ಎಂಟು ತಂಡಗಳು ಅದೃಷ್ಟ ಪರೀಕ್ಷೆಗೆ ಇಳಿಯಲಿವೆ. ವಿದೇಶಿ ಆಟಗಾರರು ಸೇರಿದಂತೆ ಒಟ್ಟು 160 ಮಂದಿ ಆಟಗಾರರು ಈ ಲೀಗ್ ನಲ್ಲಿ ಅಡಲಿದ್ದಾರೆ. *ಕೋಟ್* ಇಂಡೋ ಇಂಟರ್ನ್ಯಾಷನಲ್ ಕಬಡ್ಡಿ ಲೀಗ್ ನಲ್ಲಿ ಪುಣೆ ತಂಡಕ್ಕೆ ಸಚಿನ್ ಪೂವಯ್ಯ ಆಯ್ಕೆಯಾಗಿರುವುದು ತುಂಬಾ ಸಂತಸ ತಂದಿದೆ. ಜಿಲ್ಲೆಯಲ್ಲಿ ಸಾಕಷ್ಟು ಕಬಡ್ಡಿ ಪ್ರತಿಭೆಗಳಿವೆ. ಯುವ ಪ್ರತಿಭೆಗಳನ್ನು ಗುರುತಿಸಿ ಅವರಿಗೆ ಕಬಡ್ಡಿಯಲ್ಲಿ ಸೂಕ್ತ ತರಬೇತಿ ನೀಡಿ , ಉತ್ತಮ ಕಬಡ್ಡಿ ಪಟುವಾಗಿ ರೂಪಿಸಬೇಕಾಗಿದೆ. *ಕೆ.ಬಿ. ಸತೀಶ್,* *ಕಬಡ್ಡಿ ತರಬೇತುದಾರ ಸತ್ಯ ಸ್ಪೋಟ್ಸ್ ಕ್ಲಬ್ ಸೋಮವಾರಪೇಟೆ*

No comments

Post a Comment