ಸ್ವಸ್ಥದಲ್ಲಿ ನೋಂದಣಿ ಆರಂಭ:ಮಳೆಹಾನಿ ಗ್ರಾಮಗಳ ಮಕ್ಕಳಿಗೆ ಆದ್ಯತೆ

No comments


ಮಡಿಕೇರಿ ಮೇ 10 :
ಕೊಡಗು ಜಿಲ್ಲೆಯಲ್ಲಿ ಅತಿ ಹೆಚ್ಚು ವಿಕಲಚೇತನ ಮಕ್ಕಳಿಗೆ ವಿಶೇಷ ಶಿಕ್ಷಣ ಮತ್ತು ಪುನರ್ವಸತಿ ಕಲ್ಪಿಸುತ್ತಿರುವ ಟಾಟಾಕಾಫಿ ಸಂಸ್ಥೆಯ “ದ ಕೂರ್ಗ್ ಫೌಂಡೇಷನ್” ನ ಸ್ವಸ್ಥ ಶಾಲೆಯಲ್ಲಿ ಜಿಲ್ಲೆಯ ವಿಶೇಷ ಮಕ್ಕಳಿಗಾಗಿ ನೋಂದಣಿ ಪ್ರಕ್ರಿಯೆ ಆರಂಭಗೊಂಡಿದೆ.
8 ರಿಂದ 18 ವರ್ಷದೊಳಗಿನ ಅರ್ಹ ವಿಶೇಷ ಮಕ್ಕಳು ತಮ್ಮ ಹೆಸರುನ್ನು ನೋಂದಾಯಿಸಿಕೊಳ್ಳಬಹುದಾಗಿದೆ. ವಿಶೇಷವಾಗಿ ಪ್ರಕೃತಿ ವಿಕೋಪದಿಂದ ಹಾನಿ ಸಂಭವಿಸಿರುವ ಭಾಗಮಂಡಲ, ಗಾಳಿಬೀಡು, ಕಾಲೂರು, ಮೊಣ್ಣಂಗೇರಿ, ಹಾಲೇರಿ, ಮದೆನಾಡು, ಮಕ್ಕಂದೂರು, ಮಾದಾಪುರ, ಮಡಿಕೇರಿ ಹಾಗೂ ಸೋಮವಾರಪೇಟೆ ವ್ಯಾಪ್ತಿಯ ಮಕ್ಕಳಿಗೆ ಮೊದಲ ಆದ್ಯತೆ ನೀಡಲಾಗುವುದೆಂದು ಸಂಸ್ಥೆಯ ನಿರ್ದೇಶಕರು ಪತ್ರಿಕಾ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ : 08276 262502, 08274 251405, 87623 03554 

No comments

Post a Comment