ಕೋಲಾರ, ಮೇ 23: ಕಾಂಗ್ರೆಸ್ ಅತಿ ಭದ್ರ ಕೋಟೆ ಆಗಿದ್ದ ಕೋಲಾರ ಲೋಕಸಭಾ ಕ್ಷೇತ್ರದಲ್ಲಿ ಅಚ್ಚರಿಯ ರೀತಿಯಲ್ಲಿ ಬಿಜೆಪಿ ಮುನ್ನಡೆ ಸಾಧಿಸಿದೆ.
ಅಂಚೆ ಮತ ಹಾಗೂ ಮೊದಲನೇ ಹಂತದ ಮತ ಎಣಿಕೆ ಮುಗಿವ ವೇಳೆಗೆ ಕೋಲಾರದ ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅವರು ತಮ್ಮ ಎದುರಾಳಿ ಕಾಂಗ್ರೆಸ್‌ನ ಕೆ.ಎಚ್.ಮುನಿಯಪ್ಪ ಅವರಿಗಿಂತಲೂ 4000 ಮತಗಳ ಮುನ್ನಡೆ ಸಾಧಿಸಿದ್ದಾರೆ.
ಸತತ ಏಳು ಬಾರಿ ಸಂಸದರಾಗಿ ಆಯ್ಕೆ ಆಗಿದ್ದ ಕೆ.ಎಚ್.ಮುನಿಯಪ್ಪ ಅವರು ಇದೇ ಮೊದಲ ಬಾರಿಗೆ ಹಿನ್ನಡೆ ಅನುಭವಿಸುತ್ತಿದ್ದಿಂತಿದೆ.
ಕಳೆದ ಲೋಕಸಭೆ ಚುನಾವಣೆಯಲ್ಲಿ ಠೇವಣಿ ಕಳೆದುಕೊಂಡಿದ್ದ ಬಿಜೆಪಿ ಈ ಬಾರಿ ಮುನ್ನಡೆಯನ್ನು ಸಾಧಿಸಿರುವುದು ಗೆಲುವಿನ ಆಸೆಯನ್ನು ಹೆಚ್ಚಿಸಿದೆ.ಬಿಜೆಪಿಯ ಎಸ್.ಮುನಿಯಪ್ಪಗೆ 60,000 ಅಂತರದ ಭಾರಿ ಮುನ್ನಡೆ. ಕೋಲಾರದಲ್ಲಿ ಮೊದಲ ಜಯದತ್ತ ಬಿಜೆಪಿ.
ಕೋಲಾರದಲ್ಲಿ 11 ಗಂಟೆ ವೇಳೆಗೆ ಬಿಜೆಪಿ ಭಾರಿ ಮುನ್ನಡೆ ಸಾಧಿಸಿದ್ದು, ಬಿಜೆಪಿ ಅಭ್ಯರ್ಥಿ ಎಸ್.ಮುನಿಸ್ವಾಮಿ ಅವರು 1.10 ಲಕ್ಷ ಮತಗಳಿಂದ ಮುಂದಿದ್ದಾರೆ. ಏಳು ಬಾರಿ ಸಂಸದರಾಗಿದ್ದ ಕೆ.ಎಚ್.ಮುನಿಯಪ್ಪ ಅವರಿಗೆ ಸೋಲುವ ಭೀತಿ ಎದುರಾಗಿದೆ.ಉ

No comments
Post a Comment