ಕೊಡಗಿನ ಯವಕಪಾಡಿ ಗ್ರಾಮದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷ : ಅಕ್ಕಿ ಮತ್ತು ಮೊಬೈಲ್ ಫೋನ್‌ನೊಂದಿಗೆ ಪರಾರಿ
ಮಡಿಕೇರಿ ಏ.25 :
ಕೊಡಗು ಜಿಲ್ಲೆಯ ಮಡಿಕೇರಿ ತಾಲ್ಲೂಕಿನ ಯವಕಪಾಡಿ ಗ್ರಾಮದ ತಡಿಯಂಡಮೋಳ್ ಬೆಟ್ಟ ಪ್ರದೇಶದಲ್ಲಿ ಶಂಕಿತ ನಕ್ಸಲರು ಪ್ರತ್ಯಕ್ಷರಾಗಿದ್ದಾರೆ. ಕೆಲವು ಗ್ರಾಮಸ್ಥರ ಮನೆಗೆ ನುಗ್ಗಿದ ಇಬ್ಬರು ಅಪರಿಚಿತರು ಅಕ್ಕಿ ಮತ್ತು ಮೊಬೈಲ್ ಫೋನ್‌ನೊಂದಿಗೆ ಪರಾರಿಯಾಗಿದ್ದಾರೆ.
ಬೆಳಗ್ಗೆ ೧೧.೩೦ ಗಂಟೆ ಸುಮಾರಿಗೆ ಸುಮಾರು ೩೦ ವರ್ಷ ಪ್ರಾಯದ ಓರ್ವ ಮಹಿಳೆ ಮತ್ತು ಓರ್ವ ಪುರುಷ ಯವಕಪಾಡಿಯ ಕುಟ್ಟಪ್ಪ ಹಾಗೂ ಅರುಣ ಎಂಬುವವರ ಮನೆಗೆ ನುಗ್ಗಿದ್ದಾರೆ. ಅರುಣ ಅವರ ಪತ್ನಿ ಅನಿತಾ ಎಂಬುವವರ ಬಳಿಯಿಂದ ಮೊಬೈಲ್‌ನ್ನು ಕಸಿದುಕೊಂಡ ಇಬ್ಬರು ಮತ್ತೊಂದು ಮನೆಗೆ ತೆರಳಿ ಅಕ್ಕಿ ಮತ್ತಿತರ ದಿನಸಿ ವಸ್ತುಗಳನ್ನು ಬಲವಂತವಾಗಿ ಪಡೆದು ಯಾರಿಗೂ ಮಾಹಿತಿ ನೀಡದಂತೆ ಬೆದರಿಕೆ ಹಾಕಿ ಕಾಡು ಪ್ರದೇಶದಲ್ಲಿ ಮರೆಯಾಗಿದ್ದಾರೆ ಎಂದು ಗ್ರಾಮಸ್ಥರು ತಿಳಿಸಿದ್ದಾರೆ.
ಸುತ್ತಮುತ್ತಲ ಗ್ರಾಮದಲ್ಲೂ ಆತಂಕದ ವಾತಾವರಣ ಮೂಡಿದ್ದು, ನಕ್ಸಲ್ ನಿಗ್ರಹ ದಳ ಮತ್ತು ಕೊಡಗು ಜಿಲ್ಲಾ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಿದ್ದಾರೆ. ಇಬ್ಬರು ಶಂಕಿತ ನಕ್ಸಲರು ಪರಾರಿಯಾದ ಮಾರ್ಗದಲ್ಲೇ ತೆರಳಿರುವ ಪೊಲೀಸರು ತೀವ್ರ ತಪಾಸಣೆ ನಡೆಸಿದ್ದಾರೆ.

No comments
Post a Comment