ಮೆಡಿಕಲ್ ಕಾಲೇಜಿನಲ್ಲಿ ವಿಶ್ವರೆಡ್ ಕ್ರಾಸ್ ದಿನಾಚರಣೆ

No comments

ಮೆಡಿಕಲ್ ಕಾಲೇಜಿನಲ್ಲಿ ವಿಶ್ವರೆಡ್ ಕ್ರಾಸ್ ದಿನಾಚರಣೆ -  ಜಲಪ್ರಳಯದ ಸಂಕಷ್ಟದಲ್ಲಿದ್ದವರಿಗೆ ಕಿಟ್ ವಿತರಣೆ.
ರೆಡ್ ಕ್ರಾಸ್ ನಿಂದ ಮಾನವೀಯ ಮೌಲ್ಯಗಳ ಪರಿಣಾಮಕಾರಿಯಾಗಿ ಅನುಷ್ಠಾನ - ಡಾ.ವಿಶಾಲ್ ಕುಮಾರ್.
  
ಮಡಿಕೇರಿ ಮೇ.8- ಮಾನವೀಯತೆಯಿಂದ ಶಾಂತಿಯ ಕಡೆಗೆ ಎಂಬ ಧೇಯ ವಾಕ್ಯದೊಂದಿಗೆ ಕಾಯ9ನಿವ9ಹಿಸುತ್ತಿರುವ ಅಂತರರಾಷ್ಟ್ರೀಯ ರೆಡ್ ಕ್ರಾಸ್ ಮಾನವೀಯ ಮೌಲ್ಯ ಮತ್ತು ತತ್ವಗಳನ್ನು ಪರಿಣಾಮಕಾರಿಯಾಗಿ ವಿಶ್ವದಾದ್ಯಂತ ಪಸರಿಸುವಲ್ಲಿ ಪ್ರಮುಖ ಪಾತ್ರ ವಹಿಸಿದೆ ಎಂದು ಕೊಡಗು ವೈದ್ಯಕೀಯ ಕಾಲೇಜಿನ ಪ್ರಾಂಶುಪಾಲ ಡಾ.ವಿಶಾಲ್ ಕುಮಾರ್ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯಲ್ಲಿ ಕೊಡಗು ರೆಡ್ ಕ್ರಾಸ್ ಸಂಸ್ಥೆ ಮತ್ತು ವೈದ್ಯಕೀಯ ಕಾಲೇಜಿನ ಯೂತ್ ರೆಡ್ ಕ್ರಾಸ್ ಸಂಸ್ಥೆಗಳ ವತಿಯಿಂದ ಜರುಗಿದ ವಿಶ್ವ ರೆಡ್ ಕ್ರಾಸ್ ದಿನಾಚರಣೆ ಉದ್ಘಾಟಿಸಿ ಮಾತನಾಡಿದ ಡಾ.ವಿಶಾಲ್ ಕುಮಾರ್, ರೆಡ್ ಕ್ರಾಸ್ ಸಂಸ್ಥೆ ಜಗತ್ತಿನಾದ್ಯಂತ ಶಾಂತಿ ಮತ್ತು ಸಮುದಾಯ ಸೇವೆಗೆ ಖ್ಯಾತವಾಗಿದ್ದು ಸ್ವಯಂಪ್ರೇರಿತ ಸೇವೆಗೆ ಮೀಸಲಾಗಿರುವ ವಿಶ್ವದ ಪ್ರಮುಖ ಸಂಘಟನೆಯಾಗಿದೆ ಎಂದು ಶ್ಲಾಘಿಸಿದರು. ರೆಡ್ ಕ್ರಾಸ್ ಸಂಸ್ಥೆಗೆ ಕಾಯ9ಕತ9ರಾಗಿ ನೋಂದಾಯಿಸಿಕೊಳ್ಳುವುದು  ಸೇವಾ ಮನೋಭಾವ ಹೊಂದಿರುವ ಪ್ರತೀಯೋವ9 ಕತ9ವ್ಯವಾಗಿರಬೇಕೆಂದೂ ಡಾ.ವಿಶಾಲ್ ಕುಮಾರ್  ಕರೆ ನೀಡಿದರು.
