ಬಿಜೆಪಿಯವರು ಹಗಲು ಕನಸು ಕಾಣುತ್ತಿರಲಿ : ಎಚ್ ವಿಶ್ವನಾಥ್

No comments

ಲೋಕಸಭೆ ಮತದಾನೋತ್ತರ ಸಮೀಕ್ಷೆ ಹಿನ್ನೆಲೆಯಲ್ಲಿ ಬಿಜೆಪಿಯವರು ಹಗಲು ಕನಸು ಕಾಣುತ್ತಿದ್ದಾರೆ ಎಂದು ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ವಿಶ್ವನಾಥ್ ಟೀಕಿಸಿದ್ದಾರೆ. ಬಿಜೆಪಿಯವರು ಎಲ್ಲಾ ರೀತಿಯ ಕನಸುಗಳನ್ನು ಕಾಣಬಹುದು. ನಮ್ಮದೇನೂ ಅಭ್ಯಂತರವಿಲ್ಲ. ಇನ್ನು ಮೂರು ದಿನದಲ್ಲಿ ಮತದಾರರ ತೀರ್ಪು ಹೊರಬರಲಿದೆ. ಆಗ ಎಲ್ಲವೂ ಗೊತ್ತಾಗಲಿದೆ ಎಂದರು.
ಈ ಹಿಂದೆಯೂ ಸಮೀಕ್ಷೆಗಳು ನಡೆದಿದ್ದವು. ಆ ಸಮೀಕ್ಷೆಗಳ ವಾಸ್ತವಿಕತೆ ಏನಾಗಿತ್ತೆಂಬುದು ನಮ್ಮ ಮುಂದಿದೆ. ಪ್ರಸಕ್ತ ಲೋಕಸಭಾ ಚುನಾವಣೆಯಲ್ಲಿ ಮತದಾರರು ಯಾರ ವಿರುದ್ಧ ಇದ್ದರು ಎಂಬುದನ್ನು ಹೇಳುವುದು ಕಷ್ಟ. ಕೇಂದ್ರದಲ್ಲಿ ಬಿಜೆಪಿ ನೇತೃತ್ವದ ಸರ್ಕಾರ, ರಾಜ್ಯದಲ್ಲಿ ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರ ಆಡಳಿತ ನಡೆಸುತ್ತಿವೆ.ಮತದಾರರು ಈ ಎರಡೂ ಸರ್ಕಾರಗಳ ಆಡಳಿತವನ್ನು ಪರಿಗಣನೆಗೆ ತೆಗೆದುಕೊಂಡಿದ್ದಾರೆ ಎಂದರು.ಮತದಾನದ ದಿನದಂದು ಮತದಾರರು ಗುಂಪುಗುಂಪಾಗಿ ಸರತಿ ಸಾಲಿನಲ್ಲಿ ನಿಂತು ಉತ್ಸಾಹದಿಂದ ಮತ ಚಲಾವಣೆ ಮಾಡಿದ್ದಾರೆ. ಯಾರ ಪರವಾಗಿ, ಯಾರ ವಿರುದ್ಧವಾಗಿ ಮತ ಚಲಾಯಿಸಿದ್ದಾರೆ ಎಂಬುದು ನಿಗೂಢವಾಗಿದೆ.ಕಾಂಗ್ರೆಸ್-ಜೆಡಿಎಸ್ ಮೈತ್ರಿಗೆ ಲೋಕಸಭೆ ಚುನಾವಣೆಯಲ್ಲಿ ನಿರೀಕ್ಷಿತ ಫಲಿತಾಂಶ ದೊರೆಯಲಿದೆ ಎಂಬುದನ್ನು ನಿರ್ದಿಷ್ಟವಾಗಿ ಹೇಳಲಾಗದು ಎಂದು ಹೇಳಿದರು.

No comments

Post a Comment