ಲಾಹೋರ್: ಪಾಕಿಸ್ಥಾನದ ಮಾಜಿ ಕ್ರಿಕೆಟಿಗ ಶಾಹಿದ್ ಅಫ್ರಿದಿ “ಆಲ್ ಟೈಮ್ ವರ್ಲ್ಡ್ಕಪ್’ ತಂಡವೊಂದನ್ನು ಪ್ರಕಟಿಸಿದ್ದು, ಇದರಲ್ಲಿ 5 ಮಂದಿ ಪಾಕಿಸ್ಥಾನದವರೇ ತುಂಬಿಕೊಂಡಿದ್ದಾರೆ.ಕ್ರಿಕೆಟ್ ದಂತಕತೆ ಸಚಿನ್ ತೆಂಡುಲ್ಕರ್, ಮಹೇಂದ್ರ ಸಿಂಗ್ ಧೋನಿ ಈ ತಂಡದಲ್ಲಿಲ್ಲದಿರುವುದು ಅಚ್ಚರಿ. ಹಾಗೆಯೇ ಪಾಕಿಸ್ಥಾನಕ್ಕೆ ಮೊದಲ ಹಾಗೂ ಏಕೈಕ ವಿಶ್ವಕಪ್ ತಂದಿತ್ತ ಇಮ್ರಾನ್ ಖಾನ್ ಅವರನ್ನೂ ಕಡೆಗಣಿಸಲಾಗಿದೆ. ಸಚಿನ್ 6 ವಿಶ್ವಕಪ್ ಪಂದ್ಯಾವಳಿಯಲ್ಲಿ 44 ಇನ್ನಿಂಗ್ಸ್ ಗಳಿಂದ 2,278 ರನ್ ಪೇರಿಸಿದ್ದಾರೆ. ಇದರಲ್ಲಿ 6 ಶತಕ, 16 ಅರ್ಧ ಶತಕ ಸೇರಿದೆ.
ಧೋನಿ ಭಾರತಕ್ಕೆ 2ನೇ ಸಲ ವಿಶ್ವಕಪ್ ತಂದಿತ್ತ ತಂಡದ ಕಪ್ತಾನನಾಗಿದ್ದರು. ಇಮ್ರಾನ್ ಖಾನ್ 1992ರ ವಿಶ್ವಕಪ್‌ನಲ್ಲಿ ಪಾಕಿಸ್ಥಾನವನ್ನು ಚಾಂಪಿಯನ್ ಪಟ್ಟಕ್ಕೇರಿಸಿದ್ದರು.
No comments
Post a Comment