ರೆಡ್ ಕ್ರಾಸ್ ಸಂಸ್ಥೆಯ ಕೊಡಗು ಶಾಖೆಯ ಸಭಾಪತಿ ಬಿ.ಕೆ.ರವೀಂದ್ರ ರೈ ಮಾತನಾಡಿ, ಕೊಡಗು ಜಿಲ್ಲೆಯಲ್ಲಿ ರೆಡ್ ಕ್ರಾಸ್ ವತಿಯಿಂದ ಸಾಕಷ್ಟು ಕಾಯ9ಯೋಜನೆಗಳನ್ನು ಹಮ್ಮಿಕೊಳ್ಳಲು ಉದ್ದೇಶಿಸಲಾಗಿದೆ. ವಿಕೋಪ ಪರಿಸ್ಥಿತಿಯಲ್ಲಿಯೂ ಈಗಾಗಲೇ ಅನೇಕ ಗ್ರಾಮಸ್ಥರಿಗೆ ನೆರವು ನೀಡಲಾಗಿದೆ. ಕೊಡಗಿನ ಹಲವಾರು ಕಾಲೇಜುಗಳಲ್ಲಿ ಯೂತ್ ರೆಡ್ ಕ್ರಾಸ್ ಘಟಕಗಳನ್ನು ಪ್ರಾರಂಭಿಸುವ ಮೂಲಕ ರಕ್ತದಾನ ಶಿಬಿರ, ಆರೋಗ್ಯ ಶಿಬಿರ ಸೇರಿದಂತೆ ಅನೇಕ ಕಾಯ9ಕ್ರಮಗಳನ್ನು ಯೋಜಿಸಲಾಗುತ್ತಿದೆ. ರೆಡ್ ಕ್ರಾಸ್ ವಿಶ್ವದಾದ್ಯಂತ ಲಕ್ಷಾಂತರ ಸಾಮಾಜಿಕ ಚಟುವಟಿಕೆ ಉದ್ದೇಶದ ಕಾಯ9ಕತ9ರ ಸಮೂಹವನ್ನೇ ಹೊಂದಿದ್ದು ಕೊಡಗಿನಲ್ಲಿಯೂ ರೆಡ್ ಕ್ರಾಸ್ ಸಂಘಟನೆಯನ್ನು ಪ್ರಬಲಗೊಳಿಸಲಾಗುತ್ತದೆ ಎಂದು ತಿಳಿಸಿದರು.
ಕಾಲೇಜಿನ ಕಮ್ಯುನಿಟಿ ಮೆಡಿಸಿನ್ ವಿಭಾಗದ ಸಹಾಯಕ ಪ್ರಾಧ್ಯಾಪಕ ಡಾ. ಬಿ.ಎಂ. ಶಿವರಾಜ್ ಮುಖ್ಯ ಉಪನ್ಯಾಸ ನೀಡಿ, ಪ್ರಾಥ9ನೆಗಿಂತ ಸೇವಾ ಮನೋಭಾವ ಸಂಕಷ್ಟದಲ್ಲಿದ್ದವರಿಗೆ ಹೆಚ್ಚಿನ ನೆರವಿಗೆ ಪರಿಣಾಮಕಾರಿಯಾಗುತ್ತದೆ. ವೈದ್ಯ ವ?ತ್ತಿಯನ್ನು ಬಯಸುವವರು ವಿದ್ಯಾಥಿ9 ದೆಸೆಯಿಂದಲೇ ಸಾಮಾಜಿಕ ಸೇವೆಗೂ ಆದ್ಯತೆ ನೀಡಬೇಕಾಗಿದ್ದು, ಇದನ್ನು ರೆಡ್ ಕ್ರಾಸ್ ಮೂಲಕವೂ ಪಡೆಯಬಹುದು ಎಂದು ಸಲಹೆ ನೀಡಿದರು.
