ಮಡಿಕೇರಿ : ನಗರದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಬಳಿ ಇರುವ 19ನೇ ಕರ್ನಾಟಕ ಬೆಟಾಲಿಯನ್ ಎನ್‍ಸಿಸಿ ನವೀಕರಣಗೊಂಡ ಕಟ್ಟಡ ಉದ್ಘಾಟನಾ ಕಾರ್ಯಕ್ರಮವು ಮೇ, 16 ರಂದು ಬೆಳಗ್ಗೆ 10.30 ಗಂಟೆಗೆ ನಡೆಯಲಿದೆ. ನವದೆಹಲಿಯ ಎನ್‍ಸಿಸಿ ಯ ಡೈರೆಕ್ಟರ್ ಜನರಲ್ ಆದ ಲೆಪ್ಟಿನೆಂಟ್ ಜನರಲ್ ರಾಜೀವ್ ಛೋಪ್ರ ಎವಿಎಸ್‍ಎಂ ಅವರು ಉದ್ಘಾಟಿಸಲಿದ್ದಾರೆ.
1954ರಲ್ಲಿ ಮಡಿಕೇರಿಯಲ್ಲಿ ಆರಂಭಗೊಂಡ ಎನ್‍ಸಿಸಿಯು ಹಳೇ ಕಟ್ಟಡದಲ್ಲಿ ಕಾರ್ಯನಿರ್ವಹಿಸುತ್ತಿದ್ದು, ಕಳೆದ ವರ್ಷ ಸಂಭವಿಸಿದ ಪ್ರಕೃತಿ ವಿಕೋಪದಿಂದ ಇನ್ನಷ್ಟು ಹಾನಿಗೊಂಡಿದ್ದು, ಇದರ ದುರಸ್ತಿ ಕಾರ್ಯವನ್ನು 36 ಲಕ್ಷ ರೂ. ವೆಚ್ಚದಲ್ಲಿ ಕರ್ನಾಟಕ, ಗೋವ ಡೈರೆಕ್ಟರೇಟ್‍ನ ಡೆಪ್ಯೂಟಿ ಡೈರೆಕ್ಟರ್ ಜನರಲ್ ಆದ ಬ್ರಿಗೇಡಿಯರ್ ಪೂರ್ವಿನಾಥ್ ವಿಎಸ್‍ಎಂ ಹಾಗೂ 19ನೇ ಕರ್ನಾಟಕ ಬೆಟಾಲಿಯನ್, ಮಡಿಕೇರಿಯ ಕಮಾಂಡಿಂಗ್ ಆಫೀಸರ್ ಆದ ಕರ್ನಲ್ ವಿ.ಎಂ.ನಾಯಕ್ ಇವರ ಮುತುವರ್ಜಿಯಿಂದ ನವೀಕರಣಗೊಂಡಿದೆ.
No comments
Post a Comment