ಶಬರಿಮಲೆ ವಿವಾದ : ಹೆಚ್ಚಿದ ಮತದಾನ

No comments

ತಿರುವನಂತಪುರ: ಕೇರಳದ 20 ಲೋಕಸಭಾ ಕ್ಷೇತ್ರಗಳ ಮತದಾನ ಪ್ರಮಾಣದಲ್ಲಿ ಈ ಬಾರಿ ಸರಾಸರಿ ಶೇ 3.66ರಷ್ಟು ಏರಿಕೆಯಾಗಿದೆ. ವಿಶೇಷ ವೆಂದರೆ, ಶಬರಿಮಲೆ ದೇವಸ್ಥಾನ ಇರುವ ಪತ್ತನಂತಿಟ್ಟ ಕ್ಷೇತ್ರದಲ್ಲಿ ಮತದಾನ ಪ್ರಮಾಣವು ಗರಿಷ್ಠ ಶೇ 8ರಷ್ಟು ಮತ್ತು ರಾಹುಲ್‌ ಗಾಂಧಿ ಸ್ಪರ್ಧಿಸಿರುವ ವಯನಾಡ್‌ ಕ್ಷೇತ್ರದಲ್ಲಿ ಶೇ 7ರಷ್ಟು ಏರಿಕೆ ದಾಖಲಾಗಿದೆ.2014ರಲ್ಲಿ ಕೇರಳದ ಒಟ್ಟಾರೆ ಮತದಾನ ಪ್ರಮಾಣ ಶೇ 74.02 ಆಗಿದ್ದರೆ ಈ ಬಾರಿ ಅದು ಶೇ 77.68ಕ್ಕೆ ಏರಿಕೆಯಾಗಿದೆ. ಪತ್ತನಂತಿಟ್ಟ ಕ್ಷೇತ್ರವು 2009 ಮತ್ತು 2014ರ ಚುನಾವಣೆಯಲ್ಲಿ ಕೇರಳದಲ್ಲಿ ಕನಿಷ್ಠ ಮತದಾನ ದಾಖಲಾದ ಕ್ಷೇತ್ರವಾಗಿತ್ತು. ಶಬರಿಮಲೆ ದೇವಸ್ಥಾನಕ್ಕೆ ಎಲ್ಲ ವಯೋಮಾನದ ಮಹಿಳೆಯರಿಗೆ ಪ್ರವೇಶ ನೀಡುವ ವಿಚಾರವಾಗಿ ಉಂಟಾದ ವಿವಾದ ಈ ಬಾರಿ ಮತದಾನ ಪ್ರಮಾಣ ಹೆಚ್ಚಿಸುವಲ್ಲಿ ಪ್ರಮುಖ ‍ಪಾತ್ರ ವಹಿಸಿರುವುದು ಸ್ಪಷ್ಟವಾಗಿದೆ.

No comments

Post a Comment