ಆರೋಗ್ಯ ಮತ್ತು ಆರೈಕೆ ಬಗ್ಗೆ ಯೂತ್ ರೆಡ್ ಕ್ರಾಸ್ ಮಟ್ಟದಲ್ಲಿಯೇ ವಿದ್ಯಾಥಿ9ಗಳು ಹೆಚ್ಚಿನ ಅಂಶಗಳನ್ನು ತಿಳಿದುಕೊಳ್ಳುವಂತೆ ಡಾ.ಶಿವರಾಜ್ ಕರೆ ನೀಡಿದರು. ಯೂತ್ ರೆಡ್ ಕ್ರಾಸ್ ಮೂಲಕ ಪರಸ್ಪರ ಸ್ನೇಹತ್ವ ಭಾವನೆಯೂ ಬೆಳೆಯುತ್ತದೆ ಎಂದು ಹೇಳಿದ ಡಾ.ಶಿವರಾಜ್, ಕೊಡಗು ವೈದ್ಯಕೀಯ ವಿಜ್ಞಾನ ಸಂಸ್ಥೆಯು ಕೊಡಗಿನ ಪ್ರಕ?ತ್ತಿ ವಿಕೋಪ ಸಂದಭ9 ಸಂಕಷ್ಟಕ್ಕೊಳಗಾದವರಿಗೆ ವಿವಿಧ ರೀತಿಯಲ್ಲಿ ಸ್ಪಂದಿಸಿದೆ ಎಂದು ಪ್ರಾತಕ್ಷಿಕೆ ಮೂಲಕ ಮಾಹಿತಿ ನೀಡಿದರು.
ವೈದ್ಯಕೀಯ ಕಾಲೇಜಿನ ಮುಖ್ಯಕಾಯ9ನಿವ9ಹಣಾಧಿಕಾರಿ ಮೇರಿ ನಾಣಯ್ಯ  ಮಾತನಾಡಿ,  ಮಡಿಕೇರಿಯಲ್ಲಿ ಕೊಡಗಿನ  ಪ್ರಥಮ ವೈದ್ಯಕೀಯ ಕಾಲೇಜು ಪ್ರಾರಂಭವಾಗುವಲ್ಲಿ ಸಾಕಷ್ಟು ಮಂದಿಯ ಶ್ರಮವಿದ್ದು, ಕಾಲೇಜಿನ ಬೋಧಕ ಮತ್ತು ಬೋಧಕೇತರ ಸಿಬ್ಬಂದಿಗಳು ಹಗಲಿರುಳು ಕಾಲೇಜಿನ ಶ್ರೆಯೋಭಿವ?ದ್ದಿಗೆ ಶ್ರಮಿಸಿದ್ದಾರೆ ಎಂದು ಶ್ಲಾಘಿಸಿದರು. ರೆಡ್ ಕ್ರಾಸ್ ಕೊಡಗು ಶಾಖೆಯು ಇದೀಗ ಮೆಡಿಕಲ್ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಮೂಲಕ ವಿದ್ಯಾಥಿ9ಗಳಿಗೆ ಸಾಮಾಜಿಕ ಚಟುವಟಿಕೆಗಳ ಬಗ್ಗೆ ಹೆಚ್ಚಿನ ತಿಳುವಳಿಕೆ ಮೂಡಿಸುವಲ್ಲಿ ಪ್ರಮುಖ ಪಾತ್ರ ವಹಿಸಲಿದೆ ಎಂದೂ ಮೇರಿ ನಾಣಯ್ಯ ಹಷ9 ವ್ಯಕ್ತಪಡಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ಗೌರವ ಕಾಯ9ದಶಿ9 ಎಚ್.ಆರ್. ಮುರಳೀಧರ್   ರೆಡ್ ಕ್ರಾಸ್ ಕಾಯ9ಚಟುವಟಿಕೆಗಳ ಬಗ್ಗೆ ವಿದ್ಯಾಥಿ9ಗಳಿಗೆ ಮಾಹಿತಿ ನೀಡಿದರು.
