ರೋಮನ್ ಕ್ಯಾಥೋಲಿಕ್ ಕ್ರಿಕೆಟ್ ಪಂದ್ಯಾವಳಿ ಮುಂದೂಡಿಕೆ:ಜೂನ್ .೧ ಮತ್ತು ೨ ರಂದು ಮಡಿಕೇರಿಯಲ್ಲಿ ಕ್ರೀಡಾಕೂಟ

No comments

ಮಡಿಕೇರಿ ಮೇ 15 :
ಕೊಡಗು ಜಿಲ್ಲಾ ರೋಮನ್ ಕ್ಯಾಥೋಲಿಕ್ ಅಸೋಸಿಯೇಷನ್ ವತಿಯಿಂದ ಮೇ 18 ಮತ್ತು 19ರಂದು ನಡೆಯಬೇಕಾಗಿದ್ದ 8ನೇ ವರ್ಷದ ಕೊಡಗು ಜಿಲ್ಲಾ ಮಟ್ಟದ ರೋಮನ್ ಕ್ಯಾಥೋಲಿಕ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿ-2019ನ್ನು ಜೂ.1 ಮತ್ತು 2 ಕ್ಕೆ ಮುಂದೂಡಲಾಗಿದೆ.
ಕುಶಾಲನಗರದ ಮಿಸ್ಟ್ ಪ್ಲವರ್ ರೆಸಿಡೆನ್ಸಿ ಸಭಾಂಗಣದಲ್ಲಿ ಅಸೋಸಿಯೇಷನ್‍ನ ಅಧ್ಯಕ್ಷ ಜೊಸೇಫ್ ಸ್ಯಾಂ ಅವರ ಅಧ್ಯಕ್ಷತೆಯಲ್ಲಿ ನಡೆದ ತುರ್ತು ಸಭೆಯ ತೀರ್ಮಾನದಂತೆ ರೋಮನ್ ಕ್ಯಾಥೋಲಿಕ್ ಕ್ರಿಷನ್ ಕ್ರಿಕೆಟ್ ಪಂದ್ಯಾವಳಿಯನ್ನು ಕಾರಣಾಂತರಗಳಿಂದ ಜೂ.1 ಹಾಗೂ 2 ಕ್ಕೆ ಮುಂದೂಡಲಾಯಿತು. ಮಡಿಕೇರಿಯ ಜಿಲ್ಲಾ ಕ್ರೀಡಾಂಗಣದಲ್ಲಿ ಪಂದ್ಯಾವಳಿಯನ್ನು ನಡೆಸಲು ನಿರ್ಧರಿಸಲಾಯಿತು.
ಇದರೊಂದಿಗೆ ಜೂ.2 ರಂದು ಮಹಿಳೆಯರು ಹಾಗೂ ಮಕ್ಕಳಿಗೂ ವಿವಿಧ ಸ್ಪರ್ಧೆಗಳು ನಡೆಯಲಿವೆ. ಅಂದು ಸಂಜೆ 4 ಗಂಟೆಗೆ ನಡೆಯಲಿರುವ  ಸಮಾರೋಪ ಸಮಾರಂಭದಲ್ಲಿ  ಸಹಾಯರ್ಥ ಲಕ್ಕಿಡಿಪ್‍ನ್ನು ಡ್ರಾ ಮಾಡಲಾಗುವುದು ಎಂದು ಅಸೋಸಿಯೇಷನ್‍ನ ಪ್ರಧಾನ ಕಾರ್ಯದರ್ಶಿ ಜಾನ್ಸ್‍ನ್ ಪಿಂಟೋ ತಿಳಿಸಿದರು.
ಖಜಾಂಚಿ ಐ.ಡಿ. ರಾಯ್, ಸಂಚಾಲಕÀ ಜೋಕಿಮ್ ರಾರ್ಡಿಗಸ್, ಪ್ರಮುಖರಾದ ವಿನ್ಸಿ ಡಿಸೋಜ, ಎ.ಜಿ.ಯಶೋಧ, ಡೆನ್ನಿ ಬರೋಸ್, ಎಸ್.ಎಮ್ ಡಿಸಿಲ್ವ, ಗ್ರೇಸ್ಸಿ, ಬಿ.ಎಸ್. ಸಂತಪ್ಪ, ಫಿಲಿಪ್ ವಾಸ್, ಅಂತೋಣಿ ಡಿಸೋಜ, ವಿ.ಎ ಲರೆನ್ಸ್, ರಾಯ್ ಸಬಾಸ್ಟಿನ್, ಕೆ.ಎ.ಪೀಟರ್ ಮತ್ತಿತರ  ಪ್ರಮುಖರು ಸಭೆಯಲ್ಲಿ ಹಾಜರಿದ್ದರು.
ಕ್ರೀಡಾಕೂಟದಲ್ಲಿ ಪಾಲ್ಗೊಳ್ಳುವವರು ಹೆಚ್ಚಿನ ಮಾಹಿತಿಗಾಗಿ 94480 00436, 94497 67492, 99800 60342, 94482 78216ನ್ನು ಸಂಪರ್ಕಿಸಬಹುದಾಗಿದೆ.

No comments

Post a Comment