ಅಭ್ಯರ್ಥಿಗಳ ಚಿತ್ತ ಮತರದಾರತ್ತ ಮತದಾರನ ಚಿತ್ತ ಯಾರತ್ತ? ಎಲ್ಲರ ಚಿತ್ತ ಮತಗಟ್ಟೆಯತ್ತ..

No comments

ವಿಶೇಷ ವರದಿ :  ಕೆ ಎಂ ಇಸ್ಮಾಯಿಲ್ ಕಂಡಕ್ಕರೆ
ಅಭ್ಯರ್ಥಿಗಳ ಚಿತ್ತ ಮತದಾರರತ್ತ ಮತದಾರನ ಚಿತ್ತ ಯಾರತ್ತ? ಎಲ್ಲರ ಚಿತ್ತ ಮತಗಟ್ಟೆಯತ್ತ...
ಇಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ.
೨೨ ಕಲಿಗಳ ಭವಿಷ್ಯ ಮತದಾರನ‌ ಕೈಯಲ್ಲಿ....
*ಕೆ.ಎಂ ಇಸ್ಮಾಯಿಲ್ ಕಂಡಕರೆ*
ಮಡಿಕೇರಿ: ಇಂದು ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದ ಚುನಾವಣೆ ಬೆಳಗ್ಗೆ ೭ ಗಂಟೆಯಿಂದ ಸಂಜೆ ೬ ಗಂಟೆಯವರೆಗೆ ನಡೆಯಲಿದೆ.
ಕ್ಷೇತ್ರದಲ್ಲಿ ೧೮,೯೫, ೦೫೬ ಮತದಾರರು ಕೊಡಗು-ಮೈಸೂರು ಕ್ಷೇತ್ರದ ಅಭ್ಯರ್ಥಿಗಳ ಭವಿಷ್ಯವನ್ನು ಇಂದು ನಿರ್ಧಾರ ಮಾಡಲಿದ್ದಾನೆ.
ರಾಜ್ಯದ ಲೋಕಸಭಾ ಕ್ಷೇತ್ರದಲ್ಲಿ ಬಾರೀ ಕುತೂಹಲ ಕೆರಳಿಸಿರುವ ಕೊಡಗು-ಮೈಸೂರು ಕ್ಷೇತ್ರದಲ್ಲಿ ಹಾಲಿ ಸಂಸದಸ ಬಿಜೆಪಿಯ ಪ್ರತಾಪ್ ಸಿಂಹ ಹಾಗೂ ಮೈತ್ರಿ ಅಭ್ಯರ್ಥಿಯಾಗಿ ಸ್ಪರ್ಧಿಸಿರುವ ಮಾಜಿ ಸಂಸದ ಸಿ.ಎಚ್ ವಿಜಯಶಂಕರ್ ಅವರ ನಡುವೆ ನೇರಾನೇರಾ ಹಣಾಹಣಿ ಏರ್ಪಟ್ಟಿದೆ.
ಬದಲಾದ ರಾಜಕೀಯ ಸನ್ನಿವೇಶದಲ್ಲಿ ರಾಜ್ಯದಲ್ಲಿ ಮೈತ್ರಿ ಮಾಡಿ ಸರ್ಕಾರ ನಡೆಸುತ್ತಿರುವ ಕಾಂಗ್ರೆಸ್ ಹಾಗೂ ಜೆಡಿಎಸ್ ಲೋಕಸಭಾ ಚುನಾವಣೆಯಲ್ಲಿ ಮೈತ್ರಿಯ ಮೂಲಕವೇ ತಮ್ಮ ಸಾಂಪ್ರದಾಯಿಕ ಎದುರಾಳಿ ಬಿಜೆಪಿಯ ನಾಗಲೋಟಕ್ಕೆ ಬ್ರೇಕ್ ಹಾಕಲು ಮುಂದಾಗಿದೆ.
ಮಾಜಿ ಸಿ.ಎಂ ಸಿದ್ದರಾಮಯ್ಯ ಪ್ರತಿಷ್ಠಿಗೆ ಬಿದ್ದು ಮೈಸೂರು ಕ್ಷೇತ್ರವನ್ನು ಉಳಿಸಿಕೊಳ್ಳುವಲ್ಲಿ ಯಶಸ್ವಿಯಾದರು.ಅದರ ಪರಿಣಾಮವಾಗಿ ಹಾಲಿ ಕಾಂಗ್ರೆಸ್ ಸಂಸದರಿರುವ ತುಮಕೂರು ಕ್ಷೇತ್ರವನ್ನು ಜೆಡಿಎಸ್ಗೆ ಬಿಟ್ಟುಕೊಡಬೇಕಾಯಿತು.
ಕೊಡಗು-ಮೈಸೂರು ಲೋಕಸಭಾ ಕ್ಷೇತ್ರದಲ್ಲಿನ ಎಂಟು ವಿಧಾನಸಭಾ ಕ್ಷೇತ್ರದಲ್ಲಿ ೪ ರಲ್ಲಿ ಬಿಜೆಪಿ ಹಾಗೂ ಮೂರಲ್ಲಿ ಜೆಡಿಎಸ್ ಹಾಗೂ ೧ ರಲ್ಲಿ ಕಾಂಗ್ರೆಸ್ ಶಾಸಕರಿದ್ದಾರೆ.
