ಮೈತ್ರಿ ಕಾರ್ಯಾಲಯ ಉದ್ಘಾಟನೆ : ಕೊಡಗಿನ ಬೆಳೆಗಾರರ ಸಂಕಷ್ಟಕ್ಕೆ ಬಿಜೆಪಿ ಕಾರಣ : ಕಾಂಗ್ರೆಸ್ ಆರೋಪ
ಮಡಿಕೇರಿ ಏ.3 :
ಕೇಂದ್ರ ಸರ್ಕಾರದ ಆಮದು ನೀತಿಗಳಿಂದಾಗಿ ಕೊಡಗಿನ ಬೆಳೆಗಾರರು ಸಾಕಷ್ಟು ಕಷ್ಟನಷ್ಟಗಳನ್ನು ಅನುಭವಿಸುತ್ತಿದ್ದು, ಈ ಕ್ಷೇತ್ರವನ್ನು ಪ್ರತಿನಿಧಿಸಿದ ಲೋಕಸಭಾ ಸದಸ್ಯರು ಯಾವುದೇ ಸ್ಪಂದನೆಯನ್ನು ನೀಡಿಲ್ಲ. ಇದನ್ನು ಮನಗಾಣದೆ ಸಂಸದ ಪ್ರತಾಪ್‍ಸಿಂಹ ಅವರಿಗೆ ಮತ್ತೆ ಮತದಾನ ಮಾಡಿದ್ದೇ ಆದಲ್ಲಿ ಅಂತಹವರನ್ನು ಮನುಷ್ಯತ್ವ ಇಲ್ಲದವರೆಂದು ಪರಿಗಣಿಸಬೇಕಾಗುತ್ತದೆ ಎಂದು ಜಿಲ್ಲಾ ಕಾಂಗ್ರೆಸ್ ಸಮಿತಿ ಅಧ್ಯಕ್ಷ ಕೆ.ಕೆ.ಮಂಜುನಾಥ್ ಕುಮಾರ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ಗೋಣಿಕೊಪ್ಪದ ಬಸ್ ನಿಲ್ದಾಣದ ಬಳಿ ಇರುವ ಕಟ್ಟಡದಲ್ಲಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಪಕ್ಷದ ಜಂಟಿ ಚುನಾವಣಾ ಪ್ರಚಾರ ಕಾರ್ಯಾಲಯವನ್ನು 2 ಪಕ್ಷದ ಮುಖಂಡರ ಸಮ್ಮುಖದಲ್ಲಿ ಕೆ.ಕೆ.ಮಂಜುನಾಥ್ ಕುಮಾರ್ ಹಾಗೂ ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಚುನಾವಣೆ ಉಸ್ತುವಾರಿ ಹಾಗೂ ಕೆಪಿಸಿಸಿ ಸದಸ್ಯ ಟಿ.ಎಂ.ಶಾಹೀದ್ ಉದ್ಘಾಟಿಸಿದರು.
