ಬಿಜೆಪಿಗೆ ಮತ ನೀಡಿದರೆ ಮೂರ್ಖರಾದಂತೆ:,ಕೊಡಗು ಜೆಡಿಎಸ್.

No comments

ಬಿಜೆಪಿಗೆ ಮತ ನೀಡಿದರೆ ಮೂರ್ಖರಾದಂತೆ : ಕೊಡಗು ಜೆಡಿಎಸ್ ಪ್ರತಿಪಾದನೆ
ಮಡಿಕೇರಿ ಏ.3 :
ರಾಜ್ಯದ ಮುಖ್ಯಮಂತ್ರಿ ಸ್ಥಾನಕ್ಕೆ ಅಗೌರವ ತೋರುವ ರೀತಿಯಲ್ಲಿ ಬಿಜೆಪಿ ಮುಖಂಡ ಕೆ.ಎಸ್.ಈಶ್ವರಪ್ಪ ಅವರು ಸಿಎಂ ಹೆಚ್.ಡಿ.ಕುಮಾರಸ್ವಾಮಿ ಅವರ ವಿರುದ್ಧ ಅವಹೇಳನಾಕಾರಿ ಹೇಳಿಕೆ ನೀಡುತ್ತಿದ್ದಾರೆ ಎಂದು ಆರೋಪಿಸಿರುವ ಜಾತ್ಯತೀತ ಜನತಾದಳದ ಜಿಲ್ಲಾಧ್ಯಕ್ಷ ಕೆ.ಎಂ.ಗಣೇಶ್, ಈಶ್ವರಪ್ಪ ಅವರ ನಡೆಯನ್ನು ಖಂಡಿಸುವುದಾಗಿ ತಿಳಿಸಿದ್ದಾರೆ.
ಪತ್ರಿಕಾ ಹೇಳಿಕೆ ನೀಡಿರುವ ಅವರು ಬಿಜೆಪಿ ಮುಖಂಡರುಗಳು ಇನ್ನೊಬ್ಬರ ನಾಶವನ್ನೇ ಬಯಸುವವರಾಗಿದ್ದು, ಆ ಮೂಲಕ ಅಧಿಕಾರ ಅನುಭವಿಸುವ ಚಾಳಿಯನ್ನು ಅಂಟಿಸಿಕೊಂಡವರಾಗಿದ್ದಾರೆ ಎಂದು ಆರೋಪಿಸಿದ್ದಾರೆ. ಕಳೆದ ಐದು ವರ್ಷಗಳಲ್ಲಿ ಪ್ರಧಾನಿ ನರೇಂದ್ರಮೋದಿ ಅವರು ಹೈಟೆಕ್ ಪ್ರಚಾರದಲ್ಲೇ ಕಾಲ ಕಳೆದಿದ್ದಾರೆ. ಜನಸಾಮಾನ್ಯರ ಸಮಸ್ಯೆಗಳಿಗೆ ಸ್ಪಂದಿಸದೆ ಬಂಡವಾಳಶಾಹಿಗಳ ಪರ ಕಾರ್ಯ ನಿರ್ವಹಿಸಿದ್ದಾರೆ.

No comments

Post a Comment