ಮಂಗಳೂರು ವಿಮಾನ ದುರಂತಕ್ಕೆ 9 ವರ್ಷಗಳು...

No comments

ಮಂಗಳೂರು : ಅದು ಮೇ 22 2010 .. ಮುಂಜಾನೆ 6:14 ರ ಸಮಯ... ದುಬೈಯಿಂದ ಮಂಗಳೂರಿಗೆ ಬರುತ್ತಿದ್ದ ಏರ್ ಇಂಡಿಯಾ ಎಕ್ಸ್‌ಪ್ರೆಸ್‌ ಪೈಲಟ್'ನ ಸಣ್ಣ ತಪ್ಪಿನಿಂದಾಗಿ ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಅಪಘಾತಗೀಡಾಗಿ 159 ಜೀವಗಳನ್ನು ಬಲಿತೆಗೆದುಕೊಂಡಿತ್ತು.. ದುಬೈಯಿಂದ ದೊಡ್ಡ ದೊಡ್ಡ ಕನಸುಗಳನ್ನು ಹೊತ್ತುಕೊಂಡು ತವರಿಗೆ ಮರಳುತ್ತಿದ್ದ ಕನಸು ನುಚ್ಚು ನೂರಾಯಿತ್ತು.. ಈಗಲೂ ಮ್ರತಪಟ್ಟ ಸಂಬಂಧಿಕರ ಕೆಲವು ಕುಟುಂಬಗಳು ಕಷ್ಟದ ಜೀವನ ನಡೆಸುತ್ತಿದ್ದಾರೆ.. ಈ ಘಟನೆಯನ್ನು ಎಂದಿಗೂ ಮರೆಯಲು ಸಾಧ್ಯವಿಲ್ಲ..
ಅಲ್ಲಿ ಕಮರಿ ಹೋದದ್ದು ಕೇವಲ ಮನುಷ್ಯ ಜೀವಗಳು ಮಾತ್ರವಾಗಿರಲಿಲ್ಲ.ಅದೆಷ್ಟೋ ಮನೆಯ ಆಧಾರ ಸ್ಥಂಭಗಳಾಗಿದ್ದವು.
ಅದೆಷ್ಟೋ ಸಹೋದರಿಯರ ಕಣ್ಣೀರ ಬದುಕಿಗೆ ಸಾಂತ್ವನಿಯಾಗಬೇಕಾಗಿದ್ದವರಾಗಿದ್ದರು..!!
ಘೋರ ದುರಂತವೊಂದು ನಡೆದು ನಾಳೆಗೆ ವರುಷಗಳು ಆರು ಉರುಳಿ ಹೋದರೂ ಇಂದಿಗೂ ಅದೆಷ್ಟೋ ಕುಟುಂಬಗಳು ಕಣ್ಣೀರ ಬದುಕನ್ನು ನಡೆಸುತ್ತಾ ಇದ್ದಾರೆ.ಅದೆಷ್ಟೋ ಮನೆಗಳಿಂದ ಇನ್ನೂ ಕೂಡ ಸೂತಕದ ಛಾಯೆ ಮಾಸಿಲ್ಲ..!!

No comments

Post a Comment