ನಂತರ ಮಾತನಾಡಿದ ಮಂಜುನಾಥ್ ಕುಮಾರ್ ವಿಯಟ್ನಾಂ ನಿಂದ ಕಾಳುಮೆಣಸು ಆಮದು ಮಾಡಿಕೊಳ್ಳುತ್ತಿರುವುದರಿಂದ ಕೊಡಗಿನ ಬೆಳೆಗಾರರ ಆದಾಯ ಸಂಪೂರ್ಣವಾಗಿ ಕುಸಿದಿದೆ. ಕಾಳುಮೆಣಿಸಿನ ಬೆಲೆ ಪ್ರತಿ ಕೆಜಿಗೆ 275 ರೂ.ಗಳಿಗೆ ಕುಸಿದಿದ್ದು, ಜಿಲ್ಲೆಯ ಬೆಳೆಗಾರರಿಗೆ ಶೇ.75 ರಷ್ಟು ಆದಾಯ ನಷ್ಟವಾಗುತ್ತಿದೆ. ತೋಟಗಳನ್ನು ಅಭಿವೃದ್ಧಿ ಪಡಿಸಲಾಗದೆ, ಬಂದ ಬೆಳೆಯನ್ನು ಸಕಾಲದಲ್ಲಿ ಕೊಯ್ದು ಮಾರಾಟ ಮಾಡಲಾಗದೆ ಬೆಳೆಗಾರ ಇಂದು ಕಣ್ಣೀರಿನಲ್ಲಿ ದಿನ ದೂಡುವಂತ್ತಾಗಿದೆ. ಈ ರೀತಿಯ ಕಷ್ಟದ ಪರಿಸ್ಥಿತಿಯಲ್ಲೂ ಸೂಕ್ತ ರೀತಿಯಲ್ಲಿ ಸ್ಪಂದಿಸದ ಸಂಸದ ಪ್ರತಾಪ್ ಸಿಂಹ ಅವರಿಗೆ ಮತ ನೀಡದೆ ತಮ್ಮ ಅಸಮಾಧಾನವನ್ನು ವ್ಯಕ್ತಪಡಿಸಲು ಕೊಡಗಿನ ಬೆಳೆಗಾರರಿಗೆ ಹಾಗೂ ರೈತರಿಗೆ ಇದು ಸಕಾಲವಾಗಿದೆ ಎಂದು ಹೇಳಿದರು.
ಇದನ್ನು ಮೀರಿ ಮತ್ತೆ ಪ್ರತಾಪ್‍ಸಿಂಹಗೆ ಮತ ನೀಡಿದ್ದೇ ಆದಲ್ಲಿ ಅದನ್ನು ಮನುಷ್ಯತ್ವ ಇಲ್ಲದ ಮತದಾನವೆಂದು ತಿಳಿದುಕೊಳ್ಳಬೇಕಾಗುತ್ತದೆ ಎಂದು ಮಂಜುನಾಥ್ ಕುಮಾರ್ ಅಭಿಪ್ರಾಯಪಟ್ಟರು.

::: ಪ್ಲಾಪ್ ಸಿನಿಮಾ :::
ಜನಸಾಮಾನ್ಯರಿಗೆ ಹಾಗೂ ಯುವಸಮೂಹಕ್ಕೆ ಉದ್ಯೋಗ, ಊಟ, ಬಟ್ಟೆಯನ್ನು ನೀಡದ ಪ್ರಧಾನಿ ಮೋದಿ ಅವರು ಕೇವಲ ಪ್ರಚಾರದ ಮೂಲಕ ಗಮನ ಸೆಳೆದಿದ್ದಾರೆ ಅಷ್ಟೆ. ಅವರ ಪ್ರಚಾರ ವೈಖರಿ ಸಿನಿಮಾಗಳು ಬಿಡುಗಡೆಯಾಗುವುದಕ್ಕೂ ಮೊದಲು ಮಾಡುವ ಪ್ರಚಾರದಂತ್ತಿದ್ದು, ಮೋದಿ ಅವರದ್ದು ಪ್ಲಾಪ್ ಸಿನಿಮಾ ಎಂದು ಮಂಜುನಾಥ್ ಕುಮಾರ್ ಟೀಕಿಸಿದರು.
ಸೇನಾ ಗೌಪ್ಯತೆಯನ್ನು ಕಾಯ್ದುಕೊಳ್ಳುವ ನಿಯಮವಿದ್ದರೂ ಬಿಜೆಪಿ ಸೈನಿಕರ ಹೆಸರಿನಲ್ಲಿ ರಾಜಕೀಯ ಮಾಡುತ್ತಿದೆ. ಹಿಂದೆ ಕಾಂಗ್ರೆಸ್ ನೇತೃತ್ವದ ಸಕಾರವಿದ್ದಾಗ ಸುಮಾರು 17 ಬಾರಿ ಸರ್ಜಿಕಲ್ ಸ್ಟ್ರೈಕ್ ನಡೆದಿದೆ. ಆದರೆ ಬಿಜೆಪಿ ನೇತೃತ್ವದ ಸರ್ಕಾರ ನಾವೇ ಸರ್ಜಿಕಲ್ ಸ್ಟ್ರೈಕ್ ಮಾಡಿದ್ದೆಂದು ಪ್ರತಿಬಿಂಬಿಸಿಕೊಳ್ಳುತ್ತಿದೆ. ಸೇನಾ ಗೌಪ್ಯತೆಯನ್ನು ಕಾಯ್ದುಕೊಳ್ಳದೆ ಇರುವುದರಿಂದ ಶತ್ರು ರಾಷ್ಟ್ರಗಳು ಎಚ್ಚೆತ್ತುಕೊಳ್ಳುವಂತ್ತಾಗಿದೆ ಎಂದು ಮಂಜುನಾಥ್ ಕುಮಾರ್ ಆರೋಪಿಸಿದರು.
