ಸಚಿವ ಡಿಕೆಶಿ ಕಾಲಿಗೆ ಬಿದ್ದ ಸಂಸದ ಪ್ರತಾಪ್ ಸಿಂಹ

No comments

ಬೆಂಗಳೂರು: ರಾಜಕೀಯದಲ್ಲಿ ಯಾರೂ ಶಾಶ್ವತ ಮಿತ್ರರಲ್ಲ, ಶತ್ರಗಳೂ ಅಲ್ಲ ಎನ್ನುವ ಮಾತಿನಂತೆ ಬಿಜೆಪಿ ಸಂಸದ ಪ್ರತಾಪ್‌ ಸಿಂಹ ಸಚಿವಡಿ.ಕೆ.ಶಿವಕುಮಾರ್‌ ಅವರ ಕಾಲಿಗೆ ಬಿದ್ದು ಹೊಸ ಚರ್ಚೆ ಆರಂಭವಾಗಲು ಕಾರಣವಾಗಿದ್ದಾರೆ.
ಇಂದು ಬುಧವಾರ ಮಾಜಿ ಮುಖ್ಯಮಂತ್ರಿ , ಬಿಜೆಪಿ ನಾಯಕರ ಎಸ್‌.ಎಂ.ಕೃಷ್ಣ ಅವರ 88 ನೇ ಜನ್ಮದಿನಾಚರಣೆಯ ನಿಮಿತ್ತ ಅವರ ನಿವಾಸಕ್ಕೆ ಉಭಯ ನಾಯಕರು ಶುಭ ಕೋರಲು ಆಗಮಿಸಿದ್ದರು.ಶಿವಕುಮಾರ್‌ ಅವರನ್ನು ಮನೆ ಬಾಗಿಲಿನಲ್ಲಿ ಕಂಡೋಡನೆಯೇ ನಗುನಗುತ್ತಾ ತೆರಳಿದ ಪ್ರತಾಪ್‌ ಸಿಂಹ ಕಾಲಿಗೆ ಬಿದ್ದಿದ್ದಾರೆ. ಶಿವಕುಮಾರ್‌ ಅವರೂ ನಗುನಗುತ್ತಾ ಪ್ರತಾಪ್‌ ಸಿಂಹ ಬೆನ್ನು ತಟ್ಟಿ ಆಶೀರ್ವದಿಸಿದ್ದಾರೆ.

No comments

Post a Comment