ಕಾಲೇಜಿನ ವಿದ್ಯಾಥಿ9ನಿ ಐಶ್ವಯ9  ಮಾತನಾಡಿ,  ರೆಡ್ ಕ್ರಾಸ್ ಸಂಸ್ಥೆ 1 ಬಿಲಿಯನ್ ಜನರಿಗೆ ಈವರೆಗೆ ಜಗತ್ತಿನಾದ್ಯಂತ ನೆರವು ನೀಡಿದ್ದು, ವಾತ್ಸಲ್ಯದೊಂದಿಗೆ ಆರೈಕೆಯ ಧ್ಯೇಯ ಹೊಂದಿದ ಜನಪರ ಕಾಳಜಿಯ ಸಂಘಟನೆ ಇದಾಗಿದೆ ಎಂದರು. ಯೂತ್ ರೆಡ್ ಕ್ರಾಸ್ ಮೂಲಕ ಯುವಪೀಳಿಗೆ ರಕ್ತದಾನ, ಆರೋಗ್ಯ ಶಿಬಿರಗಳಲ್ಲಿ ಸಕ್ರಿಯವಾಗಿ ಪಾಲ್ಗೊಳ್ಳುವ ಅಗತ್ಯವಿದೆ ಎಂದೂ ಐಶ್ವಯ9 ಅಭಿಪ್ರಾಯ ವ್ಯಕ್ತಪಡಿಸಿದರು.
ರೆಡ್ ಕ್ರಾಸ್ ಸಂಸ್ಥೆಯ ನಿದೇ9ಶಕಿ, ವೈದ್ಯಕೀಯ ಕಾಲೇಜಿನ ಸಹಾಯಕ ಪೆÇ್ರಫೆಸರ್ ಡಾ.ವೀಣಾ ಸ್ವಾಗತಿಸಿ, ರೆಡ್ ಕ್ರಾಸ್ ಸಂಸ್ಥೆಯ ಉಪಾಧ್ಯಕ್ಷ ಅನಿಲ್ ಎಚ್.ಟಿ. ನಿರೂಪಿಸಿ, ವೈದ್ಯಕೀಯ ವಿದ್ಯಾಥಿ9ನಿಯರಾದ ಪ್ರೇರಣಾ, ಶರಣ್ಯ ಪ್ರಾಥಿ9ಸಿದ ಕಾಯ9ಕ್ರಮದ ವೇದಿಕೆಯಲ್ಲಿ ಯೂತ್ ರೆಡ್ ಕ್ರಾಸ್ ಸಂಸ್ಥೆಯ ನಿದೇ9ಶಕ ಎಂ.ಧನಂಜಯ್, ರೆಡ್ ಕ್ರಾಸ್ ಉಪಾಧ್ಯಕ್ಷ ಜೋಸೇಫ್ ಸ್ಯಾಮ್,  ಜಂಟಿ ಕಾಯ9ದಶಿ9 ದಶ9ನ್, ರೆಡ್ ಕ್ರಾಸ್   ಜಿಲ್ಲಾ ನಿದೇ9ಶಕರಾದ ಕೆ.ಡಿ.ದಯಾನಂದ್, ಪಿ.ಆರ್.ರಾಜೇಶ್, ಯೂತ್ ರೆಡ್ ಕ್ರಾಸ್ ನ ವಿದ್ಯಾಥಿ9ನಿ ವಂದನಾ  ಉಪಸ್ಥಿತರಿದ್ದರು.  

No comments

Post a Comment