ಹಾವು-ಮುಂಗುಸಿಯಂತೆ ಹಳೆ ಮೈಸೂರು ಭಾಗದಲ್ಲಿ ಕಚ್ಚಾಡುತ್ತಿದ್ದ ಕಾಂಗ್ರೆಸ್ ಹಾಗೂ ಜೆಡಿಎಸ್ ಒಟ್ಟಿಗೆ ಚುನಾವಣೆಯನ್ನು ಎದುರಿಸುತ್ತಿದೆ.
ಜೆಡಿಎಸ್ ಪಕ್ಷ ಕೂಡ ಮೈಸೂರು-ಕೊಡಗು ಕ್ಷೇತ್ರ ತಮಗೆ ಬಿಟ್ಟು ಕೊಡಬೇಕೆಂದು ಹಠಕ್ಕೆ ಬಿದ್ದಿದ್ದರು.ಆದರೆ ಸಿದ್ದರಾಮಯ್ಯರವರು ಕಾಂಗ್ರೆಸ್ನ  ಸಿಚ್.ವಿ ವಿಜಯಶಂಕರ್ ಅವರಿಗೆ ಟಿಕೆಟ್ ಕೊಡಿಸುವಲ್ಲಿ ಯಶಸ್ವಿಯಾದರೂ.
ಕಾಂಗ್ರೆಸ್ ಹಾಗೂ ಜೆಡಿಎಸ್ ಪಕ್ಷಗಳು ಮೈತ್ರಿ ಅಭ್ಯರ್ಥಿ ಘೋಷಣೆಯಾದ ಬಳಿಕವೂ ಪರಸ್ಪರ ಕಚ್ಚಾಟ  ಮಾತಿನ ಮೂಲಕ ಉಭಯ ಪಕ್ಷಗಳ ನಾಯಕರು ವಾಗ್ವಾದಕ್ಕೆ ಇಳಿದಿದ್ದರು.
ನಂತರ ಎರಡು ಪಕ್ಷಗಳ ನಾಯಕರು ಜಂಟಿಯಾಗಿ ಕಳೆದ ಒಂದು ವಾರದಿಂದ ಪ್ರಚಾರ ಕಾರ್ಯದಲ್ಲಿ ತೊಡಗಿಕೊಂಡಿದ್ದಾರೆ.
ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ,ಜೆಡಿಎಸ್ ವರಿಷ್ಠ ದೇವೇಗೌಡ, ಸಿದ್ದರಾಮಯ್ಯ ,ಕುಮಾರಸ್ವಾಮಿ ಕೆ.ಆರ್ ನಗರದಲ್ಲಿ ದೊಡ್ಡ ಸಮಾವೇಶದ ಮೂಲಕ ತಮ್ಮ ಒಗ್ಗಟ್ಟು ಪ್ರದರ್ಶಿಸಿದರು.ಆದರೂ ಕೂಡಾ ಎರಡು ಪಕ್ಷಗಳ ನಾಯಕರಲ್ಲಿ ಒಮ್ಮತ ಮೂಡಿಲ್ಲ. ಜೆಡಿಎಸ್ ನಾಯಕರು ಕಾಂಗ್ರೆಸ್ ಅಭ್ಯರ್ಥಿಗೆ ಕೈಕೊಡುವ ಸಾಧ್ಯತೆಗಳು ಮೇಲ್ನೋಟಕ್ಕೆ ನಮಗೆ ಕಾಣಬಹುದು..
ಕಳೆದ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿಯಿಂದ ಕೊಡಗು-ಮೈಸೂರು ಕ್ಷೇತ್ರದಿಂದ ಅಚ್ಚರಿಯಾಗಿ ಈಗಿನ ಸಂಸದರಾದ ಪ್ರತಾಪ್ ಸಿಂಹ ಅವರು ಟಿಕೆಟ್ ಪಡೆದು , ಮೋದಿ ಅಲೆಯಲ್ಲಿ ರಾಜಕೀಯವನ್ನು ಅರೆದು ಕುಡಿದ ಎಚ್.ವಿಶ್ವನಾಥ್ ಅವರ ವಿರುದ್ಧ ಗೆದ್ದಿದ್ದರು.
ಕಳೆದ ಚುನಾವಣೆಯಲ್ಲಿ ಬಿಜೆಪಿಯಿಂದ ಹಲವರು ಆಕಾಂಕ್ಷಿಗಳು ಇದ್ದರು ಎಲ್ಲರನ್ನೂ ಅಚ್ಚರಿಪಡಿಸಿ ಪ್ರತಾಪ್ ಸಿಂಹ ಟಿಕೆಟ್ ‌ಪಡೆದು ಗೆದ್ದರು.