ಕೊಡಗು ಜಿಲ್ಲೆಯನ್ನು ಸಂಕಷ್ಟಕ್ಕೆ ಸಿಲುಕಿಸಿದ ಬಿಜೆಪಿಗೆ ಮತದಾರರು ಈ ಬಾರಿ ತಕ್ಕ ಪಾಠ ಕಲಿಸಬೇಕೆಂದು ಕರೆ ನೀಡಿದರು.
ಕೆಪಿಸಿಸಿ ಸದಸ್ಯ ಟಿ.ಎಂ.ಶಾಹೀದ್ ಮಾತನಾಡಿ ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿ ವಿಜಯಶಂಕರ್ ಅವರ ಗೆಲುವು ಖಚಿತವೆಂದು ವಿಶ್ವಾಸ ವ್ಯಕ್ತಪಡಿಸಿದರು.
ಕೆಪಿಸಿಸಿ ಕಾರ್ಯದರ್ಶಿ ಸಿ.ಎಸ್.ಅರುಣ್ ಮಾಚಯ್ಯ, ಪೆÇನ್ನಂಪೇಟೆ ಬ್ಲಾಕ್ ಅಧ್ಯಕ್ಷ ಧರ್ಮಜ ಉತ್ತಪ್ಪ, ಜಿ.ಪಂ ಸದಸ್ಯೆ ಪಂಕಜ, ತಾ.ಪಂ. ಸದಸ್ಯೆ ಆಶಾ ಜೇಮ್ಸ್, ಜಿಲ್ಲಾ ಕಾಂಗ್ರೆಸ್ ವಕ್ತಾರರಾದ ಟಾಟು ಮೊಣ್ಣಪ್ಪ, ಟಿ.ಇ.ಸುರೇಶ್, ವಿರಾಜಪೇಟೆ ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ಜಮ್ಮಡ ಸೋಮಣ್ಣ, ಗೋಣಿಕೊಪ್ಪ ಅಧ್ಯಕ್ಷ ಪ್ರಮೋದ್ ಗಣಪತಿ, ಅಲ್ಪಸಂಖ್ಯಾತ ಘಟಕದ ಅಧ್ಯಕ್ಷ ಬಾಪು, ಜಿಲ್ಲಾ ಯುವ ಕಾಂಗ್ರೆಸ್ ಉಪಾಧ್ಯಕ್ಷ ಸರ್ಫುದ್ದಿನ್, ಯುವ ಕಾಂಗ್ರೆಸ್ ವಲಯಾಧ್ಯಕ್ಷ ಕರ್ತಂಡ ಸೋಮಣ್ಣ, ಗೋಣಿಕೊಪ್ಪ ಜೆಡಿಎಸ್ ಮುಖಂಡರಾದ ಕಾರ್ಯಪ್ಪ, ಮನೆಯಪಂಡ ಬೆಳ್ಯಪ್ಪ ಹಾಗೂ ಎರಡು ಪಕ್ಷದ ಮುಂಚೂಣಿ ಘಟಕಗಳ ಅಧ್ಯಕ್ಷರು, ಕಾರ್ಯದರ್ಶಿಗಳು ಮತ್ತು ಕಾರ್ಯಕರ್ತರು ಉಪಸ್ಥಿತರಿದ್ದರು.

No comments
Post a Comment