ಈ ಲೋಕಸಭಾ ಚುನಾವಣೆಯಲ್ಲಿ ಸ್ವಪಕ್ಷೀಯದವರಿಂದಲೇ ವಿರೋಧವಿದ್ದರು ಟಿಕೆಟ್ ಪಡೆಯುವಲ್ಲಿ ಹಾಲಿ ಸಂಸದ ಪ್ರತಾಪ್ ಸಿಂಹ ಯಶಸ್ವಿಯಾಗಿ ಮೈತ್ರಿ ಅಭ್ಯರ್ಥಿ ವಿರುದ್ಧ ತೊಡೆ ತಟ್ಟಿದ್ದಾರೆ.
ಕಳೆದ ಚುನಾವಣೆಯಲ್ಲಿ ಮೋದಿ ಅಲೆ ಸಿಂಹರನ್ನು ಕೈಹಿಡಿದಿತ್ತು.ಆದರೆ ಈಗ ಅಷ್ಟರ ಮಟ್ಟಿಗೆ ಮೋದಿ ಅಲೆ ಇಲ್ಲ.
ಮೋದಿಗೆ ಮತ ಹಾಕಿ ಎಂದು ಕ್ಷೇತ್ರದಲ್ಲಿ ಸಿಂಹ ಮತಯಾಚನೆ ಮಾಡಿದ್ದಾರೆ .ಅಲ್ಲದೇ ನಾನು ಮಾಡಿದ ಅಭಿವೃದ್ಧಿಯೇ ನನಗೆ ಗೆಲುವು ತಂದು ಕೊಡುತ್ತೆ ಎಂದು ಪ್ರತಾಪ್ ಸಿಂಹ ಹೇಳುತ್ತಿದ್ದಾರೆ‌.
ಕಾಂಗ್ರೆಸ್-ಜೆಡಿಎಸ್ ಮೈತ್ರಿ ಅಭ್ಯರ್ಥಿಯನ್ನು ಎದುರಿಸುವುದು ಪ್ರತಾಪ್ ಸಿಂಹಗೆ ದೊಡ್ಡ ಸವಾಲಾಗಿ ಪರಿಣಮಿಸಿದೆ.
ಕ್ಷೇತ್ರದಲ್ಲಿ ಅತೀ ಹೆಚ್ಚು ಒಕ್ಕಲಿಗ ಮತದಾರರಿದ್ದು ಬಿಜೆಪಿ ಅಭ್ಯರ್ಥಿ ಪ್ರತಾಪ್ ಸಿಂಹ ಅವರು ಒಕ್ಕಲಿಗರಾಗಿದ್ದಾರೆ.ಒಕ್ಕಲಿಗ ಮತದಾರರು ತಮ್ಮ ಕೈ ಹಿಡಿಯಲಿದ್ದಾರೆ ಎಂಬ ವಿಶ್ವಾಸದಲ್ಲಿದ್ದಾರೆ ಪ್ರತಾಪ್ ಸಿಂಹ.
ಮೋದಿ ಅಲೆ ಪ್ರತಾಪ್ ಸಿಂಹ ಕೈಹಿಡಿಯುತ್ತೋ? ಅಥವಾ ಮೈತ್ರಿ ಅಭ್ಯರ್ಥಿ ವಿಜಯಶಂಕರ್ಗೆ ಮತದಾರ ಒಲವು ತೋರುತ್ತಾನೋ? ಎಲ್ಲದಕ್ಕೂ ಇಂದು ನಡೆಯಲಿರುವ ಚುನಾವಣೆಯಲ್ಲಿ  ಮತದಾರ ಉತ್ತರ ಕೊಡಲಿದ್ದಾನೆ.
*ಬಾಕ್ಸ್*
ಕೊಡಗು ಜಿಲ್ಲೆಯ ಮತದಾರ ಸಂಖ್ಯೆ
ವಿರಾಜಪೇಟೆ:
ಮಹಿಳೆಯರು:೧,೦೯,೯೮೫ ಹಾಗೂ ೧,೦೯,೫೭೩
ಹಾಗೂ ಇತರರು ೧೫ ಸೇರಿ ಕ್ಷೇತ್ರದಲ್ಲಿ ಒಟ್ಟು ೨,೧೯,೫೭೩
ಮಡಿಕೇರಿ:
ಮಹಿಳೆಯರು: ೧,೧೧,೮೫೩, ಪುರುಷರು:೧,೦೯, ೨೯೪
ಹಾಗೂ ಇತರರು ಸೇರಿ ೨,೨೧, ೧೫೭ ಮತದಾರರು ಕ್ಷೇತ್ರದಲ್ಲಿದ್ದಾರೆ.
ಕೊಡಗು ಜಿಲ್ಲೆಯ ವಿರಾಜಪೇಟೆ ಹಾಗೂ ಮಡಿಕೇರಿ ಕ್ಷೇತ್ರದಲ್ಲಿ ಸೇರಿ ಜಿಲ್ಲೆಯಲ್ಲಿ ೪,೪೦,೭೩೦ ಮತದಾರರು ಇದ್ದಾರೆ.
ಒಟ್ಟು ಮತಗಟ್ಟೆ: ೫೪೩

No comments

Post a Comment